Sandalwood : ‘ಸುಳ್ಳು ಕಥೆಗಳಿ’ಗೆ ಸಾಥ್ ಕೊಟ್ಟ ಶಿವಣ್ಣ..!!
ಕನ್ನಡದಲ್ಲಿ ‘9 ಸುಳ್ಳು ಕಥೆಗಳು’ ಎಂಬ ಹೊಸ ಚಿತ್ರವೊಂದು ಬಿಡುಗಡೆಯಾಗುತ್ತಿದ್ದು ಇದಕ್ಕೆ ಡಾ ಶಿವರಾಜ್ ಕುಮಾರ್ ಮತ್ತು ರಿಷಬ್ ಶೆಟ್ಟಿ ಸಾಥ್ ನೀಡುತ್ತಿದ್ದಾರೆ.
ನವರಸಗಳ ಆಧರಿತ ಸಿನಿಮಾ ಇದು
ನವರಸಗಳನ್ನ ಆಧರಿಸಿ ಈ ಸಿನಿಮಾ ಮಾಡಲಾಗಿದ್ದು, ಇತ್ತೀಷೆಗಷ್ಟೇ ಈ ಸಿನಿಮಾದ ಟ್ರೈಲರ್ ಹಾಗೂ ಹಾಡುಗಳು ರಿಲೀಸ್ ಆಗಿದ್ದು, ಚೆನ್ನಾಗಿ ಮೂಡಿ ಬಂದಿದೆ. ಈ ಸಿನಿಮಾದ ಟ್ರೈಲರ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ವಾಯ್ಸ್ ನೀಡಿದ್ದು, ಒಂದು ಹಾಡನ್ನು ನಟ, ನಿರ್ದೇಶಕ ರಿಷಭ್ ಶೆಟ್ಟಿ ಹಾಡಿದ್ದಾರೆ.
ಈ ಸಿನಿಮಾವನ್ನು ಮಂಜುನಾಥ್ ಮುನಿಯಪ್ಪ ಎನ್ನುವವರು ನಿರ್ದೇಶನ ಮಾಡಿದ್ದು, ಇದರ ನಿರ್ಮಾಣದ ಜವಾಬ್ದಾರಿಯನ್ನು ಸಹ ಅವರೇ ವಹಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ನಟ ಪ್ರಮೋದ್ ಶೆಟ್ಟಿ, ವಿನಾಯ್ ಜೋಶಿ, ಕರಿ ಸುಬ್ಬು, ಸುಕೃತಾ ವಾಗ್ಳೆ, ಲಕ್ಷ್ಮೀ ಚಂದ್ರಶೇಖರ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ಪ್ರವೀಣ್ ಹಾಗೂ ಪ್ರದೀಪ್ ಸಂಗೀತ ನೀಡಿದ್ದಾರೆ.
ಇನ್ನು ಈ ಸಿನಿಮಾದಲ್ಲಿ 6 ಹಾಡುಗಳಿದ್ದು, ಸಂತ ಶಿಶುನಾಲ ಶರೀಫರ ಹಾಡೊಂದನ್ನು ಬಳಸಿಕೊಳ್ಳಲಾಗಿದೆ. ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ವಾರಿಜಾಶ್ರೀ, ಶಶಿಧರ್ ಕೋಟೆ, ಚಿಂತನ್ ವಿಕಾಸ್ ಈ ಅದ್ಭುತ ಹಾಡುಗಳನ್ನು ಹಾಡಿದ್ದಾರೆ.