ಒಂದು ಕಾಲದಲ್ಲಿ ಭಾರತೀಯ ಸಿನಿಮಾರಂಗ ಅಂದ್ರೆ ಬಾಲಿವುಡ್ ಮಾತ್ರವೇ , ಮಿಕ್ಕೆಲ್ಲಾ ಸಿನಿಮಾರಂಗಗಳು ಲೆಕ್ಕಕ್ಕೆ ಇಲ್ಲ ಎಂಬಂತೆ ಮೆರೆದಿದ್ದ ಬಾಲಿವುಡ್ ಸೌತ್ ಸಿನಿಮಾರಂಗವನ್ನ ಕಡೆಗಣಿಸಿತ್ತು.. ಆದ್ರೆ ಇದೇ ಬಾಕಿವುಡ್ ಸೌತ್ ಸಿನಿಮಾಗಳ ರೀಮೇಕ್ ಮಾಡೋದಕ್ಕೆ ಮಾತ್ರ ಮುಜುಗರ ಪಟ್ಟುಕೊಳ್ತಿರಲಿಲ್ಲ..
ಸಿನಿಮಾ ಇಂಡಸ್ಟ್ರಿ ಬಿಡಿ ಸೌತ್ ತಾರೆಯರನ್ನೂ ಒಂದು ರೀತಿ ವಿಚಿತ್ರವಾಗಿ ನೋಡ್ತಿದ್ದ ಬಾಲಿವುಡ್ ಮಂದಿ ಈಗ ನಮ್ಮ ಸಿನಿಮಾದಲ್ಲಿ ಒಬ್ಬ ಸೌತ್ ಸ್ಟಾರ್ ಇದ್ರೂ ಸಿನಿಮಾ ಹಿಟ್ ಆಗಬಹುದೇನೋ ಎಂಬ ಯೋಚನೆಯಲ್ಲಿ ಸೌತ್ ಸ್ಟಾರ್ ಗಳನ್ನ ಸೆಳೆಯೋ ಪ್ರಯತ್ನ ಮಾಡ್ತಿರೋದು ಗೊತ್ತೇ ಇದೆ..
ತಾಜಾ ಉದಾಹರಣೆ ಅಂದ್ರೆ ಬ್ರಹ್ಮಾಸ್ತ್ರ.. ಸಿನಿಮಾದಲ್ಲಿ ಸೌತ್ ಸ್ಟಾರ್ ನಾಗಾರ್ಜುನ್ ಸೇರಿ ಅನೇಕರಿದ್ದಾರೆ.. ಶಾರುಖ್ ಖಾನ್ ತಮಿಳಿನ ಸ್ಟಾರ್ ನಿರ್ದೇಶಕ ಅಟ್ಲಿ ಜೊತೆಗೆ ಸಿನಿಮಾ ಮಾಡ್ತಿದ್ದು ಈ ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿದ್ದಾರೆ..
ಅಂದ್ಹಾಗೆ ಸೌತ್ ಸ್ಟಾರ್ ಗಳಾದ , ಯಶ್ , ಮಹೇಶ್ ಬಾಬು , ಸುದೀಪ್ , ಅಲ್ಲು ಅರ್ಜುನ್ , ರಾಮ್ ಚರಣ್ ರಂತಹ ನಟರಿಗೆ ಬಾಲಿವುಡ್ ನಿಂದ ದೊಡ್ಡ ದೊಡ್ಡ ಸಿನಿಮಾಗಳಿಗೆ ಆಫರ್ ಬಂದ್ರೂ ಅವುಗಳನ್ನ ರಿಜೆಕ್ಟ್ ಮಾಡಿದ್ದಾರಡೆ..
ಹೀಗೆ ಸೌತ್ ಸ್ಟಾರ್ ಗಳು ರಿಜೆಕ್ಟ್ ಮಾಡಿರುವ ಬಾಲಿವುಡ್ ನ ಸೂಪರ್ ಹಿಟ್ ಬ್ಲಾಕ್ ಬಾಸ್ಟರ್ ಸಿನಿಮಾಗಳ ಪಟ್ಟಿ ಇಲ್ಲಿದೆ..
ಅನುಷ್ಕಾ ಶೆಟ್ಟಿ.. ಕರ್ನಾಟಕದ ಕರಾವಳಿ ಚೆಲುವೆ.. ಟಾಲಿವುಡ್ ನಲ್ಲಿ ಸಿನಿಮಾರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ನಟಿ.. ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡಿರುವ ನಟಿ ಸಿಂಗಲ್ ಹ್ಯಾಂಡ್ ಆಗಿಯೂ ಸಿನಿಮಾವನ್ನ ಗೆಲ್ಲಿಸುವ ತಾಕತ್ತು ಸ್ಟಾರ್ ಡಮ್ ಹೊಂದಿರುವ ನಟಿ.. ಇದಕ್ಕೆ ಉದಾಹರಣೆ ಅರುಂಧತಿ.. ಬಾಹುಬಲಿಯಲ್ಲಿ ಅವರ ನಟನೆ ರೋಮಾಂಚನಗೊಳಿಸುತ್ತೆ.. ಸ್ವೀಟಿ ಅನುಷ್ಕಾಗೆ ಬಾಲಿವುಡ್ ನ ಸಿನಿಮಾಳಲ್ಲೂ ಆಫರ್ ಬಂದಿತ್ತು.. ಅದ್ರೆ ಅನುಷ್ಕಾ ರಿಜೆಕ್ಟ್ ಮಾಡಿದ್ದಾರೆ.. ತಮಿಳಿನಲ್ಲಿ ಸಿಂಘಮ್ ನಲ್ಲಿ ನಟಿ ಅನುಷ್ಕಾ ಬಣ್ಣ ಹಚ್ಚಿದ್ದರು.. ಈ ಸಿನಿಮಾ ಬಾಲಿವುಡ್ ಗೂ ರೀಮೇಕ್ ಆಗಿತ್ತು.. ಹಿಂದಿಯಲ್ಲಿ ಈ ಸಿನಿಮಾವನ್ನ ರೋಹಿತ್ ಶೆಟ್ಟಿ ನಿರ್ದೇಶನ ಮಾಡಿದ್ದರು.. ಅಜಯ್ ದೇವಗನ್ ಬಣ್ಣ ಹಚ್ಚಿದ್ದರು.. ಇದೇ ಸಿನಿಮಾದಲ್ಲಿ ಅನುಷ್ಕಾ ನಟಿಸಬೇಕೆಂಬುದು ರೋಹಿತ್ ಅವರ ಆಯ್ಕೆಯಾಗಿತ್ತು. ಖುದ್ದು ರೋಹಿತ್ ಅವರೇ ಸಿನಿಮಾದಲ್ಲಿ ನಟಿಸಲು ಅನುಷ್ಕಾರಿಗೆ ಆಫರ್ ನೀಡಿದ್ದರಂತೆ.. ಆದ್ರೆ ಅನುಷ್ಕಾ ಈ ಆಫರ್ ರಿಜೆಕ್ಟ್ ಮಾಡಿದ್ದರಂತೆ.. ನಂತರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಹಿಟ್ ಆಗಿತ್ತು..
ಅಂದ್ಹಾಗೆ ಹಿಂದೆ ಸಾಕಷ್ಟು ಬಾಲಿವುಡ್ ಸಿನಿಮಾಗಳನ್ನ ಅನುಷ್ಕಾ ರಿಜೆಕ್ಟ್ ಮಾಡಿದ್ದರಂತೆ ಜೊತೆಗೆ , ಇಕ್ತೆಫಾಕ್ ಸಿನಿಮಾವನ್ನ ಸಹ ಅನುಷ್ಕಾ ರಿಜೆಕ್ಟ್ ಮಾಡಿದ್ದರು ಎನ್ನಲಾಗಿದೆ..
ಮಲಯಾಳಂ ನಟ ಫಹಾದ್ ಫಾಸಿಲ್ ಸೌತ್ ಇಂಡಸ್ಟ್ರಿಯ ಸ್ಟಾರ್ ನಟ.. ವರ್ಸಟೈಲ್ ಆಕ್ಟರ್.. ಪಾತ್ರ ನೆಗೆಟಿವ್ ಇರಲಿ , ಹೀರೋ ರೋಲ್ ಇರಲಿ ಅಚ್ಚುಕಟ್ಟಾಗಿ ನ್ಯಾಯ ಒದಗಿಸುತ್ತಾರೆ..
