ಒಂದು ಕಾಲದಲ್ಲಿ ಭಾರತೀಯ ಸಿನಿಮಾರಂಗ ಅಂದ್ರೆ ಬಾಲಿವುಡ್ ಮಾತ್ರವೇ , ಮಿಕ್ಕೆಲ್ಲಾ ಸಿನಿಮಾರಂಗಗಳು ಲೆಕ್ಕಕ್ಕೆ ಇಲ್ಲ ಎಂಬಂತೆ ಮೆರೆದಿದ್ದ ಬಾಲಿವುಡ್ ಸೌತ್ ಸಿನಿಮಾರಂಗವನ್ನ ಕಡೆಗಣಿಸಿತ್ತು.. ಆದ್ರೆ ಇದೇ ಬಾಕಿವುಡ್ ಸೌತ್ ಸಿನಿಮಾಗಳ ರೀಮೇಕ್ ಮಾಡೋದಕ್ಕೆ ಮಾತ್ರ ಮುಜುಗರ ಪಟ್ಟುಕೊಳ್ತಿರಲಿಲ್ಲ..
ಆದ್ರೆ ಇದೇ ಬಾಲಿವುಡ್ ಪಾಲಿಗೆ ಮುಳುವಾಗಿದ್ದು.. ಅದ್ಯಾವಾಗ ಬಾಲಿವುಡ್ ಬರೀ ರೀಮೇಕ್ ಸಿನಿಮಾಳನ್ನೇ ಮಾಡಕು ಶುರು ಮಾಡಿತೋ ಆಗಿನಿಂದ ಜನರು ಒರಿನಾಲಿಟಿ ಕಡೆಗೆ ವಾಲಲು ಆರಂಭಿಸಿದ್ರು.. ಅಂದ್ರೆ ಸೌತ್ ಸಿನಿಮಾಗಳು ಹಿಂದಿಗೆ ಡಬ್ಬಿಂಗ್ ಆಗಕಲು ಶುರುವಾಗಿ ಜನರು ಆ ಕಡೆ ಹೆಚ್ಚು ವಾಲಿದ್ರು…
ಈ ಹೊತ್ತಲ್ಲೇ ಪ್ಯಾನ್ ಇಂಡಿಯನ್ ಕಿಚ್ಚು ಹೊತ್ತಿಸಿದ್ದು ರಾಜಮೌಳಿ ಅವರ ಬಾಹುಬಲಿ , ಬಾಹುಬಲಿ 2.. ಈ ಸಿನಿಮಾಗಳು ಸೆನ್ಷೇಷನ್ ಕ್ರಿಯೇಟ್ ಮಾಡಿ ಬಾಲಿವುಡ್ ನ ಬೆಚ್ಚಿಸಿತ್ತು.. ಈ ಸಿನಿಮಾದ ಕಲೆಕ್ಷನ್ ಇದುವರೆಗೂ ಯಾರಿಂದಲೂ ಬೀಟ್ ಮಾಡಲಾಗಿಲ್ಲ.. ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿದ್ದು ಬಾಹುಬಲಿ.. ಆನಂತರ ದು ರೇಂಜ್ ಗೆ ಅಬ್ಬರಿಸಿ ಹಿಂದಿ ಬೆಲ್ಟ್ ನಲ್ಲಿ ಬಾಲಿವುಡ್ ಹೀರೋ ಸಿನಿಮಾಗಳನ್ನ ಡಮ್ಮಿ ಮಾಡಿದ್ದು ಪುಷ್ಪ.. ನಂತರ ಅಬ್ಬರಿಸಿದ್ದ RRR ಆ ನಂತರ ಇಡೀ ದೇಶಾದ್ಯಂತ ಸಂಚಲ ಸೃಷ್ಟಿ ಮಾಡಿದ್ದ ರಾಕಿ ಭಾಯ್.. ಕೆಜಿಎಫ್ 2 ಹವಾ ಯಾವ ಲೆವೆಲ್ ನಲ್ಲಿತ್ತು ಗೊತ್ತೇ ಇದೆ.. ಆ ನಂತರ ಚಾರ್ಲಿ , ವಿಕ್ರಮ್ ಈಗ ವಿಕ್ರಾಂತ್ ರೋಣ ಅಬ್ಬರಿಸುತ್ತಿದೆ..
ಆದ್ರೆ ಈಗಿನ ಬಾಲಿವುಡ್ ನ ಸ್ಥಿತಿ ಹೀನಾಯವಾಗಿದ್ರೂ ಆಗೊಮ್ಮೆ ಇದ್ದ ಬಾಲಿವುಡ್ ನಲ್ಲಿ ಅನೇಕ ವಿಶೇಷತೆಗಳಿದ್ದವು.. ಬಹಳ ಜನರಿಗೆ ಗೊತ್ತಿಲ್ಲದ ಬಿ ಟೌನ್ ನ ಕೆಲ ಇಂಟ್ರೆಸ್ಟಿಂಗ್ ಫ್ಯಾಕ್ಟ್ ಇಲ್ಲಿದೆ.. ಬಾಲಿವುಡ್ ನ ಮೊಟ್ಟ ಮೊದಲ ಸಿನಿಮಾ ‘ರಾಜಾ ಹರೀಶ್ಚಂದ್ರ’ – ಸಿನಿಮಾವನ್ನ ನಿರ್ದೇಶಿಸಿ ನಿರ್ಮಾಣ ಮಾಡಿದ್ದವರು ದಾದಾ ಸಾಹೇಬ್ ಫಾಲ್ಕೆ..
ಮೊಟ್ಟ ಮೊದಲ ಆಸ್ಕರ್ ಪ್ರಶಸ್ತಿ ಪಡೆದ ಭಾರತೀಯರು ಭಾನು ಅಥ್ತಯ್ಯ – ‘ಗಾಂಧಿ’ ಸಿನಿಮಾದ ಕಾಸ್ಟ್ಯೂಮ್ ಡಿಸೈನರ್
ಭಾರತೀಯ ಸಿನಿಮಾರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿದ ಅಮಿರ್ ಖಾನ್ ನಟನೆಯ ದಂಗಲ್.. ಈ ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ 2000 ಕೋಟಿ ದಾಟಿತ್ತು..
ಆದ್ರೆ ಭಾರತದಲ್ಲಿ ಅತಿ ಹೆಚ್ಚು ಕಲೆಕ್ಷನ್ ಅಂತ ಬಂದಾಗ ಮೊದಲ ಸ್ಥಾನದಲ್ಲಿ ನಿಲ್ಲುವುದು ಬಾಹುಬಲಿ 2..
ವಿಶ್ವದಲ್ಲಿ ನೋಡಿದ್ರೆ ಬಾಹುಬಲಿ 1800 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ 2 ನೇ ಸ್ಥಾನದಲ್ಲಿದೆ.. ಮೂರನೇ ಸ್ಥಾನದಲ್ಲಿ ನಮ್ಮ ಕನ್ನಡದ KGF 2 ಸಿನಿಮಾವಿದೆ.. 1200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು ಯಶ್ ನಟನೆಯ KGF 2 ಸಿನಿಮಾ..
ನಾಲ್ಕನೇ ಸ್ಥಾನದಲ್ಲಿ RRR ಸಿನಿಮಾವಿದೆ..