ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಅಬ್ಬರಿಸಿ ಬೊಬ್ಬಿರಿಯುತ್ತಿದೆ.. ಥಿಯೇಟರ್ ಗಳಲ್ಲಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ.. ಬಾಕ್ಸ್ ಆಫೀಸ್ ನಲ್ಲಿ ಬಾಲಿವುಡ್ ಸಿನಿಮಾಗಳನ್ನ ಮಕಾಡೆ ಮಲಗಿಸಿದೆ..
ಆದ್ರೆ ಮತ್ತೊಂದ್ ಕಡೆ ಸಿನಿಮಾಗೆ ಪೈರೆಸಿ ಕಾಟವೂ ಹೊಡೆತ ನೀಡ್ತಿದೆ..
ಇದೀಗ ಸರ್ಕಾರಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ಪೈರೆಸಿ ವಿಕ್ರಾಂತ್ ರೋಣ ಸಿನಿಮಾವನ್ನ ವಾರ್ಡನ್ ತೋರಿಸಿದ್ದು ಸಿನಿಮಾ ತಂಡ ಹಾಗೂ ಕಿಚ್ಚನ ಅಭಿಮಾನಿಗಳ ಕ್ರೋಶಕ್ಕೆ ಕಾರಣವಾಗಿದೆ..
ವಸತಿ ಶಾಲೆಯಲ್ಲಿ ವಿಕ್ರಾಂತ್ ರೋಣ ಸಿನಿಮಾದ ಪೈರಸಿಯನ್ನು ನೋಡುವ ವಿಡಿಯೋವನ್ನು ಚಿತ್ರೀಕರಣ ಮಾಡಿರುವ ವಿದ್ಯಾರ್ಥಿಯೊಬ್ಬ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಸುದೀಪ್ ಅಭಿಮಾನಿಗಳು ವಸತಿ ಶಾಲೆಯ ಮೇಲ್ವಿಚಾರಕರಿಗೆ ಕರೆ ಮಾಡಿ, ಕಿಡಿಕಾರಿದ್ದಾಋಎ..
ಅಲ್ಲದೇ ಕೂಡಲೇ ವಿಡಿಯೋ ಮೂಲಕ ಕ್ಷಮೆ ಕೇಳಬೇಕು ಇಲ್ಲದೇ ಇದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಚ್ಚರಿಕೆ ನೀಡಿದ್ಧಾರೆ..