ಅಂದ್ಹಾಗೆ ಬಾಲಿವುಡ್ ನ ನಿರ್ದೇಶಕ ವಿಶಾಲ್ ಭಾರದ್ವಾಜ್ ಅವರು ಫಹಾದ್ ಗೆ ತಮ್ಮ ಸಿನಿಮಾದಲ್ಲಿ ನಟಿಸುವ ಫರ್ ನೀಡಿದ್ದರು.. ಆದ್ರೆ ಫಹಾದ್ ಈ ಸಿನಿಮಾವನ್ನ ತಿರಸ್ಕರಿಸಿದ್ದರು.. ಅಲ್ಲದೇ ಇವತ್ತು ನಾನು ಈ ಸ್ಟೇಜ್ ಅಲ್ಲಿರೋದಕ್ಕೆ ಕಾರಣ ಮಲಯಾಳಂ ಸಿನಿಮಾ ಇಂಡಸ್ಟ್ರಿ ಎಂದಿದ್ದರು ಎನ್ನಲಾಗಿದೆ..
ಅಲ್ಲು ಅರ್ಜುನ್… ಪುಷ್ಪ ಸಿನಿಮಾದಿಂದಲೇ ಅಲ್ಲು ಆಲ್ ಓವರ್ ಇಂಡಿಯಾ ತಮ್ಮದೆ ಆದ ಒಂದು ಕ್ರೇಜ್ ಕ್ರಿಯೇಟ್ ಮಾಡಿಕೊಂಡರು,.. ಅವರ ಆಟಿಟ್ಯೂಡ್ , ಆಕ್ಟಿಂಗ್ , ಸ್ಟೈಲ್ , ಲುಕ್ , ಪುಷ್ಪ ಡೈಲಾಗ್ಸ್ ಸಖತ್ ಕ್ರೇಜ್ ಹುಟ್ಟುಹಾಕಿ ಸೋಷಿಯಲ್ ಮಿಡಿಯಾದಲ್ಲಿ ಸೆನ್ಷೇಷನ್ ಸೃಷ್ಟಿ ಮಾಡಿತ್ತು.. ಅಲ್ದೇ ಈ ಸಿನಿಮಾವನ್ನ ಹಿಂದಿ ಬೆಲ್ಟ್ ನಲ್ಲಿ ಜನರು ಬಹಳವಾಗಿ ಮೆಚ್ಚುಕೊಂಡಿದ್ದು ಈಗ ಪುಷ್ಪ 2 ಗಾಗಿ ಕಾಯುತ್ತಿದ್ದಾರೆ..
ಅಂದ್ಹಾಗೆ ಇಂಡಸ್ಟ್ರಿಯಲ್ ಸೂಪರ್ ಹಿಟ್ ಸಿನಿಮಾ ಭಜರಂಗಿ ಭಾಯ್ ಜಾನ್ ಗೆ ಮೊದಲ ಯ್ಕೆ ಅಲ್ಲು ಅರ್ಜುನ್ ಆಗಿದ್ದರು.. ಆದ್ರೆ ಅವರು ಈ ಸಿನಿಮಾವನ್ನ ತಿರಸ್ಕರಿಸಿದ್ದರು ಎನ್ನಲಾಗಿದೆ.
ಇನ್ನೂ ಪುಷ್ಪ ಸಿನಿಮಾದ ಟೈಮ್ ನಲ್ಲೇ ರಿಲೀಸ್ ಆಗಿ ಫ್ಲಾಪ್ ಆದ ಬಾಲಿವುಡ್ ಸ್ಟಾರ್ ನಟ ರಣವೀರ್ ಕಪೂರ್ ನಟನೆಯ 83 ಸಿನಿಮಾವನ್ನ ಸಹ ಅಲ್ಲು ಅರ್ಜುನ್ ರಿಜೆಕ್ಟ್ ಮಾಡಿದ್ದರಂತೆ..
ಕನ್ನಡಿಗರ ಹೃದಯದರಸ , ಕೋಟ್ಯಾಂತರ ಅಭಿಮಾನಿಗಳ ಮನಸಲ್ಲಿ ಸದಾ ಚಿರಂಜೀವಿ , ಕರುನಾಡ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಭಜರಂಗಿ ಭಾಯ್ ಜಾನ್ ಆಫರ್ ಸಿಕ್ಕಿತ್ತು.. ಅಚ್ಚರಿಯಾದ್ರೂ ಇದು ಸತ್ಯ.. ಆದ್ರೆ ಪುನೀತ್ ರಾಜ್ ಕುಮಾರ್ ಈ ಸಿನಿಮಾವನ್ನ ರಿಜೆಕ್ಟ್ ಮಾಡಿದ್ದರು ಎನ್ನಲಾಗಿದೆ.. ಇದಾದ ನಂತರ ಸಲ್ಲು ಈ ಸಿನಾಮದಲ್ಲಿ ನಟಿಸಿದರು.. ಈ ಸಿನಿಮಾ ಆ ಟೈಮ್ ನ ಸೂಪರ್ ಹಿಟ್ ಸಿನಿಮಾವಾಗಿ ಹೊರಹೊಮ್ಮಿತ್ತು..
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಖದರ್ರೇ ಬೇರೆ,, ಅವರ ಕ್ರೇಜೇ ಬೇರೆ… ಅವರ ಫ್ಯಾನ್ ಡಮ್ ನೆಕ್ಸ್ಟ್ ಲೆವೆಲ್… ಅವರಿಗೆ ದಬಾಂಗ್ 3 ನಲ್ಲಿ ಪ್ರಮುಖ ಪಾತ್ರಕ್ಕೆ ಆಫರ್ ಸಿಕ್ಕಿತ್ತು.. ಆದ್ರೆ ದರ್ಶನ್ ಈ ಫರ್ ತಿರಸ್ಕರಿಸಿದ್ದರು ಎನ್ನಲಾಗಿದೆ..
ಟಾಲಿವುಡ್ ನ ಸೆನ್ಷೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಅವರಿಗೆ ಕರಣ್ ಜೋಹರ್ ಡಿಯರ್ ಕಾಮ್ರೆಡ್ ಹಿಂದಿ ರೀಮೇಕ್ ಕಬಿರ್ ಸಿಂಗ್ ಗೆ ಆಫರ್ ನೀಡಿದ್ರು.. ಆದ್ರೆ ಈ ಸಿನಿಮಾವನ್ನ ದೇವರಕೊಂಡ ರಿಜೆಕ್ಟ್ ಮಾಡಿದ್ದರು ಎನ್ನಲಾಗಿದೆ..
ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಕ್ಸಸ್ ಕಂಡು ಕನ್ನಡ ಇಂಡಸ್ಟ್ರಿಯಿಂದ ದೂರಾಗಿ ಬಾಲಿವುಡ್ , ಟಾಲಿವುಡ್ ನಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣಗೆ ಜೆರ್ಸಿಯಲ್ಲಿ ನಟಿಸುವ ಅವಕಾಶ ಸಿಕ್ಕಿತ್ತಾದ್ರೆ ಈ ಆಫರ್ ರಿಜೆಕ್ಟ್ ಮಾಡಿದ್ದರು ರಶ್ಮಿಕಾ..
ಆದ್ರೆ ಈ ಸಿನಿಮಾ KGF 2 ಮುಂದೆ ಫ್ಲಾಪ್ ಆಯ್ತು..
ಇನ್ನೂ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಬಾಲಿವುಡ್ ಸಿನಿಮಾಗಳಿಗೆ ನೋ ಎಂದಿದ್ದರು.. ಈ ವಿಚಾರ ಎಲ್ರಿಗೂ ಗೊತ್ತೇ ಇದೆ..
ಯಶ್ ನಟನೆಯ KGf 2 ಸಿನಿಮಾ ಸೃಷ್ಟಿಸಿದ ಕ್ರೇಜ್ ಮತ್ತೊಂದು ಲೆವೆಲ್ ನಲ್ಲಿಯೇ ಇತ್ತು.. ಕನ್ನಡಿಗರದಲ್ಲಿ ಯಶ್ ಗೆ ಎಷ್ಟು ದೊಡ್ಡ ಫ್ಯಾಂಡಮ್ ಇದ್ಯೋ,, ಅಷ್ಟೇ ದೊಡ್ಡ ಮಟ್ಟದಲ್ಲಿ ಅವರಿಗೆ ಹಿಂದಿ ಬೆಲ್ಟ್ ನಲ್ಲಿ ಅಭಿಮಾನಿಗಳಾಗಿದ್ದು , ಅವರ ಮುಂದಿನ ಸಿನಿಮಾಗೆ ದೇಶಾದ್ಯಂತ ಫ್ಯಾನ್ಸ್ ಕಾಯ್ತಿದ್ದು , ಯಶ್ ಗೆ ಸಾಕಷ್ಟು ಹಿಂದಿ ಸಿನಿಮಾಗಳ ಆಫರ್ ಗಳು ಬರುತ್ತಿದೆ ಎನ್ನಲಾಗಿದೆ.