ದೇಶದಲ್ಲಿ ಮತ್ತೊಮ್ಮೆ ಕೋವಿಡ್ ಆತಂಕ ಹೆಚ್ಚಾಗ್ತಿದೆ.. ಇದ್ರಿಂದ ಜನರಿಗೆ ಮತ್ತೆ ಭೀತಿ ಎದುರಾಗಿದೆ.. ಚಿತ್ರರಂಗಕ್ಕೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ..
ಕನ್ನಡ , ತಮಿಳು , ತೆಲುಗು ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಸಾಲು ಸಾಲು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿ ನಿಂತಿವೆ.. ಅನೇಕ ಸಿನಿಮಾಗಳು ಶೂಟಿಂಗ್ ಹಂತದಲ್ಲಿವೆ.. ಹೀಗಿರೋವಾಗಲೇ ತೆಲುಗು ಸಿನಿಮಾಗಳ ಶೂಟಿಂಗ್ ಸ್ಥಗಿತಗೊಳಿಸುವುದಕ್ಕೆ ಚಿಂತನೆ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ..
ಮತ್ತೊಂದೆಡೆ ಆಂಧ್ರ ಸರ್ಕಾರ ಹಾಗೂ ಸಿನಿಮಾರಂಗದ ನಡುವಿನ ಜಟಾಪಟಿಯೂ ಮುಂದುವರೆದಿದೆ..
ಇದೀಗ ತೆಲುಗು ಚಿತ್ರರಂಗದ ಪ್ರಮುಖ ನಿರ್ಮಾಪಕರೆಲ್ಲ ಸೇರಿ ಕೆಲ ಮಹತ್ವದ ನಿರ್ಧಾರಗಳನ್ನ ತೆಗೆದುಕೊಂಡಿದ್ದಾರೆ.. ಚಿನಿಮಾಮಂದಿರಗಳ ಉಳಿವಿಗಾಗಿ ಈ ನಿರ್ಧಾರಗಳನ್ನ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ..
ಪ್ರಮುಖವಾಗಿ ಆಗಸ್ಟ್ 1 ರಿಂದ ತೆಲುಗು ಸಿನಿಮಾಗಳ ಚಿತ್ರೀಕರಣವನ್ನು ಬಂದ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ…
ATFPG (ಆಕ್ಟಿವ್ ತೆಲುಗು ಫಿಲ್ಮ್ ಪ್ರೊಡ್ಯೂಸರ್ಸ್ ಗಿಲ್ಡ್) ನ ನಿರ್ಮಾಪಕ ಸದಸ್ಯರು ಸಭೆ ಸೇರಿ ತೆಲುಗು ಚಿತ್ರರಂಗದ ಪ್ರಗತಿಯ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರುವವರೆಗೆ ಯಾವುದೇ ತೆಲುಗು ಸಿನಿಮಾಗಳ ಚಿತ್ರೀಕರಣ ಮಾಡದಂತೆ ನಿರ್ಧಾರ ಮಾಡಿದ್ದು, ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ.
ಈಗಾಗಲೇ ಚಿತ್ರೀಕರಣ ನಡೆಸುತ್ತಿರುವ ಸಿನಿಮಾಗಳು ಸಹ ಚಿತ್ರೀಕರಣ ಸ್ಥಗಿತಗೊಳಿಸಬೇಕಿದೆ ಹಾಗೂ ಯಾವುದೇ ಹೊಸ ಸಿನಿಮಾಗಳ ಚಿತ್ರೀಕರಣ ಪ್ರಾರಂಭವಾಗುವಂತಿಲ್ಲ ಎಂದು ಸ್ಪಷ್ಟ ಸಂದೇಶ ರವಾನೆ ಮಾಡಲಾಗಿದೆ..