ಕೊನೆಗೂ ದೇಶಾದ್ಯಂತ ಕಿಚ್ಚನ ಹವಾ ಶುರುವಾಗಿಬಿಟ್ಟಿದೆ.. ವಿಶ್ವಾದ್ಯಂತ ‘ವಿಕ್ರಾಂತ್ ರೋಣ’ ಅಬ್ಬರ ಆರಂಭವಾಗಿದೆ… 7 ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 50 ದೇಶಗಳಲ್ಲಿ ‘ವಿಕ್ರಾಂತ್ ರೋಣ’ 3ಡಿ , 2ಡಿ ಎರೆಡೂ ವರ್ಷನ್ ಗಳಲ್ಲಿ ರಿಲೀಸ್ ಆಗಿದೆ..
ಸಿಂಗಲ್ ಥಿಯೇಟರ್ ಗಳ ಮುಂದೆ ಫ್ಯಾನ್ಸ್ ಭರ್ಜರಿ ಸಂಭ್ರಮಾಚಾರಣೆ ಮಾಡಿದ್ದಾರೆ.. ಪಟಾಕಿ ಸಿನಿಮಾ ಕಿಚ್ಚನ ವಿಕ್ರಾಂತ್ ರೋಣ ಸಿನಿಮಾವನ್ನಅದ್ಧೂರಿಯಾಗಿಯೇ ವೆಲ್ ಕಮ್ ಮಾಡಿದ್ದಾರೆ..
ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಇಂದು ವಿಶ್ವಾದ್ಯಂತ ತೆರೆಕಾಣುತ್ತಿದ್ದೆ. ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಇಂದು ಮುಂಜಾನೆಯಿಂದಲೇ ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಜಮಾಯಿಸಿದ್ದಾರೆ.
ಅಂದ್ಹಾಗೆ ಕರ್ನಾಟಕದ 325 ಸಿಂಗಲ್ ಸ್ಕ್ರೀನ್‍ಗಳಲ್ಲಿ ವಿಕ್ರಾಂತ್ ರೋಣ ಸಿನಿಮಾ ತೆರೆಕಂಡಿದ್ದು, ಮೊದಲ ದಿನ ರಾಜ್ಯದಲ್ಲಿ ಬರೋಬ್ಬರಿ 2,500 ಶೋಗಳು ನಡೆಯಲಿದೆ. ಸುಮಾರು 900 ಸ್ಕ್ರೀನ್‍ಗಳಲ್ಲಿ 3ಡಿ ಹಾಗೂ 1,600 ಸ್ಕ್ರೀನ್‍ನಲ್ಲಿ 2ಡಿ ವರ್ಷನ್ ಬಿಡುಗಡೆಯಾಗಿದೆ. ಬೆಂಗಳೂರಿನ 40 ಮಲ್ಟಿಪ್ಲೆಕ್ಸ್‌ನಲ್ಲಿ 800 ಶೋ ಒಟ್ಟು 70 ಸಿಂಗಲ್ ಸ್ಕ್ರೀನ್‍ನಲ್ಲಿ 400 ಶೋ ಇದೆ.
ಭಾರತ ಸೇರಿದಂತೆ 50 ಕ್ಕೂ ಹೆಚ್ಚು ದೇಶಗಳಲ್ಲಿ ವಿಕ್ರಾಂತ್ ರೋಣ ಅಬ್ಬರಿಸುತ್ತಿದ್ದಾನೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕೆಲ್ವಿನ್ ಫರ್ನಾಂಡಿಸ್, ರವಿಶಂಕರ್ ಗೌಡ ಸೇರೆದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.
ಮತ್ತೊಂದೆಡೆ ಸಿನಿಮಾದ ಕಲೆಕ್ಷನ್ ದಾಖಲೆ ಲೆಕ್ಕಾಚಾರಗಳೂ ಜೋರಾಗಿದೆ.. ಸಿನಿಮಾ KGF 2 ದಾಖಲೆ ಮುರಿಯುತ್ತಾ , ಪುಷ್ಪ ರೆಕಾರ್ಡ್ ಬ್ರೇಕ್ ಮಾಡುತ್ತಾ , RRR ಗೆ ಟಕ್ಕರ್ ಕೊಡುತ್ತಾ ,, ಯಾವೆಲ್ಲಾ ರೆಕಾರ್ಡ್ ಬರೆಯಲಿದೆ.. ಹೀಗೆಲ್ಲಾ ಚರ್ಚೆಗಳು , ಇವೆ..
ಅಂದ್ಹಾಗೆ KGF 2 1000 ಕೋಟಿ ರೂ.ಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ… ಈ ಸಿನಿಮಾದ ರೆಕಾರ್ಡ್ ಮುರಿಯಲಿದ್ಯಾ ವಿಕ್ರಾಂತ್ ರೋಣ ಸಿನಿಮಾ ಮುಂದಿನ ದಿನಗಳಲ್ಲಿ ಕಾದು ನೋಡ್ಬೇಕಿದೆ..
ಫಸ್ಟ್ ಡೇ ಕಲೆಕ್ಷನ್ ಬಗ್ಗೆ ನಾಳೆ ಗೊತ್ತಾಗಲಿದ್ದು ಕುತೂಹಲ ಹೆಚ್ಚಾಪಗಿದೆ.. ಇನ್ನೂ ಪ್ರೀ ಬುಕಿಂಗ್ ಒಂದು ವಾರದಿಂದಲೇ ಆರಂಭವಾಗಿತ್ತು.. ಇದೀಗ ಬಹುತೇಕ ಮಲ್ಟಿಫ್ಲೆಕ್ಟ್ ಸಿಂಗಲ್ ಥಿಯೇಟರ್ ಗಳಲ್ಲಿನ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದ್ದು , ಅನೇಕರಿಗೆ ಫಸ್ಟ್ ಡೇ ಟಿಕೆಟ್ ಸಿಕ್ಕಿಲ್ಲ.. ಮೂಲಗಳ ಪಪ್ರಕಾರ ಇನ್ನೂ ಒಒಂದು ವಾರ ಹೌಸ್ ಫುಲ್ ಓಡಲಿದ್ದು , ಟಿಕೆಟ್ ಗಳು ಸಿಗುವುದು ಕಷ್ಟವೆನ್ನಲಾಗ್ತಿದೆ..