ಕನ್ನಡದ ಜೋಷ್ ನಟಿ ನಿತ್ಯಾ ಮೆನನ್ ಮದುವೆ ವಿಚಾರ ಇತ್ತೀಚೆಗೆ ಸಾಕಷ್ಟು ಸೌಂಡ್ ಮಾಡಿದ ಬಳಿಕ ನಿತ್ಯಾ ಈ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ..
ಪಾದದ ಗಾಯದಿಂದ ಚೇತರಿಸಿಕೊಂಡಿರುವ ನಟಿ Instagram ಗೆ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. “ನಾನು ಮದುವೆಯಾಗುವುದಿಲ್ಲ ಎಂದು ನೇರವಾಗಿ ಹೇಳಲು ನಾನು ಈ ಅವಕಾಶವನ್ನು ಬಳಸುತ್ತೇನೆ. ಇದು ಒಂದು ದೊಡ್ಡ ಸಂತೋಷದ ಕಥೆಯಾಗಿದೆ. ಆದ್ರೆ ಮದುವೆಯ ಯಾವುದೇ ಯಾವುದೇ ಯೋಜನೆಗಳಿಲ್ಲ. ಯಾರೋ ಹಬ್ಬಿಸಿರುವ ವದಂತಿಗಳಷ್ಟೇ” ಎಂದು ಸ್ಪಷ್ಟಪಡಿಸಿದ್ದಾರೆ..
ಕನ್ನಡದ ಜೋಷ್ ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ಎಂಟ್ರಿಯಾದ ಬಬ್ಲಿ ನಜಟಿ ನಿತ್ಯಾ ಮೆನನ್ ಬಹುಭಾಷೆಗಳಲ್ಲಿ ಮಿಂಚಿದ್ದಾರೆ.. ದೊಡ್ಡ ಅಭಿಮಾನಿಗಳ ಬಳಗವನ್ನ ಹೊಂದಿದ್ದಾರೆ..
ಆದ್ರೆ ನಿತ್ಯಾ ಬಗ್ಗೆ ಟಾಲಿವುಡ್ ಮತ್ತು ಮಾಲಿವುಡ್‌ನಲ್ಲಿ ಒಂದು ಗುಸುಗುಸು ಶುರುವಾಗಿದೆ.. ನಿತ್ಯಾ ಮೆನನ್ ಶೀಘ್ರದಲ್ಲೇ ಜನಪ್ರಿಯ ಮಲಯಾಳಂ ನಾಯಕನೊಂದಿಗೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಭಾರೀ ಸೌಂಡ್ ಮಾಡ್ತಿದೆ..
ಆದ್ರೆ ಈ ಎಲ್ಲಾ ವದಂತಿಗಳಿಗೆ ‘ಮೈನಾ’ ಸುಂದರಿ ಸ್ಪಷ್ಟನೆ ನೀಡಿದ್ದಾರೆ..