ಕನ್ನಡ ಅಷ್ಟೇ ಅಲ್ದೇ ಇತರೇ ಭಾಷೆಗಳಲ್ಲೂ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿರುವ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್… ಕನ್ನಡದಲ್ಲಿ ಈಗಾಗಲೇ 8 ಸೀಸನ್ ಗಳು ಮುಕ್ತಾಯಗೊಂಡಿದೆ..
ಇದೀಗ ಸೀಸನ್ 9 ಯಾವಾಗ ಎಂದು ಅಭಿಮಾನಿಗಳು ಎದುರು ನೋಡ್ತಿದ್ದಾರೆ.. ನಡುವೆ ಈ ಬಾರಿ ಬಿಗ್ ಬಾಸ್ ಒಟಿಟಿಯಲ್ಲೂ ಬರುತ್ತಿದೆ.. ಅಂದ್ರೆ ಒಟಿಟಿಯಲ್ಲೇ ಪ್ರತ್ಯೇಕವಾಗಿ ಬಿಗ್ ಬಾಸ್ ನಡೆಯಲಿದ್ದು ಇದು ಒಟಿಟಿ ಸೀಸನ್ ಒಂದು ಆಗಿರಲಿದೆ.. ಈಗಾಗಲೇ ಪ್ರೋಮೋ ರಿಲೀಸ್ ಆಗಿ ಸಾಕಷ್ಟು ಕುತೂಹಲ ಮೂಡಿಸಿದೆ..
ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ನಲ್ಲಿ ಪ್ರತಿ ವರ್ಷ ಬದಲಾವಣೆಗಳಾಗುತ್ತಲೇ ಇರುತ್ತೆ.. ಈ ಬಾರಿಯ ಬಿಗ್ ಬಾಸ್ ಮನೆ ಹೇಗಿರಲಿದೆ ಎಂಬುದಕ್ಕೆ ಪರಮೇಶ್ವರ್ ಅವರು ತಮ್ಮ ಡಸೋಷಿಯಲ್ ಮೀಡಿಯಾದಲ್ಲಿ ಒಂದು ಫೋಟೋ ಹಂಚಿಕೊಂಡು ಕುತೂಹಲ ಮೂಡಿಸಿದ್ದಾರೆ..
ಆಗಸ್ಟ್ 6ರಂದು ಸಂಜೆ ಶೋ ಅದ್ಧೂರಿಯಾಗಿ ಆರಂಭವಾಗಲಿದ್ದು ಅಭಿಮಾನಿಗಳು ಸಖತ್ ಎಕ್ಸೈಟ್ ಆಗಿದ್ದಾರೆ.. ಒಟಿಟಿ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ Voot ನಲ್ಲಿ ಡಿಜಿಟಲ್ ಆವೃತ್ತಿಯು ಪ್ರಸಾರವಾಗಲಿದೆ.
ಅಂದ್ಹಾಗೆ ಬಿಗ್ ಬಾಸ್ ಒಟಿಟಿ ಸ್ಪರ್ಧಿಗಳು ಯಾರು ಎಂಬ ಕುತೂಹಲ ಮೂಡಿದ್ದು , ಚರ್ಚೆಗಳು ನಡೆಯುತ್ತಿದೆ.. ಹಲವರ ಹೆಸರುಗಳನ್ನ ನೆಟ್ಟಿಗರು ಚರ್ಚೆ ಮಾಡ್ತಾ ಗೆಸ್ ಮಾಡ್ತಿದ್ದಾರೆ.. ಸಾಕಷ್ಟು ವದಂತಿಗಳು ಹರಿದಾಡ್ತಿದ್ದು , ಕೆಲವರ ಹೆಸರುಗಳು ಬಲವಾಗಿ ಕೇಳಿಬರುತ್ತಿವೆ..
ಈ ಪೈಕಿ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಹರಿದಾಡ್ತಿದೆ.. ಈ ಬಾರಿ ಬಿಗ್ ಬಾಸ್ ಮನೆಗೆ ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿದ್ದ ರೇಖಾ ವೇದವ್ಯಾಸ್ ಎಂಟ್ರಿಕೊಡಲಿದ್ದಾರೆ ಎನ್ನಲಾಗ್ತಿದೆ… ಅಲ್ದೇ ಸೋಷಿಯಲ್ ಮೀಡಿಯಾ ಸ್ಟಾರ್ ಗಳಿಗೂ ಈ ಸೀಸನ್ ನಲ್ಲಿ ಚಾನ್ಸ್ ಸಿಗಬಹುದು ಎನ್ನಲಾಗ್ತಿದೆ.. ಅದ್ರಲ್ಲೂ ಸಾಮಾಜಿಕ ಜಾಲತಾಣದ ಸ್ಟಾರ್ ಭೂಮಿಕಾ ಬಸವರಾಜ್, ನಟ ನವೀನ್ ಕೃಷ್ಣ, ಕಿರುತೆರೆ ನಟಿ ಸಾನ್ಯಾ ಅಯ್ಯರ್ ಈ ಬಾರಿ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಬಹುದು ಎನ್ನಲಾಗ್ತಿದೆ…