ವಿಜಯ್ ದೇವರಕೊಂಡ ಅವರ ‘ಲೈಗರ್’ ಭಾರತದ ಮುಂದಿನ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಒಂದು.. ಪುರಿ ಜಗನ್ನಾಥ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಸಿನಿಮಾ ಸಾಕಷ್ಟು ವಿಚಾರವಾಗಿ ಈಗಾಗಲೇ ಕ್ರೇಜ್ ಹುಟ್ಟುಹಾಕಿದೆ.. ಈ ಸಿನಿಮಾ ಆಗಸ್ಟ್ 25 ಕ್ಕೆ ರಿಲೀಸ್ ಆಗಲಿದ್ದು ಟ್ರೇಲರ್ ಭರ್ಜರಿ ಸೌಂಡ್ ಮಾಡಿದೆ.. ಇದರ ಬೆನ್ನಲ್ಲೇ ಇದೀಗ ಈ ಸಿನಿಮಾದ ಮತ್ತೊಂದು ಹಾಡು ಸಹ ರಿಲೀಸ್ ಆಗಿ ಸೆನ್ಷೇಷನ್ ಸೃಷ್ಟಿ ಮಾಡಿದೆ..
‘ವಾಟ್ ಲಗಾ ದೇಂಗೆ’ ಹಾಡಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ.. ಈ ಹಾಡನ್ನ ನಟಿ ಸಮಂತಾ ರುಥ್ ಪ್ರಭು ಮೆಚ್ಚಿಕೊಂಡಿದ್ದು , ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ರಿಯಾಕ್ಟ್ ಮಾಡಿದ್ದಾರೆ.. ಈ ಹಾಡನ್ನ ‘ ಅನ್ ಬಿಲೀವೆಬಲಿ ಕೂಲ್’ ಎಂದು ಕರೆದಿದ್ದಾರೆ.
ಅನನ್ಯ ಪಾಂಡೆ ಮತ್ತು ವಿಜಯ್ ದೇವರಕೊಂಡ ಅವರ ಅಭಿನಯದ ಲೈಗರ್ ಚಿತ್ರದ ಬಹುನಿರೀಕ್ಷಿತ ಟ್ರೇಲರ್ ಕಳೆದ ವಾರ ಬಿಡುಗಡೆಯಾಯಿತು ಮತ್ತು ಈಗ ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
ವಾಟ್ ಲಗಾ ದೇಂಗೆ ಲೈಗರ್ ನ ಸೂಪರ್-ಸ್ಪೆಷಲ್ ಹಾಡು. ಈ ಹಾಡನ್ನು ವಿಜಯ್ ದೇವರಕೊಂಡ ಅವರೇ ಹಾಡಿದ್ದಾರೆ ಮತ್ತು ಸುನಿಲ್ ಕಶ್ಯಪ್ ಅವರು ಸಂಯೋಜಿಸಿದ್ದಾರೆ ಮತ್ತು ನಿರ್ದೇಶಕ ಪುರಿ ಜಗನ್ನಾಥ್ ಬರೆದಿದ್ದಾರೆ.
ಅಂದ್ಹಾಗೆ ಸಮಂತಾ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಸಹ ಮುಂಬರುವ ಪ್ಯಾನ್ ಇಂಡಿಯಾ ಸಿನಿಮಾ ‘ಖುಷಿ’ಯಲ್ಲಿ ಒಟ್ಟಾಗಿ ಕಾಣಿಸಿಕೊಳ್ತಿದ್ದು ಈ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ..
https://twitter.com/Samanthaprabhu2/status/1552862103442460674?ref_src=twsrc%5Etfw%7Ctwcamp%5Etweetembed%7Ctwterm%5E1552862103442460674%7Ctwgr%5Efffd8487e454120a16948b797315214e4936155c%7Ctwcon%5Es1_&ref_url=https%3A%2F%2Fwww.indiatoday.in%2Fmovies%2Fregional-cinema%2Fstory%2Fsamantha-is-loving-vijay-deverakonda-s-liger-song-waat-laga-denge-calls-it-unbelievably-true-1981324-2022-07-29