ಹಿಂದಿಯ ಬಿಗ್ ಬಾಸ್ ಸೀಸನ್ 15 ರಲ್ಲಿ ಅನೇಕರ ಫೇವರೇಟ್ ಕಂಟೆಸ್ಟೆಂಟ್ ಆಗಿದ್ದ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ , ಸಿನಿಮಾಗಳಲ್ಲಿ ಯಶಸ್ಸು ಗಳಿಸಿದ್ದು ಕಡಿಮೆ.. ಆದ್ರೆ ಬಿಗ್ ಬಾಸ್ ನಿಂದಲೇ ಸಿಕ್ಕಾಪಟ್ಟೆ ಫೇಮ್ ಗಳಿಸಿ ಅಭಿಮಾನಿಗಳನ್ನೂ ಗಳಿಸಿದರು.. ಅಂದ್ಹಾಗೆ ಬಿಗ್ ಬಾಸ್ ಮನೆಯಲ್ಲಿ ಶುರುವಾಗಿದ್ದು ಶಮಿತಾ ಶೆಟ್ಟಿ ಹಾಗೂ ಸಹ ಸ್ಪರ್ಧಿ ರಾಕೇಶ್ ಬಾಪೆಟ್ ಲವ್ ಸ್ಟೋರಿ… ಈ ಜೋಡಿ ಸದಾ ಒಟ್ಟಿಗೆ ಇರುತ್ತಿದ್ದರು.. ಅನೇಕರ ಫೇವರೇಟ್ ಕೂಡ ಆಗಿದ್ದರು.. ಇಬ್ಬರೂ ಬಿಗ್ ಬಾಸ್ ಮನೆಯಿಂದ ಹೊರ ಬಂದ್ರೂ ಡೇಟಿಂಗ್ ನಲ್ಲಿದ್ದರು..
ಆದ್ರೀಗ ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ದು ಅಧಿಕೃತವಾಗಿ ಶಮಿತಾ ಶೆಟ್ಟಿ ಅನೌನ್ಸ್ ಮಾಡಿದ್ದಾರೆ.. ಈ ಮೂಲಕ ಈ ಜೋಡಿಯ ಅಭಿಮಾನಿಗಳು ಬೇಸರಗೊಂಡಿದ್ದಾರೆ.. ಮತ್ತೊಂದೆಡೆ ಬರೀ ಶೋಗಾಗಿ ಇವರು ಒಟ್ಟಾಗಿರುವಂತೆ ನಾಟಕವಾಡಿದ್ರೂ ಅಂತ ಟ್ರೋಲ್ ಮಾಡ್ತಿಇರೋದು ಉಂಟು..
ಈ ಬಗ್ಗೆ ಶಮಿತಾ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದು “ಈಗ ಸ್ಪಷ್ಟನೆ ನೀಡುವುದು ಮಹತ್ವದ್ದು ಎಂದು ಭಾವಿಸುತ್ತೇನೆ. ನಾನು, ರಾಕೇಶ್ ಇಬ್ಬರೂ ದೂರ ದೂರ ಆಗಿದ್ದೇವೆ, ಬಹಳ ಸಮಯದಿಂದ ನಾವಿಬ್ಬರೂ ಒಟ್ಟಿಗಿಲ್ಲ. ನಮಗೆ ತುಂಬ ಪ್ರೀತಿ, ಬೆಂಬಲ ನೀಡಿದವರಿಗೆ ಈ ಮ್ಯೂಸಿಕ್ ವಿಡಿಯೋ ಅರ್ಪಿಸುತ್ತಿದ್ದೇವೆ. ಇಬ್ಬರಿಗೂ ಪ್ರೀತಿ ನೀಡುವುದನ್ನು ಮುಂದುವರೆಸಿ. ಎಲ್ಲರಿಗೂ ಧನ್ಯವಾದಗಳು” ಎಂದು ಶಮಿತಾ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ…