ಜುಲೈ 28 ಕ್ಕೆ ಇಡೀ ವಿಶ್ವಾದ್ಯಂತ ರಿಲೀಸ್ ಆಗ್ತಿರುವ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಪ್ರೀ ರಿಲೀಸ್ ಈವೆಂಟ್ 26 ರ ಮಂಗಳವಾರ ಸಂಜೆ ಬಹಳ ಅದ್ಧೂರಿಯಾಗಿ ನೆರವೇರಿತು.. ಈ ಈವರೆಂಟ್ ನಲ್ಲಿ ಸಾಕಷ್ಟು ಗಣ್ಯರು , ಸ್ಟಾರ್ ಗಳು ಭಾಗಿಯಾಗಿದ್ದರು..
ಸುಮಾರು 14 ಭಾಷೆಗಳಲ್ಲಿ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗ್ತಿದ್ದು , ಸಾಕಷ್ಟು ವಿಶೇಷತೆಗಳಿಂದ ಸಿನಿಮಾ ಚರ್ಚೆಯಾಗ್ತಿದೆ… ಸಿನಿಮಾ 3ಡಿಯಲ್ಲಿ ತೆರೆಕಾಣ್ತಿದೆ.. ಜೊತೆಗೆ ಇಂಗ್ಲಿಷ್ ನಲ್ಲೂ ಸಿನಿಮಾ ರಿಲೀಸ್ ಆಗ್ತಿದೆ.. ಹೀಗಾಗಿ ಇದು ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್… ಹಾಲಿವುಡ್ ರೇಂಜ್ ಗೆ ಸಿನಿಮಾ ಸೌಂಡ್ ಮಾಡ್ತಿದೆ..
ಅಂದ್ಹಾಗೆ ಸಿನಿಮಾದ ಬಗ್ಗೆ ಸಾಕಷ್ಟು ಸಸ್ಪೆನ್ಸ್ ಗಳನ್ನ ಸಿನಿಮಾತಂಡವು ಕಾಯ್ದಿರಿಸಿಕೊಂಡಿದೆ.. ಸಿನಿಮಾದ ಸಾಕಷ್ಟು ವಿಚಾರಗಳ ಬಗ್ಗೆ ಅಭಿಮಾನಿಗಳು ಕುತೂಹಲದಿಂದಿದ್ದಾರೆ.. ಸವಾಲುಗಳು ಅನೇಕ ಇವೆ.. ಸಿನಿಮಾದ ಪಾರ್ಟ್ 2 ಬರಬಹುದಾ..?? ಟಿಕೆಟ್ ದರ ಎಷ್ಟಿರಬಹುದು ಎಂಬೆಲ್ಲಾ ಪ್ರಶ್ನೆಗಳಿವೆ..
ಅಂದ್ಹಾಗೆ 3ಡಿಯಲ್ಲಿ ಮೂಡಿಬರುತ್ತಿರುವ ಸಿನಿಮಾ 2ಡಿಯಲ್ಲೂ ರಿಲೀಸ್ ಆಗಲಿದೆ.. ಮೂಲಗಳ ಪ್ರಕಾರ ಭಾರತದಾದ್ಯಂತ ವಿಕ್ರಾಂತ್ ರೋಣ 2D ಟಿಕೆಟ್ ದರ ಸುಮಾರು 150 ರೂಪಾಯಿ ಇಂದ ಆರಂಭವಾಗಲಿದೆ ಎನ್ನಲಾಗ್ತಿದೆ. ಇನ್ನು ಗೋಲ್ಡ್ ಕ್ಲಾಸ್ ತನಕ ಸುಮಾರು 750 ರೂ ವರೆಗೂ ಇರಲಿದೆಯಂತೆ..
ಇನ್ನೂ 3ಡಿ ಟಿಕೆಟ್ ದರದ ಬಗ್ಗೆ ಮಾತನಾಡೋದಾದ್ರೆ 3d ಅವತರಣಿಕೆ ಟಿಕೆಟ್ ದರ 276 ರೂಪಾಯಿ ಇಂದ 950 ರೂಪಾಯಿ ತನಕ ಟಿಕೆಟ್ ದರ ನಿಗದಿಯಾಗಿದೆ ಎನ್ನಲಾಗ್ತಿದೆ.