ಖ್ಯಾತ ಬೆಂಗಾಲಿ ಗಾಯಕಿ ನಿರ್ಮಲಾ ಮಿಶ್ರಾ ವಿಧಿವಶ
ಖ್ಯಾತ ಬೆಂಗಾಲಿ ಹಿರಿಯ ಗಾಯಕಿ ನಿರ್ಮಲಾ ಮಿಶ್ರಾ ಅವರು ವಿಧಿವಶರಾಗಿದ್ದಾರೆ.. ನಿರ್ಮಲಾ ಮಿಶ್ರಾ ಅವರಿಗೆ 81 ವರ್ಷ ವಯಸ್ಸಾಗಿತ್ತು.. ಕೆಲ ದಿನಗಳಿಂದ ಇವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ..
ಇದೀಗ ಭಾನುವಾರ ಮಧ್ಯರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಹಲವಾರು ಬೆಂಗಾಲಿ ಮತ್ತು ಒಡಿಯಾ ಚಿತ್ರಗಳಲ್ಲಿನ ಹಾಡುಗಳಿಗೆ ಧ್ವನಿ ನೀಡಿದ್ದಾರೆ.
ಭಾನುವಾರ ಮಧ್ಯರಾತ್ರಿ 12.05 ರ ಸುಮಾರಿಗೆ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನ ತಕ್ಷಣವೇ ಆಸ್ಒತ್ರೆಗೆ ಕರೆದೊಯ್ಯಲಾಯ್ತು. ಆದ್ರೆ ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಾಗಿತ್ತು.
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ 1938 ರಲ್ಲಿ ಜನಿಸಿದ ನಿರ್ಮಲಾ ಮಿಶ್ರಾ ಅವರು ಸಂಗೀತ ಸುಧಾಕರ್ ಬಾಲಕೃಷ್ಣ ದಾಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ಒಡಿಯಾ ಸಂಗೀತಕ್ಕೆ ಅವರ ಜೀವಮಾನದ ಕೊಡುಗೆಗಾಗಿ ಗಾಯಕರಿಗೆ ನೀಡಲಾಗುತ್ತದೆ.
ಇವರು ಹಾಡಿರುವ ಜನಪ್ರಿಯ ಬೆಂಗಾಲಿ ಹಾಡುಗಳಲ್ಲಿ ‘ಎಮಾನ್ ಏಕ್ತಾ ಜಿನುಕ್’, ‘ಬೋಲೋ ತೊ ಅರ್ಷಿ’ ಮತ್ತು ‘ಈ ಬಂಗ್ಲಾರ್ ಮತಿ ತೆ’ ಸೇರಿವೆ..