Vikranth Rona : ಯಶ್ ಇಂಡಿಯನ್ ಬಾಕ್ಸ್ ಆಫೀಸ್ ಗೆದ್ರು , ಕಿಚ್ಚ ವಿಶ್ವ ಬಾಕ್ಸ್ ಆಫೀಸ್ ಗೆಲ್ತಾರೆ : ಉಪ್ಪಿ
ಜುಲೈ 28 ಕ್ಕೆ ಇಡೀ ವಿಶ್ವಾದ್ಯಂತ ರಿಲೀಸ್ ಆಗ್ತಿರುವ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಪ್ರೀ ರಿಲೀಸ್ ಈವೆಂಟ್ 26 ರ ಮಂಗಳವಾರ ಸಂಜೆ ಬಹಳ ಅದ್ಧೂರಿಯಾಗಿ ನೆರವೇರಿತು.. ಈ ಈವರೆಂಟ್ ನಲ್ಲಿ ಸಾಕಷ್ಟು ಗಣ್ಯರು , ಸ್ಟಾರ್ ಗಳು ಭಾಗಿಯಾಗಿದ್ದರು.. ರಿಯಲ್ ಸ್ಟಾರ್ ಉಪೇಂದ್ರ ಅವರು ಸಹ ಈ ಈವೆಂಟ್ ನಲ್ಲಿ ಭಾಗಿಯಾಗಿದ್ದು , ಕಿಚ್ಚನ ಸಿನಿಮಾವನ್ನ ಬಾಯ್ತುಂಬ ಹೊಗಳಿದ್ದೂ ಅಲ್ದೇ ಸುದೀಪ್ ಅವರನ್ನ ಹೊಗಳಿ ಸಿನಿಮಾ ಬಗ್ಗೆ ಭವಿಷ್ಯ ನುಡಿದಿದ್ದಾರೆ..
ಯಶ್ ಅವರು ಇಂಡಿಯನ್ ಬಾಕ್ಸ್ ಆಫೀಸ್ ಗೆದ್ದರು , ಕಿಚ್ಚ ಸುದೀಪ್ ವಿಶ್ವದ ಬಾಕ್ಸ್ ಆಫೀಸ್ ಗೆಲ್ತಾರೆ ಎಂದಿದ್ದಾರೆ..
ಹೌದು..! ಸುಮಾರು 14 ಭಾಷೆಗಳಲ್ಲಿ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗ್ತಿದ್ದು , ಸಾಕಷ್ಟು ವಿಶೇಷತೆಗಳಿಂದ ಸಿನಿಮಾ ಚರ್ಚೆಯಾಗ್ತಿದೆ… ಸಿನಿಮಾ 3ಡಿಯಲ್ಲಿ ತೆರೆಕಾಣ್ತಿದೆ.. ಜೊತೆಗೆ ಇಂಗ್ಲಿಷ್ ನಲ್ಲೂ ಸಿನಿಮಾ ರಿಲೀಸ್ ಆಗ್ತಿದೆ.. ಹೀಗಾಗಿ ಇದು ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್… ಹಾಲಿವುಡ್ ರೇಂಜ್ ಗೆ ಸಿನಿಮಾ ಸೌಂಡ್ ಮಾಡ್ತಿದೆ..
ಅದ್ಧೂರಿಯಾಗಿ ಆಯೋಜಿಸಿದ್ದ ವಿಕ್ರಾಂತ್ ರೋಣ ಪ್ರೀ ರಿಲೀಸ್ ಈವೆಂಟ್ ನಲ್ಲಿ ಭಾಗಿಯಾಗಿ ಮಾತನಾಡಿದ ಉಪ್ಪಿ ಈ ಸಿನಿಮಾದ ಹಲವು ತುಣುಕುಗಳನ್ನು ನಾನು ಈಗಾಗಲೇ ನೋಡಿದ್ದೇನೆ. ಸುದೀಪ್ ಹಾಗೂ ನಿರ್ದೇಶಕರು ನನಗೆ ಕೆಲವು ದೃಶ್ಯಗಳನ್ನು ಈಗಾಗಲೇ ತೋರಿಸಿದ್ದಾರೆ. ಸಿನಿಮಾ ಅತ್ಯದ್ಭುತವಾಗಿದೆ. ನೋಡಿದ ಪ್ರೇಕ್ಷಕರು ಥ್ರಿಲ್ ಆಗುವುದು ಖಂಡಿತ ಎಂದಿದ್ದಾರೆ..
