ಒಂದೆಡೆ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಸಂಭ್ರಮ ಜೋರಿದೆ.. ಬಾಕ್ಸ್ ಆಫೀಸ್ ನಲ್ಲಿ ಕಿಚ್ಚನ ಹವಾ ಇದೆ.. ಥಿಯೇಟರ್ ಗಳಲ್ಲಿ ಸಿನಿಮಾ ಹೌಸ್ ಫುಲ್ ಆಗಿ ಓಡ್ತಿದೆ.. ಅದೇ ಮತ್ತೊಂದೆಡೆ ಸಿನಿಮಾಗೆ ಪೈರೆಸಿ , ದ್ವೇಷಭರಿತ ನೆಗೆಟಿವ್ ರಿವೀವ್ ಗಳು ಸೇರಿದಂತೆ ಇನ್ನೂ ಸಾಕಷ್ಟು ಅಡಚಣೆಗಳೂ ಉಂಟಾಗುತ್ತಿದೆ..
ಇದು ಸಾಲದಕ್ಕೆ ಇತ್ತೀಚೆಗೆ ವಿಕ್ರಾಂತ್ ರೋಣ ಸಿನಿಮಾ ವೀಕ್ಷಣೆ ವೇಳೆ ಚಿಕ್ಕಮಗಳೂರಿನಲ್ಲಿ ಹೊಡೆದಾಟ ನಡೆದಿತ್ತು.. ಮಿಲನ ಚಿತ್ರಮಂದಿರದಲ್ಲಿ ಹಾಡಹಗಲೇ ಲಾಂಗು, ಮಚ್ಚುಗಳಿಂದ ಯುವಕರು ಹೊಡೆದಾಡಿಕೊಂಡಿದ್ದರು.. ಇದೀಗ ಪ್ರಕರಣ ಸಂಬಂಧಿಸಿದಂತೆ 6 ಮಂದಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ..
ಘಟನೆ ನಡೆದ ನಾಲ್ಕೇ ದಿನಗಳಿಗೆ 6 ಆರೋಪಿಗಳನ್ನ ಬಂಧಿಸಿರುವ ನಗರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳನ್ನ 11 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಜುಲೈ 28 ರಂದು ಅಂದ್ರೆ ವಿಶ್ವಾದ್ಯಂತ ಸಿನಿಮಾ ರಿಲೀಸ್ ಆದ ದಿನವೇ ಮಿಲನ ಚಿತ್ರಮಂದಿರದಲ್ಲಿ ವಿಕ್ರಾಂತ್ ರೋಣ ಸಿನಿಮಾ ವೀಕ್ಷಣೆ ವೇಳೆ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು.. ಈ ವೀಡಿಯೋ ಸಾಕಷ್ಟು ವೈರಲ್ ಆಗಿ ಜನರನ್ನ ಬೆಚ್ಚಿ ಬೀಳಿಸಿತ್ತು.,
ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿತ್ತು. ಅವರನ್ನ ಹಾಸನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ.. ಘಟನೆ ನಂತರ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನು..??
ಸಿನಿಮಾ ವೀಕ್ಷಣೆ ವೇಳೆ ಯುವಕನೋರ್ವ ಪದೇ ಪದೇ ಹೊರಗೆ ಹೋಗಿ ಬರುತ್ತಿದ್ದನು ಎನ್ನಲಾಗಿದೆ. ಇದೇ ವಿಚಾರವಾಗಿ ಆತನ ಗುಂಪು ಹಾಗೂ ಮತ್ತೊಂದು ಗುಂಪಿನವರ ನಡುವೆ ಕಿರಿಕ್ ನಡೆದಿದೆ.. ಎರೆಡೂ ಗುಂಪಿನವರೂ ಹೊರಗೆ ಬಂದು ಮತ್ತೆ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಕಾರಿನಲ್ಲಿಟ್ಟಿದ್ದ ಮಚ್ಚು, ಲಾಂಗು, ಡ್ರಾಗರ್ ಗಳಿಂದ ಪರಸ್ಪರ ಹೊಡೆದಾಡಿದ್ದರು.
ಗಲಾಟೆಯಲ್ಲಿ ಭರತ್ ಹಾಗೂ ಜೀವನ್ ಎಂಬ ಇಬ್ಬರಿಗೆ ತೀವ್ರ ಗಾಯವಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು..