ರಣವೀರ್ ಸಿಂಗ್ ನಂತರ, ಈಗ ನಟ ವಿಷ್ಣು ವಿಶಾಲ್ ಟ್ರೆಂಡ್ ಅನ್ನು ಅನುಸರಿಸಿದ್ದಾರೆ.. ವಿಜಯ್ ದೇವರಕೊಂಡ ನಂತರ , ಬಾಲಿವುಡ್ ನಟ ರಣವೀರ್ ಸಿಂಗ್ , ಆ ನಂತರ ಕಿರುತೆರೆ ನಟ ನ್ಯೂಡ್ ಫೋಟೋ ಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ ನಂತರ ಈಗ ತಮಿಳಿನ ಸ್ಟಾರ್ ನಟ ವಿಷ್ಣು ವಿಶಾಲ್ ಅರೆಬೆತತ್ತಲೆ ಫೋಟೋ ಹಂಚಿಕೊಂಡಿದ್ದಾರೆ..
ಟ್ವಿಟರ್ ನಲ್ಲಿ ಫೋಟೋ ಹಂಚಿಕೊಂಡಿದ್ದು , ಫೋಟೋಗ್ರಾಫರ್ ತಮ್ಮ ಪತ್ನಿ ಕ್ರೀಡಾಪಟು ಜ್ವಾಲಾ ಗುಟ್ಟಾ ಎಂದು ಕ್ಯಾಪ್ಷನ್ ನಲ್ಲಿ ತಿಳಿಸಿದ್ದಾರೆ.. ಫೋಟೋಗಳನ್ನ ಅವರ ಪತ್ನಿ ಜ್ವಾಲಾ ಗುಟ್ಟಾ ಅವರು ಕ್ಲಿಕ್ ಮಾಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ವಿಷ್ಣು ವಿಶಾಲ್ ಹಂಚಿಕೊಂಡ ಚಿತ್ರಗಳಲ್ಲಿ, ನಟನು ಬೆಡ್ ಮೇಲೆ ಭಾಗಶಃ ಹೊದಿಕೆ ಹೊದ್ದುಕೊಂಡು ಪೋಸ್ ನೀಡುತ್ತಿದ್ದು, ನಗ್ನ ಫೋಟೋ ಶೂಟ್ ಗಾಗಿ ವಿಭಿನ್ನ ಭಂಗಿಗಳನ್ನು ಅಳವಡಿಸಿಕೊಂಡಿದ್ದಾರೆ.
ಕಳೆದ ವಾರ, ನಟ ರಣವೀರ್ ಸಿಂಗ್ ಅವರು ತಮ್ಮ ನಗ್ನ ಫೋಟೋಶೂಟ್‌ನ ಕೆಲವು ಚಿತ್ರಗಳನ್ನು ಮ್ಯಾಗಜೀನ್‌ಗೆ ಪೋಸ್ಟ್ ಮಾಡಿದರು, ಇದು ಹಾಲಿವುಡ್ ನಟನೊಬ್ಬನಿಗೆ ಮನರಂಜನಾ ಉದ್ಯಮಕ್ಕೆ ನೀಡಿದ ಕೊಡುಗೆಗಳನ್ನು ನೆನಪಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸಿತು.
ವಿಷ್ಣು ವಿಶಾಲ್ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರನ್ನು ವಿವಾಹವಾಗಿದ್ದಾರೆ.
ಫೆಬ್ರವರಿ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ‘ಎಫ್‌ಐಆರ್’ ಚಿತ್ರದಲ್ಲಿ ನಟ ಕೊನೆಯದಾಗಿ ಕಾಣಿಸಿಕೊಂಡಿದ್ದರು.
ಅಂದ್ಹಾಗೆ ಅವರ ಈ ಪೋಸ್ಟ್ ಗೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗ್ತಿದೆ ಅಂತೆಯೇ ವಿರೋಧವೂ ವ್ಯಕ್ತವಾಗ್ತಿದೆ..
Well… joining the trend !
P.S
Also when wife @Guttajwala turns photographer… pic.twitter.com/kcvxYC40RU— VISHNU VISHAL – VV (@TheVishnuVishal) July 23, 2022