ಅಲ್ಲದೇ ‘ ನಿರ್ದೇಶಕರ ಮೂರು ವರ್ಷದ ಶ್ರಮ ಇದು’ ಎನ್ನುತ್ತಾ ನಿರ್ದೇಶಕ ಅನುಪ್ ಭಂಡಾರಿಗೆ ಧನ್ಯವಾದ ಅರ್ಪಿಸಿದ್ದಾರೆ.. ಅಷ್ಟಟೇ ಅಲ್ಲ ಇದು ಪ್ಯಾನ್ ಇಂಡಿಯನ್ ಅಲ್ಲ ಪ್ಯಾನ್ ವರ್ಲ್ಡ್. ಕೇವಲ ವಿಕ್ರಾಂತ್ ರೋಣ ಅಲ್ಲ ಇದು ವಿಕ್ಟರಿ ರೋಣ.. ಸಿನಿಮಾ ಈಗಾಗಲೇ ಗೆದ್ದಾಗಿದೆ ಎಂದಿದ್ದಾರೆ..
ಇನ್ನೂ ಕೆಲವು ಸಿನಿಮಾ ಕಾರ್ಯಕ್ರಮಗಳಲ್ಲಿ ಸುದೀಪ್ ಜೊತೆಗೆ ಕೂತಿದ್ದಾಗ ಹೇಳಿದ್ದೇನೆ, ಏನಿದು ವಾತಾವರಣ ಡಲ್ ಆಗಿದೆ ಎಂದು. ಆದರೆ ಈ ಸಿನಿಮಾದ ಅಬ್ಬರ ಬೇರೆ ಮಾದರಿಯಲ್ಲಿದೆ. ಇಲ್ಲಿ ಗೆಲುವಿನ ಕಳೆ ಇದೆ. ಇಲ್ಲಿ ವೇದಿಕೆ ನೋಡಿಯೇ ಸುದೀಪ್ ಗೆ ಹೇಳಿದೆ, ನಿಮ್ಮ ಸಿನಿಮಾಕ್ಕೆ ಕಳೆ ಬಂದಿದೆ. ಸಿನಿಮಾ ಕಾರ್ಯಕ್ರಮವೆಂದರೆ ಅಭಿಮಾನಿಗಳು ತುಂಬಿರಬೇಕು, ಕೂಗಾಟ ಇರಬೇಕು, ಜಯಕಾರಗಳಿರಬೇಕು ಅದು ಮಜಾ ಕೊಡುತ್ತೆ, ಅದು ಸಿನಿಮಾ ಸಂಭ್ರಮಿಸುವ ರೀತಿ ಎಂದಿದ್ದಾರೆ..
ಅಲ್ದೇ ಮೊದಲ ದಿನ ಅಭಿಮಾನಿಗಳ ಜೊತೆಗೆ ಸಿನಿಮಾ ವೀಕ್ಷಿಸುವ ನಿರ್ಧಾರ ಮಾಡಿದ್ದೇನೆ. ಪ್ರೀಮಿಯರ್ ಶೋ ಆಯೋಜಿಸುವಂತೆ ಸುದೀಪ್ಗೆ ಕೇಳಿದ್ದೆ. ಆದರೆ ಅಭಿಮಾನಿಗಳ ಜೋಶ್ ನೋಡಿ ನಾನೂ ಸಹ ಅವರ ಜೊತೆ ಕೂತು ಮೊದಲ ದಿನವೇ ಸಿನಿಮಾ ನೋಡುವ ಮನಸ್ಸಾಗಿದೆ.
ಮೊದಲ ಸಿನಿಮಾ ಟಿಕೆಟ್ ಖರೀದಿಸಿ ಅಭಿಮಾನಿಗಳೊಂದಿಗೆ ಕೂತು ಸಿನಿಮಾ ನೋಡಿ ಕರೆ ಮಾಡಿ ನನ್ನ ಅಭಿಪ್ರಾಯ ತಿಳಿಸುವೆ ಎಂದು ನಿರ್ದೇಶಕ ಅನುಪ್ ಭಂಡಾರಿಗೆ ಉಪೇಂದ್ರ ಅವರು ಹೇಳಿದ್ದಾರೆ..