ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಅಬ್ಬರಿಸಿ ಬೊಬ್ಬಿರಿಯುತ್ತಿದೆ.. ಥಿಯೇಟರ್ ಗಳಲ್ಲಿ ಸಿನಿಮಾ ಹೌಸದ ಫುಲ್ ಪ್ರದರ್ಶನ ಕಾಣ್ತಿದೆ.. ಬಾಕ್ಸ್ ಆಫೀಸ್ ನಲ್ಲಿ ಬಾಲಿವುಡ್ ಸಿನಿಮಾಗಳನ್ನ ಮಕಾಡೆ ಮಲಗಿಸಿದೆ..
ಆದ್ರೆ ಮತ್ತೊಂದ್ ಕಡೆ ಸಿನಿಮಾಗೆ ಪೈರೆಸಿ ಕಾಟವೂ ಹೊಡೆತ ನೀಡ್ತಿದೆ.. ಇದೆಲ್ಲದರ ನಡುವೆಯೂ ಸಿನಿಮಾ ಕೋಟಿ ಕೋಟಿ ಬಾಚುತ್ತಿದೆ.. ಇತ್ತೀಚೆಗೆ ರಿಲೀಸ್ ಆಗಿ ಫ್ಲಾಪ್ ಎನಿಸಿಕೊಂಡಿರುವ ಬಾಲಿವುಡ್ ನ ಬಹುಕೋಟಿ ವೆಚ್ಚದ ರಣಬೀರ್ ಕಪೂರ್ ಅಭಿನಯದ ಶಂಶೇರಾ ಸಿನಿಮಾ ಮಾಡಿದ ಒಟ್ಟಾರೆ ಕಲೆಕ್ಷನ್ ನನ್ನ ವಿಕ್ರಾಂತ್ ರೋಣ ಕೇವಲ ಮೂರೇ ದಿನಗಳಲ್ಲಿ ಮಾಡಿದೆ..
ಅಂದ್ಹಾಗೆ ಸಿನಿಮಾ ಈ ಶೀಘ್ರದಲ್ಲೇ 100 ಕೋಟಿ ಕ್ಲಬ್ ಸೇರಲಿದೆ. ಇಲ್ಲಿಯವರೆಗೆ, ಚಿತ್ರವು ಸುಮಾರು 80 ಕೋಟಿ ರೂಪಾಯಿ ಗಳಿಸಿದೆ.. ಸಿನಿಮಾ ಶೀಘ್ರವೇ 100 ಕೋಟಿ ರೂಪಾಯಿ ಗಳಿಸಲಿದೆ..