ಬಾಲಿವುಡ್ ನಲ್ಲಿ ಸಾಲು ಸಾಲು ಸೋಲುಗಳಿಂದ ಸ್ಟಾರ್ ಗಳು ಕಂಗಾಲಾಗಿದ್ದಾರೆ.. ಸೌತ್ ಸಿನಿಮಾಗಳು ಬಾಲಿವುಡ್ ನೆಲದಲ್ಲಿ ಅಬ್ಬರಿಸುತ್ತಿವೆ.. ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗುತ್ತಿವೆ..
ಲೆಕ್ಕವಿಲ್ಲದಷ್ಟು ಸಿನಿಮಾಗಳೇ ರಿಲೀಸ್ ಆದ್ರೂ ಗೆದ್ದಿದ್ದು ಮಾತ್ರ ಭೂಲ್ ಭುಲಯ್ಯ 2 , ದಿ ಕಾಶ್ಮೀರ್ ಫೈಲ್ಸ್.. ಸ್ಟಾರ್ ಸಿನಿಮಾಗಳು ಹೇಳ ಹೆಸರಿಲ್ಲದಂತೆ ಹೋಗಿವೆ..
ಇದೇ ರೀತಿ ಸೋತ ಸಿನಿಮಾಗಳ ಲಿಸ್ಟ್ ಸೇರಿದ್ದು ರಣಬೀರ್ ಕಪೂರ್ ನಟನೆಯ ಶಂಶೇರಾ..
ಕಳೆದ ಶುಕ್ರವಾರ ತೆರೆಕಂಡ ಚಿತ್ರ ಹೀನಾಯವಾಗಿ ಸೋತಿದೆ ಎನ್ನುತ್ತಿದ್ದಾರೆ ಟ್ರೇಡ್ ವಿಶ್ಲೇಷಕರು. ಕರಣ್ ಮಲ್ಹೋತ್ರಾ ನಿರ್ದೇಶನದ ಈ ಐತಿಹಾಸಿಕ ಆಕ್ಷನ್ ಎಂಟರ್‌ಟೈನರ್ ಚಿತ್ರವನ್ನು ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಆದಿತ್ಯಾ ಚೋಪ್ರಾ ನಿರ್ಮಾಣ ಮಾಡಿದ್ದರು. ಆದ್ರೆ ಅಂದುಕೊಂಡ ಮಟ್ಟದಲ್ಲಿ ಸಿನಿಮಾ ಮ್ಯಾಜಿಕ್ ಮಾಡುವಲ್ಲಿ ಫೇಲ್ ಆಗೋಯ್ತು. ಸಂಜಯ್ ದತ್, ವಾಣಿ ಕಪೂರ್, ಸೌರಭ್ ಶುಕ್ಲಾ ಸೇರಿದಂತೆ ಅನೇಕ ಸ್ಟಾರ್ ಗಳು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು.
ಸಿನಿಮಾ ಸುಮಾರು 150 ಕೋಟಿ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣವಾಗಿದ್ದು , ಮೊದಲ ವಾರ ಸುಮಾರು 31 ಕೋಟಿ ರೂ ಕಲೆಕ್ಷನ್ ಮಾಡಿದ್ದು , ಇದು ಸಿನಿಮಾವೊಂದರ ಡಲ್ ಕಲೆದಕ್ಷನ್ ಅನ್ನೋದು ಟ್ರೇಡ್ ವಿಶ್ಲೇಷಕರ ಅಭಿಪ್ರಾಯ..
ಇನ್ನೂ ಬಾಕ್ಸ್ ಆಫೀಸ್ ನಲ್ಲಿ ಸೋತಿರೋ ಸಿನಿಮಾಗೆ ಒಟಿಟಿಯಲ್ಲಿ ಗೆಲ್ಲುವ ಅವಕಾಶವಿದೆ.. ಒಟಿಟಿಯಲ್ಲಾದ್ರೂ ಶಂಶೇರಾ ಮಿಂಚುವ ನಿರೀಕ್ಷೆಯಿದೆ.. ಸಿನಿಮಾ ಒಟಿಟಿಯಲ್ಲಿ ಯಾವಾಗ ಬರಲಿದೆ.. ಯಾವ ಫ್ಲಾಟ್ ಫಾರ್ಮ್ ಬರಲಿದೆ ಎಂಬ ಚರ್ಚೆಗಳ ನಡುವೆ ಒಂದಷ್ಟು ಉತ್ತರ ಸಿಕ್ಕಿದೆ..
ಅಂದ್ಹಾಗೆ ಆಗಸ್ಟ್ 2ನೇ ವಾರದಲ್ಲಿ ಸಿನಿಮಾ ಒಟಿಟಿಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ.. ಒಂದೋ ಅಮೇಜಾನ್ ಪ್ರೈಮ್ ಅಥವ ಸೋನಿಟಿವಿಯಲ್ಲಿ ಸ್ಟ್ರೀಮಿಂಗ್ ಆಗಬಹುದು ಎನ್ನಲಾಗ್ತಿದೆ..