ಬಾಲಿವುಡ್ ನ ಸ್ಟಾರ್ ಅಂಡ್ ಡೇರಿಂಗ್ ನಿರ್ದೇಶಕ , ಮಾಸ್ ಸಿನಿ ಪ್ರಿಯರ ಫೇವರೇಟ್ ಆಗಿರುವ ರೋಹಿತ್ ಶೆಟ್ಟಿ ಹಾಗೂ ಅಜಯ್ ದೇವಗನ್ ಕಾಂಬಿನೇಷನ್ ನಲ್ಲಿ ಇದೀಗ ಮತ್ತೊಂದು ಸಿನಿಮಾ ಮೂಡಿಬರುತ್ತಿದೆ..
ಸಿಂಗಮ್ 3 ಸಿನಿಮಾವನ್ನ ರೋಹಿತ್ ಶೆಟ್ಟಿ ಘೋಷಣೆ ಮಾಡಿದ್ದಾರೆ.. ಸದ್ಯ ರೋಹಿತ್ ಖತ್ರೋಂಕೆ ಕಿಲಾಡಿ ರಿಯಾಲಿಟಿ ಶೋ ನಡೆಸಿಕೊಡ್ತಿದ್ರೆ , ಇತ್ತ ಅಜಯ್ ದೇವಗನ್ ಅವರು ತಮ್ಮದೇ ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಈಗಾಗಲೇ ಪ್ರಿ ಪ್ರೊಡಕ್ಷನ್ ಕೆಲಸ ಶುರುವಾಗಿದೆ ಎಂದು ಅಜಯ್ ದೇವಗನ್ ಅವರು ಸಂದರ್ಶನ ಒಂದ್ರಲ್ಲಿ ಹೇಳಿಕೊಂಡಿದ್ಧಾರೆ..
“ನಾವು ಈಗಾಗಲೇ ಸಿಂಗಂ 3 ಚಿತ್ರದ ಕೆಲಸ ಆರಂಭಿಸಿದ್ದೇವೆ. ನಾನು ಔಟ್ ಮತ್ತು ಔಟ್ ಸಿಂಗಂ ಚಿತ್ರ ಮಾಡಿ ಬಹಳ ದಿನವಾಗಿದೆ. ಮುಂದಿನ ವರ್ಷ ಏಪ್ರಿಲ್‌ನಲ್ಲಿ ನಾವು ಚಿತ್ರೀಕರಣವನ್ನು ಪ್ರಾರಂಭಿಸುತ್ತೇವೆ. ಅಜಯ್ ಸರ್ , ಅವರ ಕಮಿಟ್‌ಮೆಂಟ್‌ಗಳಲ್ಲಿ ಬ್ಯುಸಿ ಮತ್ತು ನಾನು ಸರ್ಕಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದೇನೆ. ಆದ್ದರಿಂದ, ಏಪ್ರಿಲ್ ವೇಳೆಗೆ, ನಾವು ಸಿಂಗಮ್ 3 ಅನ್ನು ಪ್ರಾರಂಭಿಸುತ್ತೇವೆ. ಇದು ನಾವು ಇಲ್ಲಿಯವರೆಗೆ ಮಾಡಿದ ಅತಿದೊಡ್ಡ ಕಾಪ್ ಯೂನಿವರ್ಸ್ ಆಗಲಿದೆ” ಎಂದು ರೋಹಿತ್ ಹೇಳಿದ್ದಾರೆ..