ಪ್ರಸಿದ್ಧ ಪಂಜಾಬಿ ಗಾಯಕ ಬಲ್ವಿಂದರ್ ಸಫ್ರಿ ನಿಧನರಾಗಿದ್ದಾರೆ.. ಇವರು ಭಾರತೀಯ ಮೂಲದವರಾಗಿದ್ದು ಬ್ರಿಟನ್ ನ ಗಾಯಕರಾಗಿದ್ದರು..
ಬ್ರೈನ್ ಡ್ಯಾಮೇಜ್ , ಹೃದಯ ಶಸ್ತ್ರಚಿಕಿತ್ಸೆ ಬಳಿಕ ಸಫ್ರಿ ಕೋಮಾಗೆ ಹೋಗಿದ್ದರು. ಬಳಿಕ ಗುಣಮುಖರಾಗಿ ಜುಲೈ 15ರಂದು ಆಸ್ಪತ್ರೆಯಿಂದ ಮನೆಗೆ ತೆರಳಿದ್ದರು. ನಂತರ ಅವರನ್ನು ವಿಶೇಷ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಇದೀಗ ಕೊನೆಯುಸಿರೆಳೆದಿದ್ದಾರೆ.
ಬರ್ಮಿಂಗ್ಹ್ಯಾಮ್ನಲ್ಲಿ ನೆಲೆಸಿದ್ದ 63 ವರ್ಷದ ಗಾಯಕ ಭಾರತದ ಪಂಜಾಬಿನಲ್ಲಿ ಜನಿಸಿದ್ದರು. 1989ರಿಂದ ಯುಕೆ ಭಾಂಗ್ರಾದಲ್ಲಿ ನೆಲೆಸಿದ್ದರು..