Gaalipata 2 : ಹಾಡು ರಿಲೀಸ್ ಮಾಡಿದ ಕಿಚ್ಚ ಸುದೀಪ್
ಒಂದೆಡೆ ಕಿಚ್ಚ ಸುದೀಪ್ ಅವರು ವಿಕ್ರಾಂತ್ ರೋಣ ಸಕ್ಸಸ್ ನ ಸಂಭ್ರದಲ್ಲಿದ್ದಾರೆ.. ಆಗಸ್ಟ್ 6 ರಂದು ಗ್ರ್ಯಾಂಡ್ ಓಪನಿಂಗ್ ಪಡೆಯಲಿರುವ ಬಿಗ್ ಬಾಸ್ ರಿಯಾಲಿಟಿ ಶೋಗೂ ತಯಾರಾಗ್ತಿದ್ದಾರೆ.. ಈ ನಡುವೆ ಅವರು ಗಾಳಿಪಟ ಸಿನಿಮಾದ ಹಾಡನ್ನ ರಿಲೀಸ್ ಮಾಡಿ ಸಿನಿಮಾತಂಡಕ್ಕೆ ಶುಭ ಕೋರಿದ್ಧಾರೆ..
ಆಗಸ್ಟ್ 12 ಕ್ಕೆ ಚಿತ್ರ ತೆರೆಗೆ ಬರಲಿದೆ.
ಗಣೇಶ್ ಗಾಳಿಪಟ 2 ಸಿನಿಮಾದಲ್ಲಿ ಬ್ಯುಸಿಯಿದ್ದಾರೆ.. ಈ ಸಿನಿಮಾದ ಸ್ಯಾಂಡಲ್ ವುಡ್ ನ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾಗಳಲ್ಲಿ ಒಂದಾಗಿದೆ.. ಈ ಸಿನಿಮಾದಲ್ಲಿ ಮತ್ತೆ ಯೋಗರಾಜ್ ಭಟ್ , ಗಣೇಶ್ , ಸೋನು ನಿಗಮ್ , ಜಯಂತ್ ಕಾಯ್ಕಿಣಿ ಕಾಂಬಿನೇಷನ್ ಒಂದಾಗಿದೆ.. ಹೀಗಾಗಿ ಈ ಸಿನಿಮಾ ಸೂಪರ್ ಹಿಟ್ ಆಗೋ ಜೊತೆಗೆ ಗಾಳಿಪಟ ಸಿನಿಮಾದಂತೆಯೇ ಈ ಸಿನಿಮಾದ ಹಾಡುಗಳು ಸಹ ಸೂಪರ್ ಹಿಟ್ ಆಗೋದ್ರಲ್ಲಿ ಡೌಟೇ ಇಲ್ಲ.. ಈ ಸಿನಿಮಾ ಮತ್ತೊಂದು ಹಾಡನ್ನ ಈಗ ಕಿಚ್ಚ ರಿಲೀಸ್ ಮಾಡಿದ್ದಾರೆ..
ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಅನಂತನಾಗ್, ಸುಧಾ ಬೆಳವಾಡಿ, ಬುಲೆಟ್ ಪ್ರಕಾಶ್, ಪದ್ಮಜಾರಾವ್ ಮುಂತಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ..
‘ಪ್ರಾಯಶಃ’ ಎಂಬ ಹಾಡನ್ನ ಕಿಚ್ಚ ರಿಲೀಸ್ ಮಾಡಿದ್ದಾರೆ.. ಯೋಗರಾಜ್ ಭಟ್ ಮತ್ತು ಗಣೇಶ್ ಕಾಂಬಿನೇಷನ್ ನಲ್ಲಿ ಈ ಹಿಂದೆ ಗಾಳಿಪಟ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾದಲ್ಲಿ ಗಣೇಶ್, ದಿಗಂತ್ ಮತ್ತು ಗಾಯಕ ರಾಜೇಶ್ ಕೃಷ್ಣನ್ ನಟಿಸಿದ್ದರು,.. ಆದ್ರೆ ಈ ಬಾರಿ ರಾಜೇಶ್ ಬಣ್ಣ ಹಚ್ಚಿಲ್ಲ.. ಅವರ ಬದಲಾಗಿ ಈ ಬಾರಿ ಪವನ್ ಕುಮಾರ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ..