Liger : ‘ವಾಟ್ ಲಗಾ ದೇಂಗೆ’ ಹಾಡಿಗೆ ರಶ್ಮಿಕಾ ರಿಯಾಕ್ಷನ್….!!!
ವಿಜಯ್ ದೇವರಕೊಂಡ ಅವರ ‘ಲೈಗರ್’ ಭಾರತದ ಮುಂದಿನ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಒಂದು.. ಪುರಿ ಜಗನ್ನಾಥ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಸಿನಿಮಾ ಸಾಕಷ್ಟು ವಿಚಾರವಾಗಿ ಈಗಾಗಲೇ ಕ್ರೇಜ್ ಹುಟ್ಟುಹಾಕಿದೆ.. ಈ ಸಿನಿಮಾ ಆಗಸ್ಟ್ 25 ಕ್ಕೆ ರಿಲೀಸ್ ಆಗಲಿದ್ದು ಟ್ರೇಲರ್ ಭರ್ಜರಿ ಸೌಂಡ್ ಮಾಡಿದೆ.. ಇದರ ಬೆನ್ನಲ್ಲೇ ಇದೀಗ ಈ ಸಿನಿಮಾದ ಮತ್ತೊಂದು ಹಾಡು ಸಹ ರಿಲೀಸ್ ಆಗಿ ಸೆನ್ಷೇಷನ್ ಸೃಷ್ಟಿ ಮಾಡಿದೆ..
‘ವಾಟ್ ಲಗಾ ದೇಂಗೆ’ ಹಾಡಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ.. ಈ ಹಾಡನ್ನ ನಟಿ ರಶ್ಮಿಕಾ ಮಂದಣ್ಣ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ರಿಯಾಕ್ಟ್ ಮಾಡಿದ್ದಾರೆ..
ಟ್ವಿಟರ್ ನಲ್ಲಿ ಫೈರ್ ಎಮೋಜಿ ಮೂಲಕ ರಿಯಾಕ್ಟ್ ಮಾಡಿದ್ರೆ , ಅದಕ್ಕೆ ಪ್ರತಿಯಾಗಿ ವಿಜಯ್ ದೇವರಕೊಂಡ ಹಾರ್ಟ್ ಇಮೋಜಿ ನೀಡಿ ಪ್ರತ್ಯುತ್ತರ ನೀಡಿದ್ದಾರೆ..
ಅನನ್ಯ ಪಾಂಡೆ ಮತ್ತು ವಿಜಯ್ ದೇವರಕೊಂಡ ಅವರ ಅಭಿನಯದ ಲೈಗರ್ ಚಿತ್ರದ ಬಹುನಿರೀಕ್ಷಿತ ಟ್ರೇಲರ್ ಕಳೆದ ವಾರ ಬಿಡುಗಡೆಯಾಯಿತು ಮತ್ತು ಈಗ ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
ವಾಟ್ ಲಗಾ ದೇಂಗೆ ಲೈಗರ್ ನ ಸೂಪರ್-ಸ್ಪೆಷಲ್ ಹಾಡು. ಈ ಹಾಡನ್ನು ವಿಜಯ್ ದೇವರಕೊಂಡ ಅವರೇ ಹಾಡಿದ್ದಾರೆ ಮತ್ತು ಸುನಿಲ್ ಕಶ್ಯಪ್ ಅವರು ಸಂಯೋಜಿಸಿದ್ದಾರೆ ಮತ್ತು ನಿರ್ದೇಶಕ ಪುರಿ ಜಗನ್ನಾಥ್ ಬರೆದಿದ್ದಾರೆ.
ಅಂದ್ಹಾಗೆ ಸಮಂತಾ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಸಹ ಮುಂಬರುವ ಪ್ಯಾನ್ ಇಂಡಿಯಾ ಸಿನಿಮಾ ‘ಖುಷಿ’ಯಲ್ಲಿ ಒಟ್ಟಾಗಿ ಕಾಣಿಸಿಕೊಳ್ತಿದ್ದು ಈ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ..