KGF 2 : ತೆಲುಗು ನೆಲದಲ್ಲಿ ಐತಿಹಾಸಿಕ ದಾಖಲೆ ಬರೆದ ಕನ್ನಡದ KGF 2 ಸಿನಿಮಾ
ಯಶ್ ಅವರ ಕೆಜಿಎಫ್ 2 ಬಾಕ್ಸ್ ಆಫೀಸ್‌ನಲ್ಲಿ ಎಬ್ಬಿಸಿದ ತೂಫಾನ್ ಪ್ರಭಾವ ಕಡಿಮೆಯಾಗಿರಬಹುದು.. ಆದ್ರೆ ಕ್ರೇಜ್ ಇನ್ನೂ ಇದೆ.. ಹೀಗಾಗಿಯೇ KGF 3 ಅಪ್ ಡೇಟ್ಸ್ ಗಾಗಿ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಡಿಮ್ಯಾಂಡ್ ಮಾಡ್ತಲೇ ಇರುತ್ತಾರೆ.. ಕೆಜಿಎಫ್ 3 ಗಾಗಿ ಕಾಯ್ತಿರುವುದೇ ಸಾಕ್ಷಿ.. ಸಿನಿಮಾ ಒಟಿಟಿಯಲ್ಲೂ ಭರ್ಜರಿ ಸೌಂಡ್ ಮಾಡಿದೆ.. ವಿಶ್ವಾದ್ಯಂತ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾವೆಂಬ ಹೆಗ್ಗಳಿಕೆ ನಮ್ಮ ಕನ್ನಡದ KGF 2 ಸಿನಿಮಾದ್ದು.. ದಾಖಲೆಗಳ ಮೇಲೆ ದಾಖಲೆ ಬರೆದು ಬಿಗ್ ಬಜೆಟ್ ಸಿನಿಮಾಗಳ ರೆಕಾರ್ಡ್ ಧೂಳಿಪಟ ಮಾಡಿದ್ದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿ ಕಲೆಕ್ಷನ್ ದಾಟಿತ್ತು.. ಇದೀಗ ಮಲ್ಟಿಫ್ಲೆಕ್ಸ್ ನ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ..
ಮಲ್ಟಿಪ್ಲೆಕ್ಸ್ ನ PVR ಸಿನಿಮಾಸ್ ಗಳಲ್ಲಿ ಈ ಸಿನಿಮಾ ದಾಖಲೆಯ 121.4 ಕೋಟಿ ರೂಪಾಯಿ ಗಳಿಸಿರುವುದಾಗಿ ತತಿಳಿದುಬಂದಿದೆ.. ಈ ಬಗ್ಗೆ ತೆಲುಗಿನ ಆಂಧ್ರ ಬಾಕ್ಸ್‌ಆಫೀಸ್ ಟ್ವೀಟ್ ಮಾಡಿದೆ. ಇದು ಮಲ್ಟಿಪ್ಲೆಕ್ಸ್ ಇತಿಹಾಸದಲ್ಲೇ ದಾಖಲೆಯ ಗಳಿಕೆಯಾಗಿದೆ.
ದೇಶದಾದ್ಯಂತ 173 ಪಿವಿಆರ್ ಸಿನಿಮಾ ಮಂದಿರಗಳಲ್ಲಿ ಈ ದಾಖಲೆ ಮಾಡಿದೆ. 2022ರಲ್ಲಿ ಪಿವಿಆರ್ ಚಿತ್ರಮಂದಿರಗಳಲ್ಲಿ RRR ಸಿನಿಮಾ 93.7 ಕೋಟಿ ರೂ ಗಳಿಸಿದ್ದರೆ , ಭೂಲ್ ಭೂಲಯ್ಯ 2 47.4 ಕೋಟಿ ಕೋಟಿ ರೂ ಗಳಿಸಿದೆ..
ಡಾಕ್ಟರ್ ಸ್ಟ್ರೇಂಜ್ 45.8 ಕೋಟಿ ರೂ , ವಿಕ್ರಮ್ ಸಿನಿಮಾ 26.6 ಕೋಟಿ ರೂಪಾಯಿ ಗಳಿಸಿದೆ..