ಬಾಲಿವುಡ್ ನ ಬಹುನಿರೀಕ್ಷೆಯ ಸಿನಿಮನಾವಾದ ಅಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಸಾಕಷ್ಟು ಕ್ರೇಜ್ ಹುಟ್ಟುಹಗಾಕಿದೆ.. ಸಿನಿಮಾ ಆಗಸ್ಟ್ 11 ಕ್ಕೆ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಸಿನಿಮಾದಲ್ಲಿ ಕರೀನಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ..
ಸಿನಿಮಾತಂಡವು ಪ್ರಚಾರದಲ್ಲಿ ತೊಡಗಿದೆ.. ಆದ್ರೆ ಇದೆಲ್ಲದರ ನಡುವೆ ಸಿನಿಮಾಗೆ ಈಗಿನಿಂದಲೇ ಅಡಚಣೆ ಉಂಟಾಗಿದೆ,, ಸಿನಿಮಾವನ್ನ ಬಹಿಷ್ಕರಿಸಲು ಸೋಷಿಯಲ್ ಮೀಡಿಯಾದಲ್ಲಿ ಕೂಗು ಹೆಚ್ಚಾಗಿದೆ..
ಬಾಯ್ಕಾಟ್ ಬಾಲಿವುಡ್ , ಬಾಯ್ಕಾಟ್ ಅಮಿರ್ ಖಾನ್ , ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದೆ..
ಇದಕ್ಕೆಲ್ಲಾ ಕಾರಣವೇ ಅಮಿರ್ ಖಾಣ್ , ಕರೀನಾರಾ ಕೆಲವೊಂದು ಹೇಳಿಕೆಗಳು.. ಈ ಹಿಂದೆ ಅಮಿರ್ ಖಾಣ್ ದೇರಿಗೆ ಹಾಲಿನ ಅಭಿಷೇಕ ಮಾಡಿ ವ್ಯರ್ಥ ಮಾಡುವ ಬದಲು ಬಡ ಮಕ್ಕಳಿಗೆ ನೀಡಿ ಎಂದಿದ್ದರು.. ಅವರದ್ದೇ ಅಂದಾಜ್ ನಲ್ಲಿ ಈಗ ಅವರ ವಿರುದ್ಧ ಮುಗಿಬಿದ್ದಿರುವ ನೆಟಿಜನ್ಸ್ , ಲಾಲ್ ಸಿಂಗ್ ಚಡ್ಡಾ ನೋಡಿ ದುಡ್ಡು ವ್ಯರ್ಥ ಮಾಡೋ ಬದಲಾಗಿ ಬಡವರಿಗೆ ದಾನ ಮಾಡಿ ಎನ್ನುತ್ತಿದ್ದಾರೆ..
ಸದ್ಯ ಈ ಬಗ್ಗೆ ಇತ್ತೀಚೆಗೆ ಅಮಿರ್ ಖಾನ್ ಪ್ರತಿಕ್ರಿಯೆ ನೀಡುತ್ತಾ ನಾನು ಭಾರತೀಯನೇ , ನಾನು ಭಾರತೀಯನಲ್ಲ ಎನ್ನುವಂತೆ ಹಲವರು ಬಿಂಬಿಸುತ್ತಿರೋದು ಬಹಳ ಬೇಸರವಾಗ್ತಿದೆ.. ದಯವಿಟ್ಟು ಲಾಲ್ ಸಿಂಗ್ ಚಡ್ಡಾ ಬಹಿಷ್ಕರಿಸಬೇಡಿ.. ಸಿನಿಮಾವನ್ನ ವೀಕ್ಷಿಸಿ ಎಂದು ಮನವಿಯನ್ನ ಮಾಡಿಕೊಂಡಿದ್ದರು..
ಆದ್ರೀಗ ನೆಟ್ಟಿಗರನ್ನ ಮತ್ತೆ ಟ್ರಿಗರ್ ಮಾಡಿರುವ ಕರೀನಾ ಬಾಯ್ಕಾಟ್ ಅನ್ನೋದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಬಾರದು.. ಮೊದಲು ಸಿನಿಮಾ ನೋಡಿ ಆಮೇಲೆ ಮಾತನಾಡಬೇಕು ಎಂದಿದ್ದಾರೆ..