ಗುಜರಾತಿ ಸೇರಿದಂತೆ ಹಲವು ಭಾಷೆಗಳ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದ ‘ಮಹಾಭಾರತ’ ಧಾರಾವಾಹಿ ಖ್ಯಾತಿಯ ನಟ ರಸಿಕ್ ಧವೆ ವಿಧಿವಶರಾಗಿದ್ದಾರೆ.. ಮುಂಬೈನ ನಿವಾಸದಲ್ಲಿ ( ಜುಲೈ 29) ರಸಿಕ್ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ..
65 ವರ್ಷದ ರಸಿಕ್ ದವೆ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಸಹ ಪಡೆಯುತ್ತಿದ್ದರು. ಆದ್ರೆ ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ರಸಿಕ್ ತಮ್ಮ ಪತ್ನಿ ನಟಿ ಕೇತಕಿ ದೇವಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ರಸಿಕ್ ಅವರ ಅಗಲಿಕೆ ಕಲಾವಿದರು ಕಂಬನಿ ಮಿಡಿದ್ದಾರೆ.. ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ.
ಇವರು ಗುಜರಾತಿಯ ಸೀರಿಯಲ್ ಪುತ್ರವಧು ಮೂಲಕ ಖ್ಯಾತಿ ಗಳಿಸಿದ್ದಾರೆ. ಜೊತೆಗೆ ಮಹಾಭಾರತ ಧಾರಾವಾಹಿಯಲ್ಲೂ ಫೇಮಸ್ ಆಗಿದ್ದರು..