ರಾಮ್ ಗೋಪಾಲ್ ವರ್ಮಾ ಅವರ ಅಂಡರ್ ವರ್ಲ್ಡ್ ಗ್ಯಾಂಗ್ ಸ್ಟರ್ ಸಿನಿಮಾ ಸತ್ಯ 1998 ರಲ್ಲಿ ಸೂಪರ್ ಹಿಟ್ ಬ್ಲಾಕ್ ಬಾಸ್ಟರ್ ಸಿನಿಮಾವಾಗಿತ್ತು.. ಸಿನಿಮಾ ಬಂದು ಸುಮಾರು 24 ವರ್ಷಗಳೇ ಕಳೆದಿದೆ.. ಈ ಸಿನಿಮಾ ಸಿನಿಮಾ ಇಂಡಸ್ಟ್ರಿಯಲ್ಲಿ ಆಗ ಹೊಸದೊಂದು ಮೈಲುಗಲ್ಲು ಸೃಷ್ಟಿಸಿತ್ತು.. ಸೆನ್ಷೇಷನ್ ಆಗಿತ್ತು..
ಈ ಸಿನಿಮಾದಲ್ಲಿ ಜೆ ಡಿ ಚಕ್ರವರ್ತಿ ನಟಿಸಿದ್ದರು.. ಈ ಸಿನಿಮಾ ಅವರಿಗೆ ಸ್ಟಾರ್ ಡಮ್ ತಂದುಕೊಟ್ಟಂತಹ ಸಿನಿಮಾ.. ಮನೋಜ್ ಬಾಜಪೇಯಿ, ಶೆಫಾಲಿ ಶಾ, ಸೌರಭ್ ಶುಕ್ಲಾ ಸೇರಿದಂತೆ ಹಲವು ಸ್ಟಾರ್ ನಟರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು..
ಇತ್ತೀಚೆಗೆ ಈ ಸಿನಿಮಾದ ಸಂದರ್ಭದಲ್ಲಿ ನಡೆದಂತಹ ಘಟನೆಗಳನ್ನ ನೆನಪು ಮಾಡಿಕೊಳ್ತಾ ಸಂದರ್ಶನವೊಂದರಲ್ಲಿ ಮಾತನಾಡಿರುವ ಚಕ್ರವರ್ತಿ ಶಾರುಖ್ ಖಾನ್ ಅವರ ಬಗ್ಗೆ ಶಾಕಿಂಗ್ ವಿಚಾರವನ್ನ ಬಿಚ್ಚಿಟ್ಟಿದ್ದಾರೆ..
ಹೌದು..! ಶಾರುಖ್ ಖಾನ್ ಅವರಿಂದ ಚಕ್ರವರ್ತಿ ಅವರ ಮನಸ್ಸಿಗೆ ನೋವುಂಟಾಗಿತ್ತೆಂಬ ವಿಚಾರವನ್ನ ಅವರು ಹೇಳಿಕೊಂಡಿರುವುದು ಹೀಗೆ..!!!
“ ಆಗ ಸತ್ಯ ಬಿಡುಗಡೆಗೆ ಹಿಂದಿನ ದಿನ ರಾತ್ರಿ ಮಣಿರತ್ನಂ ಅವರಿಂದ ಕರೆ ಬಂದಿತ್ತು.. ಮಣಿರತ್ನಂ ಈಗಾಗಲೇ ಚಿತ್ರವನ್ನು ವೀಕ್ಷಿಸಿದ್ದರು.. ಆಗ ಚಿತ್ರ ಇಷ್ಟಪಟ್ಟಿದ್ದೀರಾ ಎಂದು ಕೇಳಿದಾಗ, ನಿರ್ದೇಶಕರು ಬೇರೆಯವರಿಗೆ ಫೋನ್ ನೀಡಿದರು. ಸ್ಟಾರ್ ಡಮ್ ಇಲ್ಲದೇ ಬುದ್ಧಿವಂತ ಅಥವಾ ಪ್ರತಿಭಾವಂತರಲ್ಲದ ಕಾರಣ, ಚಿತ್ರವು ವಿಫಲವಾದರೆ ಏನು ಮಾಡಬೇಕು ಎಂದಿದ್ದ ಶಾರುಖ್ ಖಾನ್, ” ಈ ಸಿನಿಮಾ ಸರಳವಾಗಿದೆ. ಸತ್ಯ ಮೇ ಜೋ ಜೆಡಿ ಚಕ್ರವರ್ತಿ ಹೈ ನಾ ಉಸ್ಕೋ ನಿಕಾಲ್ ಕರ್ ಫಿಲ್ಮ್ ಮೇ ಶಾರುಖ್ ಖಾನ್ ಕೋ ಡಾಲ್ ದೋ ( ಸಿನಿಮಾದಲ್ಲಿ ಜೆಡಿ ಚಕ್ರವರ್ತಿಯನ್ನ ತೆಗೆದುಹಾಕಿ ಆ ಜಾಗದಲ್ಲಿ ಶಾರುಖ್ ಖಾನ್ ರನ್ನ ರೀಪ್ಲೇಸ್ ಮಾಡುವಂತೆ ) ಕೇಳಲಾಗಿತ್ತು ” ಎಂದು ಹೇಳಿದ್ದಾರೆ.
ಜೆಡಿ ಅವರು ಒಪ್ಪದೇ ಹೋದಾಗ ಶಾರುಖ್ ಖಾನ್ ಅವರು “ಅಗರ್ ಆಪ್ ಮುಜೆ ಫಿಲ್ಮ್ ಮೇ ಡಾಲೋಗೆ ತೋ ಸಿನಿಮಾ ಚಿತ್ರ ಕಾ ಒನ್ ಟು ಕಾ ಫೋರ್ ಕರ್ ದೂಂಗಾ” ಎಂದು ಧಮ್ಕಿ ಹಾಕಿದ್ದರು ಎಂದಿದ್ದಾರೆ..
ಆಗ ಪಠಾಣ್ ನಟ ತನ್ನ ಕಾಲನ್ನು ಎಳೆಯುತ್ತಿದ್ದಾನೆ ಎಂದು ಜೆಡಿಗೆ ಅರ್ಥವಾಯಿತು. ಶಾರುಖ್ ನಂತರ ನಟನನ್ನು ಹೊಗಳಿದರು ಮತ್ತು ಅವರನ್ನು “ಬ್ಲಡಿ ಗುಡ್” ಎಂದು ಕರೆದರು. ಚಿತ್ರ ಕೂಡ ಅದ್ಭುತವಾಗಿದೆ ಎಂದು ಅವರು ಹೇಳಿದರು.