ನೀನೇನು ಮೆಗಾಸ್ಟಾರಾ..? ಚಂದನ್ ಗೆ ಕಪಾಳಮೋಕ್ಷ
ಸಾವಿತ್ರಮ್ಮ ಗಾರಿ ಅಬ್ಬಾಯಿ ಎಂಬ ತೆಲುಗು ಧಾರವಾಹಿಯಲ್ಲಿ ನಟಿಸುತ್ತಿರುವ ನಟ ಚಂದನ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಸೀರಿಯಲ್ ತಂತ್ರಜ್ಞರ ಜೊತೆ ಚಂದನ್ ಕಿರಿಕ್ ಮಾಡಿಕೊಂಡಿದ್ದು, ಅವರಿಗೆ ಕಪಾಳಮೋಕ್ಷ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಂದನ್, ನಾನು ಸುಮ್ಮನೆ ರೆಸ್ಟ್ ಮಾಡ್ತಿದ್ದೆ ಅಷ್ಟೇ. ಕ್ಯಾಮೆರಾ ಸಹಾಯಕ ಕಣ್ಣೀರಿಟ್ಟು ಡ್ರಾಮಾ ಮಾಡಿದ್ದಾನೆ. ನನ್ನ ಅಮ್ಮನ ಆರೋಗ್ಯ ಸರಿಯಿಲ್ಲ ಅಂತ ಚಿಂತೆಯಲ್ಲಿದ್ದೆ. ಇದನ್ನೇ ಇಟ್ಟುಕೊಂಡು ಎಲ್ಲರೂ ರಂಪಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಯಾವ ಕಾರಣಕ್ಕಾಗಿ ಈ ಹಲ್ಲೆ ನಡೆದಿದೆ ಎಂದು ಇನ್ನಷ್ಟೇ ಬೆಳಕಿಗೆ ಬರಬೇಕಾಗಿದೆ. ಮೊದಲ ಚಂದನ್ ಅವರೇ ಕ್ಯಾಮರಾ ಮ್ಯಾನ್ ಸಹಾಯಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ ಹಲವು ವರ್ಷಗಳಿಂದ ಚಂದನ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದ ರಾಧಾ ಕಲ್ಯಾಣ, ಲಕ್ಷ್ಮೀ ಬಾರಮ್ಮ ಮುಂತಾದ ಧಾರವಾಹಿಯಲ್ಲಿ ಅವರು ನಟಿಸಿದ್ದಾರೆ. ಸಾವಿತ್ರಮ್ಮ ಗಾರಿ ಅಬ್ಬಾಯಿ ಮೂಲಕ ಅವರು ತೆಲುಗು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು.