ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಸಿನಿಮಾರಂಗದಿಂದ ದೂರಾಗಿ ಸುಮಾರು ವರ್ಷಗಳೇ ಕಳೆದ್ರೂ ಈಗಲೂ ಅವರ ಕ್ರೇಜ್ ಕಡಿಮೆಯಾಗಿಲ್ಲ.. ಅವರ ಕಮ್ ಬ್ಯಾಕ್ ಗಾಘಿ ಅಭಿಮಾನಿಗಳು ಕಾಯ್ತಿದ್ದಾರೆ.. ರಮ್ಯಾ ಸಹ ಮತ್ತೆ ಸ್ಯಾಂಡಲ್ ವುಡ್ ಗೆ ಶೀಘ್ರವೇ ಕಮ್ ಬ್ಯಾಕ್ ಮಾಡಲಿದ್ದಾರೆ ಎನ್ನಲಾಗ್ತಿದೆ…
ಅಂದ್ಹಾಗೆ ರಾಜಕೀಯ ಸಿನಿಮಾರಂಗ ರಡರಿಂದಲೂ ರಮ್ಯಾ ದೂರವಿದ್ರೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ನಟಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದು , ಅಭಿಮಾನಿಗಳ ಜೊತೆಗೆ ಸದಾ ಕನೆಕ್ಟ್ ಆಗಿರುತ್ತಾರೆ..
ಈ ನಡುವೆ ದಿವ್ಯ ಸ್ಪಂದನ 18 ವರ್ಷದವರಿದ್ದಾಗ ಹೇಗೆ ಕಾಣಿಸುತ್ತಿದ್ದರೆಂಬುದನ್ನ ತೋರಿಸುವ ಅವರ ಹಳೆಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೌದು..! ರಮ್ಯಾ ತಮ್ಮ 18ನೇ ವಯಸ್ಸಿನ ಫೋಟೋವನ್ನ ಶೇರ್ ಮಾಡಿದ್ದಾರೆ. 21 ನೇ ವಯಸ್ಸಿಗೆ ಅಭಿ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟ ರಮ್ಯಾ ಸ್ಯಾಂಡಲ್ ವುಡ್ ನ ಸ್ಟಾರ್ ಗಳ ಜೊತೆಗೆ ಮಿಂಚಿ ಚಂದನವನದ ರಾಣಿಯಾಗಿ ಇಂಡಿಸ್ಟ್ರಿ ಆಳಿದ ನಟಿ..
ಇದೀಗ ಅವರು 18 ವರ್ಷದವರಿದ್ದಾಗ ಅವರು ಹೇಗೆ ಕಾಣಿಸುತ್ತಿಒದ್ದರೆಂದು ಕಾಲೇಜಿನ ಐಡಿ ಕಾರ್ಡ್ ಶೇರ್ ಮಾಡಿದ್ದಾರೆ.
18ನೇ ವಯಸ್ಸಿನಲ್ಲಿ ನಾನು ಎಂಬ ಕ್ಯಾಪ್ಷನ್ ಸಹ ಕೊಟ್ಟಿದ್ದಾರೆ ರಮ್ಯಾ.. ಅವರ ಕಾಲೇಜಿನ ದಿನಗಳಲ್ಲಿನ ಫೋಟೋ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ..