Anupam Kher – SS ರಾಜಮೌಳಿಗೆ ಶಾಲು ಹೊದಿಸಿ ಸನ್ಮಾನಿಸಿದ ಬಾಲಿವುಡ್ ನಟ
ಯಾವುದೇ ಪಾತ್ರ ಕೊಟ್ಟರು ಅದರಲ್ಲಿ ಜೀವಿಸಿ ಲೀಲಾಜಾಲವಾಗಿ ನಟಿಸಿ ಯಾವುದೇ ಭಾಷೆಯ ಬೇಧವಿಲ್ಲದೇ ಎಲ್ಲಾ ಇಂಡಸ್ಟ್ರಿಯಲ್ಲೂ ನಟಿಸುವ ಬಾಲಿವುಡ್ ಕಲಾವಿದ…. ಅನುಪಮ್ ಖೇರ್. ವೈವಿಧ್ಯಮಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಕಳೆದ ಭಾರಿ ಅನುಪಮ್ ಖೇರ್ ನಟಿಸಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಬಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿದು ಗೊತ್ತೇ ಇದೆ. ಅನುಪಮ್ ಖೇರ್ ಇತ್ತೀಚೆಗೆ ಹೈದರಾಬಾದ್ ನಲ್ಲಿ ಕಾಣಿಸಿಕೊಂಡಿದ್ದು, S S ರಾಜಮೌಳಿ ನಿವಾಸಕ್ಕೆ ಬೇಟಿ ನೀಡಿದ್ದಾರೆ. ಇದನ್ನು ಅನುಪಮ್ ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅನುಪಮ್ ಖೇರ್ ಅವರು ರಾಜಮೌಳಿ ಅವರನ್ನ ಶಾಲು ಹೊದಿಸಿ ಗೌರವಿಸಿದ್ದಾರೆ. “ಆತ್ಮೀಯ ರಾಮ ಗಾರು, S S ರಾಜಮೌಳಿ. ನೀವು ನನಗೆ ತೋರಿದ ಪ್ರೀತಿಗೆ ಧನ್ಯವಾದಗಳು. ನಿಮ್ಮ ಸ್ವಂತ ಮನೆಯಲ್ಲಿ ನಿಮಗೆ ಶಾಲು ಹೊದಿಸಿ ಸ್ವಾಗತಿಸಲು ನನಗೆ ಸಂತೋಷವಾಗುತ್ತಿದೆ. ನಿಮ್ಮ ನಮ್ರತೆ ಮತ್ತು ನಿಷ್ಠೆಯನ್ನು ನಾನು ಇಷ್ಟಪಡುತ್ತೇನೆ. ನಿಮ್ಮಿಬ್ಬರಿಂದ ನಾವು ಕಲಿಯುವುದು ತುಂಬಾ ಇದೆ,” ಎಂದು ಅನುಪಮ್ ಖೇರ್ ಹೇಳಿದ್ದಾರೆ.
ಇನ್ನು ವೃತ್ತಿಜೀವನದ ವಿಚಾರಕ್ಕೆ ಬಂದರೆ.. ತೆಲುಗಿನ ‘ಕಾರ್ತಿಕೇಯ-2’ ಚಿತ್ರದಲ್ಲಿ ಅನುಪಮ್ ಖೇರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಚಿತ್ರ ಆಗಸ್ಟ್ 13 ರಂದು ಬಿಡುಗಡೆಯಾಗಲಿದೆ. ರವಿತೇಜ ನಾಯಕನಾಗಿ ನಟಿಸುತ್ತಿರುವ ‘ಟೈಗರ್ ನಾಗೇಶ್ವರ ರಾವ್’ ಚಿತ್ರದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ.