ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಅಬ್ಬರಿಸಿ ಬೊಬ್ಬಿರಿಯುತ್ತಿದೆ.. ಥಿಯೇಟರ್ ಗಳಲ್ಲಿ ಸಿನಿಮಾ ಹೌಸ ಫುಲ್ ಪ್ರದರ್ಶನ ಕಾಣ್ತಿದೆ.. ಬಾಕ್ಸ್ ಆಫೀಸ್ ನಲ್ಲಿ ಬಾಲಿವುಡ್ ಸಿನಿಮಾಗಳನ್ನ ಮಕಾಡೆ ಮಲಗಿಸಿದೆ..
ಆದ್ರೆ ಮತ್ತೊಂದ್ ಕಡೆ ಸಿನಿಮಾಗೆ ಪೈರೆಸಿ ಕಾಟವೂ ಹೊಡೆತ ನೀಡ್ತಿದೆ.. ಇದೆಲ್ಲದರ ನಡುವೆಯೂ ಸಿನಿಮಾ ಕೋಟಿ ಕೋಟಿ ಬಾಚುತ್ತಿದೆ.. ಇತ್ತೀಚೆಗೆ ರಿಲೀಸ್ ಆಗಿ ಫ್ಲಾಪ್ ಎನಿಸಿಕೊಂಡಿರುವ ಬಾಲಿವುಡ್ ನ ಬಹುಕೋಟಿ ವೆಚ್ಚದ ರಣಬೀರ್ ಕಪೂರ್ ಅಭಿನಯದ ಶಂಶೇರಾ ಸಿನಿಮಾ ಮಾಡಿದ ಒಟ್ಟಾರೆ ಕಲೆಕ್ಷನ್ ನನ್ನ ವಿಕ್ರಾಂತ್ ರೋಣ ಕೇವಲ ಮೂರೇ ದಿನಗಳಲ್ಲಿ ಮಾಡಿದೆ..
ಅಂದ್ಹಾಗೆ ಮೂರೇ ದಿನಗಳಲ್ಲಿ ಸಿನಿಮಾ 80 ಕೋಟಿ ಗಳಿಸಿದೆ ಎನ್ನಲಾಗ್ತಿದೆ.. ವಾರಾಂತ್ಯಕ್ಕೆ ಸಿನಿಮಾ ಪಕ್ಕಾ 100 ಕೋಟಿ ಕ್ಲಬ್ ಸೇರುವ ನಿರೀಕ್ಷೆಯಿದೆ..
ಪೃಥ್ವಿರಾಜ್ ಶಂಶೇರಾ ಸಿನಿಮಾಗಳ ಒಟ್ಟಾರೆ ಕಲೆಕ್ಷನ್ ಮೂರೇ ದಿನಕ್ಕೆ ವಿಕ್ರಾಂತ್ ರೋಣ ಗಳಿಸಿದ್ದು ಮತ್ತೊಮ್ಮೆ ಬಾಲಿವುಡ್ ಮುಂದೆ ಸೌತ್ ಸಿನಿಮಾ ಅದ್ರಲ್ಲೂ KGF 2 ,ಚಾರ್ಲಿ ನಂತರ ಕನ್ನಡದ ಸಿನಿಮಾ ಈ ಲೆವೆಲ್ ಗೆ ಅಬ್ಬರಿಸಿದೆ..
ಪುಷ್ಪ , RRR , KGF 2 , 777 ಚಾರ್ಲಿ ,ವಿಕ್ರಂ , ಈಗ ಕಿಚ್ಚ ಸುದೀಪ್ ನಟನೆಯ 3ಡಿ ಫ್ಯಾಂಟಸಿ ಥ್ರಿಲ್ಲರ್ ಸಿನಿಮಾ ವಿಕ್ರಾಂತ್ ರೋಣ ಬಾಲಿವುಡ್ ಮುಂದೆ ಅಬ್ಬರಿಸಿದೆ.. ಆದ್ರೆ ಬಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳು ಸೋಲಿನ ರುಚಿ ನೋಡಿ ಕಂಗಾಲಾಗಿವೆ..
ಅನುಪ್ ಭಂಡಾರಿ ನಿರ್ದೇಶನದ ವಿಕಾಂತ್ ರೋಣ ಸಿನಿಮಾದಲ್ಲಿ ನಿರೂಪ್ ಭಂಡಾರಿ , ನೀತಾ ಅಶೋಕ್ ,ಜಾಕ್ವೆಲಿನ್ ಫರ್ನಾಂಡೀಸ್ ಸಹ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ..
ಸುಮಾರು 100 ಕೋಟಿ ರೂಪಾಯಿ ಬಜೆಟ್ ನಲ್ಲಿ ಸಿನಿಮಾ ತಯಾರಾಗಿದೆ.. ದುಬಾರಿ ಬಜೆಟ್ ನಲ್ಲಿ ತಯಾರಾದ ಕನ್ನಡ ಸಿನಿಮಾಗಳ ಪೈಕಿ ಈ ಸಿನಿಮಾ ಕೂಡ ಒಂದಾಗಿದೆ..