ಜುಲೈ 28 ಕ್ಕೆ ಇಡೀ ವಿಶ್ವಾದ್ಯಂತ ರಿಲೀಸ್ ಆಗ್ತಿರುವ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಪ್ರೀ ರಿಲೀಸ್ ಈವೆಂಟ್ 26 ರ ಮಂಗಳವಾರ ಸಂಜೆ ಬಹಳ ಅದ್ಧೂರಿಯಾಗಿ ನೆರವೇರಿತು.. ಈ ಈವರೆಂಟ್ ನಲ್ಲಿ ಸಾಕಷ್ಟು ಗಣ್ಯರು , ಸ್ಟಾರ್ ಗಳು ಭಾಗಿಯಾಗಿದ್ದರು..
ಟಾಲಿವುಡ್ , ಸ್ಯಾಂಡಲ್ ವುಡ್ ಸ್ಟಾರ್ ಗಳು ಭಾಗಿಯಾಗಿದ್ದರು.. ಈ ಈವೆಂಟ್ ನ ಹೈಲೇಟ್ ಆಗಗಿದ್ದ ಕಿಚ್ಚ ಸುದೀಪ್ ಅವರು ಅಭಿಮಾನಿಗಳನ್ನ ಉದ್ದೇಶಿಸಿ ಮಾತನಾಡುತ್ತಾ ಅವರಿಗೆ ಧನ್ಯವಾದಗಳನ್ನ ಅರ್ಪಿಸಿದ್ದಾರೆ. ಒಂದು ಒಳ್ಳೆ ಸಿನಿಮಾ ಅನುಭವವನ್ನ ಅಭಿಮಾನಿಗಳಿಗೆ ಹೊತ್ತು ತರಲಾಗಿದೆ ಎಂದಿದ್ದಾರೆ.
ಇದೇ ವೇಳೆ ಸಿನಿಮಾಗೆ ಸಹಕಾರ ನೀಡಿದ ನಿರ್ಮಾಪಕ ಜಾಕ್ ಮಂಜು, ಸಹ ನಿರ್ಮಾಪಕ ಅಲಂಕಾರ್ ಪಾಂಡ್ಯನ್, ನಿರ್ದೇಶಕ ಅನುಪ್ ಭಂಡಾರಿ, ತಂತ್ರಜ್ಞರಾದ ಅಜನೀಶ್ ಲೋಕನಾಥ್, ಜಾನಿ ಮಾಸ್ಟರ್ ಸೇರಿದಂತೆ ಹಲವರಿಗೆ ಕಿಚ್ಚ ಧನ್ಯವಾದಗಳನ್ನ ಅರ್ಪಿಸಿದ್ದಾರೆ..
ಸುಮಾರು 14 ಭಾಷೆಗಳಲ್ಲಿ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗ್ತಿದ್ದು , ಸಾಕಷ್ಟು ವಿಶೇಷತೆಗಳಿಂದ ಸಿನಿಮಾ ಚರ್ಚೆಯಾಗ್ತಿದೆ… ಸಿನಿಮಾ 3ಡಿಯಲ್ಲಿ ತೆರೆಕಾಣ್ತಿದೆ.. ಜೊತೆಗೆ ಇಂಗ್ಲಿಷ್ ನಲ್ಲೂ ಸಿನಿಮಾ ರಿಲೀಸ್ ಆಗ್ತಿದೆ.. ಹೀಗಾಗಿ ಇದು ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್… ಹಾಲಿವುಡ್ ರೇಂಜ್ ಗೆ ಸಿನಿಮಾ ಸೌಂಡ್ ಮಾಡ್ತಿದೆ..