Vikranth Rona
ಜುಲೈ 28 ಕ್ಕೆ ಇಡೀ ವಿಶ್ವಾದ್ಯಂತ ರಿಲೀಸ್ ಆಗ್ತಿರುವ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಪ್ರೀ ರಿಲೀಸ್ ಈವೆಂಟ್ 26 ರ ಮಂಗಳವಾರ ಸಂಜೆ ಬಹಳ ಅದ್ಧೂರಿಯಾಗಿ ನೆರವೇರಿತು.. ಈ ಈವರೆಂಟ್ ನಲ್ಲಿ ಸಾಕಷ್ಟು ಗಣ್ಯರು , ಸ್ಟಾರ್ ಗಳು ಭಾಗಿಯಾಗಿದ್ದರು..
ಸುಮಾರು 14 ಭಾಷೆಗಳಲ್ಲಿ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗ್ತಿದ್ದು , ಸಾಕಷ್ಟು ವಿಶೇಷತೆಗಳಿಂದ ಸಿನಿಮಾ ಚರ್ಚೆಯಾಗ್ತಿದೆ… ಸಿನಿಮಾ 3ಡಿಯಲ್ಲಿ ತೆರೆಕಾಣ್ತಿದೆ.. ಜೊತೆಗೆ ಇಂಗ್ಲಿಷ್ ನಲ್ಲೂ ಸಿನಿಮಾ ರಿಲೀಸ್ ಆಗ್ತಿದೆ.. ಹೀಗಾಗಿ ಇದು ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್… ಹಾಲಿವುಡ್ ರೇಂಜ್ ಗೆ ಸಿನಿಮಾ ಸೌಂಡ್ ಮಾಡ್ತಿದೆ..
ಅಂದ್ಹಾಗೆ ಸಿನಿಮಾದ ಬಗ್ಗೆ ಸಾಕಷ್ಟು ಸಸ್ಪೆನ್ಸ್ ಗಳನ್ನ ಸಿನಿಮಾತಂಡವು ಕಾಯ್ದಿರಿಸಿಕೊಂಡಿದೆ.. ಸಿನಿಮಾದ ಸಾಕಷ್ಟು ವಿಚಾರಗಳ ಬಗ್ಗೆ ಅಭಿಮಾನಿಗಳು ಕುತೂಹಲದಿಂದಿದ್ದಾರೆ.. ಸವಾಲುಗಳು ಅನೇಕ ಇವೆ..
ಸುಮಾರು 3200ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ವಿಶ್ವದಾದ್ಯಂತ 27 ದೇಶಗಳಲ್ಲಿ ವಿಕ್ರಾಂತ್ ರೋಣ ರಿಲೀಸ್ ಆಗ್ತಿದೆ.. ಹೀಗೆ ಸಿನಿಮಾದ ಒಟ್ಟು ಕಾಲಾವಧಿ ಎಷ್ಟು ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ..
ವಿಕ್ರಾಂತ್ ರೋಣ ಹಿಂದಿ ವರ್ಷನ್ ಕಾಲಾವಧಿ 2 ಗಂಟೆ 27 ನಿಮಿಷ 39 ಸೆಕೆಂಡ್‌ಗಳು ಎಂದು ಬಾಲಿವುಡ್ ಚಿತ್ರ ವಿಮರ್ಶಕ ತರಣ್ ಆದರ್ಶ್ ಮಾಹಿತಿ ನೀಡಿದ್ದಾರೆ.
ಇನ್ನೂ ಉಳಿದ ವರ್ಷನ್‌ಗಳ ಕಾಲಾವಧಿ ಕೂಡ ಒಂದೆರಡು ಸಿನಿಮಾ ಹೆಚ್ಚು ಕಮ್ಮಿ ಇರಲಿದೆ. ಇನ್ನೂ ಸಿಬಿಎಫ್ ಸಿಯಿಂದ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.. ಅಭಿಮಾನಿಗಳ ವಿಕ್ರಾಂತ್ ರೋನನ ಅದ್ಧೂರಿ ಸ್ವಾಗತಕ್ಕೆ ಜಾತಕ ಪಕ್ಷಿಗಳಂತೆ ಕಾಯ್ತಿದ್ದಾರೆ..
ಅಂದ್ಹಾಗೆ ಈ ಸಿನಿಮಾದ ಕಾಲಾವಧಿ KGF2 ಮತ್ತು RRR ಗಿಂತಲೂ ಕಡಿಮೆಯಿರಲಿದೆ ಎನ್ನಲಾಗ್ತಿದೆ.. ಹೌದು..! KGF2 , 2 ಗಂಟೆ 48 ನಿಮಿಷ ಇತ್ತು. RRR 3 ಗಂಟೆಗಳ ಕಾಲವಿತ್ತು..