ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ದಶಕಗಳ ಕಾಲ ಸಿನಿಮಾರಂಗದಲ್ಲಿ ಮೆರೆದು ನಂತರ ಕೆಲ ವರ್ಷಗಳಿಂದ ಸಿನಿಮಾರಂಗ ಜೊತೆಗೆ ರಾಜಕೀಯದಿಂದಲೂ ದೂರ ಉಳಿದಿದ್ದಾರೆ.. ಆದ್ರೆ ಎವರ್ ಗ್ರೀನ್ ನಟಿ , ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ಈಗಲೂ ಫ್ಯಾನ್ ಫಾಲೋವರ್ ಗಳೇನು ಕಡಿಮೆಯಿಲ್ಲ.. ಈಗಲೂ ಅವರು ಸಿನಿಮಾ ರಂಗಕ್ಕೆ ಮರಳಬೇಕೆಂದು ಅಭಿಮಾನಿಗಳು ಕಾಯ್ತಿದ್ದಾರೆ.. ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡುವ ಮನಸ್ಸು ಮಾಡಿದ್ದಾರೆ ರಮ್ಯಾ…
ಶೀಘ್ರದಲ್ಲೇ ರಮ್ಯಾ ಕಮ್ ಮಾಡಲಿದ್ಧಾರೆ ಎನ್ನಲಾಗ್ತಿದೆ.. ಆದ್ರೆ ಈ ಬಗ್ಗೆ ರಮ್ಯಾ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ..
ಆದ್ರೆ ರಮ್ಯಾ ಸಿನಿಮಾರಂಗದಿಂದ ದೂರ ಉಳಿದು 8 ವರ್ಷಗಳೇ ಕಳೆದ್ರೂ ಈಗಲೂ ಅವರೇ ನಂಬರ್ 1 ಅನ್ನೋದು ಮತ್ತೆ ಸಾಬೀತಾಗಿದೆ.. ಊರಿಗೊಬ್ಬಳೇ ಪದ್ಮಾವತಿ ಅನ್ನೋದು ಮತ್ತೊಮ್ಮೆ ಗೊತ್ತಾಗಿದೆ..
ಸಿನಿಮಾರಂಗದಿಂದ ನಂಟು ಕಳೆದುಕೊಂಡು ವರ್ಷಗಳೇ ಕಳೆದ್ರೂ ಟಾಪ್ ನಟಿಯರಲ್ಲಿ ರಮ್ಯಾ ಈಗಲೂ ಸ್ಥಾನವನ್ನ ಭದ್ರವಾಗಿ ಕಾಯ್ದುಕೊಂಡಿದ್ದಾರೆ… ಟಾಪ್ ಕನ್ನಡ ನಟಿಯರ ಪಟ್ಟಿಯಲ್ಲಿ ರಮ್ಯಾ 4ನೇಋ ಸ್ಥಾನದಲ್ಲಿದ್ದಾರೆ.
ಖಾಸಗಿ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯಲ್ಲಿ ರಮ್ಯಾ 4ನೇ ಸ್ಥಾನದಲ್ಲಿದ್ದಾರೆ. ಅಂದ್ಹಾಗೆ ಕನ್ನಡ ಇಂಡಸ್ಟ್ರಿ ಜೊತೆಗೆ ನಂಟು ಕಳೆದುಕೊಂಡಿರುವ ನಟಿ ರಶ್ಮಿಕಾ ಮಂದಣ್ಣಗೆ ಮೊದಲ ಸ್ಥಾನ ಸಿಕ್ಕಿದೆ. ಎರಡನೇ ಸ್ಥಾನದಲ್ಲಿ ರಚಿತಾ ರಾಮ್ , ಮೂರನೇ ಸ್ಥಾನದಲ್ಲಿ ರಾಧಿಕಾ ಪಂಡಿತ್ ಇದ್ದಾರೆ. ನಾಲ್ಕನೇ ಸ್ಥಾನದಲ್ಲಿ ರಮ್ಯಾ ಇದ್ದು , ತಮಗಿಂತಲೂ ಮೊದಲ ಮೂರು ಸ್ಥಾನದಲ್ಲಿರುವ ನಟಿಯರಿಗೆ ದಿವ್ಯಸ್ಪಂದನ ಸೋಷಿಯಲ್ ಮೀಡಿಯಾ ಮೂಲಕ ಅಭಿನಂದಿಸಿದ್ಧಾರೆ.,
ಇತ್ತ ಕನ್ನಡ ಸಿನಿಮಾರಂಗ ಮರೆತು ಪರ ಭಾಷೆಗಳಲ್ಲಿ ಮೆರೆಯುತ್ತಿರುವ ರಶ್ಮಿಕಾ ಕನ್ನಡದ ಟಾಪ್ ನಂಬರ್ ನಟಿ ಆಗಿ ಹೊರಹೊಮ್ಮಿದ್ದಾರೆ.. ಟಾಲಿವುಡ್ , ಬಾಲಿವುಡ್ , ಕಾಲಿವುಡ್ ನಲ್ಲಿ ಸ್ಟಾರ್ ಗಳ ಜೊತೆಗೆ ಬಣ್ಣ ಹಚ್ಚುತ್ತಿರುವ ರಶ್ಮಿಕಾ ಮೇಲೆ ಹೆಚ್ಚು ಸಿಟ್ಟಿರೋದು ಕೂಡ ಕನ್ನಡಿಗರಿಗೆ ಅಂದ್ರೂ ತಪ್ಪಾಗುವುದಿಲ್ಲ..
ರಶ್ಮಿಕಾ ಮಂದಣ್ಣ ಟಾಪ್ ಸ್ಥಾನದಲ್ಲಿದ್ದು , ರಮ್ಯಾ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ವಿಷ್ ಮಾಡಿದ್ದೇ ತಡ ಫುಲ್ ಖುಷ್ ಆಗ್ಬಿಟ್ಟಿದ್ದಾರೆ ರಚಿತಾ… ರಮ್ಯಾ ಟ್ವೀಟ್ ಗೆ ಪ್ರತಿಕ್ರಿಯಿಸುತ್ತಾ
‘ಮೇಡಂ.. ನೀವು ಹೇಳುತ್ತಿರುವುದು ಬಹಳ ದೊಡ್ಡ ವಿಚಾರ.. ಮೊದಲನೆಯದಾಗಿ ನಾನು ಇಂಡಸ್ಟ್ರಿಯಲ್ಲಿರುವುದು ಅದೃಷ್ಟ. ಜೊತೆಗೆ ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಆಭಾರಿಯಾಗಿದ್ದೇನೆ. ನನ್ನ ಪ್ರೀತಿ ಮತ್ತು ನನ್ನ ಪ್ರೀತಿಯನ್ನಷ್ಟೇ ನಿಮಗೆ ನೀಡುತ್ತೇನೆ’ ಎಂದು ಬರೆದಿದ್ದಾರೆ. ಆ ಕಾಮೆಂಟ್ ಅನ್ನು ರೀಟ್ವೀಟ್ ಮಾಡಿರುವ ರಮ್ಯಾ ಇದು ತುಂಬಾ ಖುಷಿ ಕೊಟ್ಟಿದೆ. ನಿಮಗೆ ಹೃದಯದಿಂದ ಪ್ರೀತಿಯನ್ನು ರವಾನಿಸುತ್ತಿದ್ದೇನೆ. ರಶ್ಮಿಖಾ ಮಂದಣ್ಣ ನಿಮಗೆ ಶುಭವಾಗಲಿ ಎಂದಿದ್ದಾರೆ.