Kangana Ranaut – “ಲಾಲ್ ಸಿಂಗ್ ಛಡ್ಡಾ” ನೆಗೆಟಿವ್ ಪ್ರಚಾರಕ್ಕೆ ಅಮೀರ್ ಖಾನ್ ಕಾರಣ…
ಬಾಲಿವುಡ್ ನಲ್ಲಿ ಹೊಸದಾಗಿ ಏನೇ ನ್ಯೂಸ್ ಆದ್ರೂ ಅಲ್ಲಿ ನಟಿ ಕಂಗನಾ ರಣಾವತ್ ಅಭಿಪ್ರಾಯ ಇದ್ದೇ ಇರುತ್ತೆ. ಕಡ್ಡಿ ತುಂಡು ಮಾಡಿದಂತೆ ಮಾತನಾಡುವ ಶೈಲಿಯಿಂದ ಮೆಚ್ಚುಗೆ, ಟೀಕೆ ಎರಡಕ್ಕೂ ಒಳಗಾಗಿದ್ದಾರೆ.… ಕಂಗಾನ. ಇದೀಗ ನಟ ಅಮೀರ್ ಖಾನ್ ಸಿನಿಮಾದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತಿಚಿಗೆ ಅಮಿರ್ ಖಾನ್ ಅಭಿನಯದ “ಲಾಲ್ ಸಿಂಗ್ ಛಡ್ಡಾ” ಸಿನಿಮಾ ಬಾಯ್ ಕಟ್ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ನಡೆಯುತ್ತಿದೆ. ಅದಕ್ಕೆ ಕಾರಣ ಅಮೀರ್ ಖಾನ್ ಅವರ ಹಳೆಯ ಹಿಂದೂ ವಿರೋಧಿ ಹೇಳಿಕೆಗಳು ಮತ್ತು ಭಾರತದಲ್ಲಿ ಅಸಹಿಷ್ಣುತೆ ಇದೆ ಎಂಬ ಹೇಳಿಕೆ.
ಇದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನ ಫೈರ್ ಬ್ರಾಂಡ್ ಕಂಗಾನ ಪ್ರತಿಕ್ರಿಯೇ ನೀಡಿದ್ದಾಳೆ.
ಲಾಲ್ ಸಿಂಗ್ ಚಡ್ಡಾ’ ಚಿತ್ರದ ಕುರಿತು ನಡೆಯುತ್ತಿರುವ ನೆಗೆಟಿವ್ ಪ್ರಚಾರಕ್ಕೆ ಅಮೀರ್ ಖಾನ್ ಕಾರಣ ಎಂದು ಕಂಗನಾ ರಣಾವತ್ ಇನ್‌ಸ್ಟಾಗ್ರಾಂನಲ್ಲಿ ಹೇಳಿದ್ದಾರೆ. “..ನನ್ನ ಪ್ರಕಾರ ಅಮೀರ್ ಖಾನ್ ಅವರು ‘ಲಾಲ್ ಸಿಂಗ್ ಛಡ್ಡಾ’ ಚಿತ್ರಕ್ಕೆ ಬುದ್ದಿವಂತಿಕೆಯಿಂದ ನೆಗೆಟಿವ್ ಪ್ರಚಾರ ಮಾಡುತ್ತಿದ್ದಾರೆ.
ಈ ವರ್ಷದಲ್ಲಿ ಯಾವುದೇ ಹಿಂದಿ ಚಿತ್ರ ಥಿಯೇಟರ್‌ಗಳಲ್ಲಿ ಕಲೆಕ್ಷನ್ ಮಾಡಿಲ್ಲ. ಸ್ಥಳೀಯ ಫ್ಲೇವರ್ ಹೊಂದಿರುವ ಸೌತ್ ಚಿತ್ರಗಳು ಮಾತ್ರ ಕಲೆಕ್ಷನ್ ಮಾಡಿವೆ. ಹಾಲಿವುಡ್ ರಿಮೇಕ್ ಕೂಡ ಹಿಟ್ ಆಗಿಲ್ಲ. ಹಿಂದಿ ಚಿತ್ರಗಳ ನಿರ್ಮಾಪಕರು ಪ್ರೇಕ್ಷಕರ ಅಭಿರುಚಿಯನ್ನು ