Tollywood : ಇಂದಿನಿಂದ ಪುಷ್ಪ 2 ಸೇರಿದಂತೆ ಎಲ್ಲಾ ತೆಲುಗು ಸಿನಿಮಾಗಳ ಶೂಟಿಂಗ್ ಬಂದ್..!!
ಚಿತ್ರಮಂದಿರಗಳ ಸಮಸ್ಯೆಗಳ ಜೊತೆಗೆ ಇನ್ನೂ ಕೆಲ ವಿಚಾರಗಳ ಬಗೆಹರಿಸುವಿಕೆಗಾಗಿ ಇತ್ತೀಚೆಗೆ ತೆಲುಗು ಸಿನಿಮಾ ನಿರ್ಮಾಕರು ಒಟ್ಟಾಗಿ ಸಭೆ ನಡೆಸಿ ಕೆಲ ತೀರ್ಮಾನಗಳನ್ನ ತೆಗೆದುಕೊಂಡಿದ್ದಾರೆ.. ಇದೀಗ ಇಂದಿನಿಂದ ಎಲ್ಲಾ ತೆಲುಗು ಸಿನಿಮಾಗಳ ಶೂಟಿಂಗ್ ಬಂದ್ ಮಾಡಲಾಗಿದೆ..
ಅಂದ್ಹಾಗೆ ನಿರ್ಮಾಪಕರ ತೀರ್ಮಾನಕ್ಕೆ ಬಹುತೇಕರು ವಿರೋಧ ವ್ಯಕ್ತಪಡಿಸಿದ್ದಾರೆ.. ಆದ್ರೆ ನಿರ್ಮಾಪಕರ ಗಿಲ್ಡ್ ನ ಈ ನಿರ್ಣಯಕ್ಕೆ ತೆಲುಗು ಫಿಲಂ ಚೇಂಬರ್ ಬೆಂಬಲ ನೀಡಿದೆ..
48 ಸದಸ್ಯರು ಭಾಗವಹಿಸಿದ್ದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಿಂದ ಹೊಸ ಚಿತ್ರಗಳ ನಿರ್ಮಾಣ ಮಾತ್ರವಲ್ಲದೆ ನಿರ್ಮಾಣದ ಅಂತಿಮ ಹಂತದಲ್ಲಿರುವ ಚಿತ್ರಗಳ ನಿರ್ಮಾಣವೂ ಸ್ಥಗಿತಗೊಳ್ಳುತ್ತದೆ. ಆದರೆ, ಹೈದರಾಬಾದ್‌ನಲ್ಲಿ ಬೇರೆ ಭಾಷೆಯ ಸಿನಿಮಾಗಳ ಚಿತ್ರೀಕರಣದ ಮೇಲೆ ನಿರ್ಧಾರದಿಂದ ಯಾವುದೇ ಪರಿಣಾಮ ಬೀರುವುದಿಲ್ಲ.
ಟಾಲಿವುಡ್ ನಿರ್ಮಾಪಕರು ಸೋಮವಾರದಿಂದ ಚಲನಚಿತ್ರ ಚಿತ್ರೀಕರಣವನ್ನು ನಿಲ್ಲಿಸುವುದಾಗಿ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಭಾನುವಾರ ಘೋಷಿಸಿದೆ.
ಹೈದರಾಬಾದ್‌ನಲ್ಲಿ ನಡೆದ ಫಿಲಂ ಚೇಂಬರ್‌ನ ಸಾಮಾನ್ಯ ಸಭೆಯು ಆಗಸ್ಟ್ 1 ರಿಂದ ಚಲನಚಿತ್ರ ಚಿತ್ರೀಕರಣವನ್ನು ನಿಲ್ಲಿಸಲು ಸಕ್ರಿಯ ತೆಲುಗು ನಿರ್ಮಾಪಕರ ಸಂಘ (ಎಟಿಪಿಜಿ) ತೆಗೆದುಕೊಂಡ ನಿರ್ಧಾರವನ್ನು ಬೆಂಬಲಿಸಲು ನಿರ್ಧರಿಸಿತು.
ಈ ನಿರ್ಧಾರವು ಪ್ರಮುಖ ತಾರೆಗಳಾದ ಚಿರಂಜೀವಿ, ಪವನ್ ಕಲ್ಯಾಣ್, ಪ್ರಭಾಸ್, ಮಹೇಶ್ ಬಾಬು, ಅಲ್ಲು ಅರ್ಜುನ್, ಜೂನಿಯರ್ ಎನ್‌ಟಿಆರ್ ಮತ್ತು ವಿಜಯ್ ದೇವರಕೊಂಡ ಅವರ ಸಿನಿಮಾಗಳ ನಿರ್ಮಾಣಕ್ಕೆ ಬ್ರೇಕ್ ಹಾಕಲಿದೆ.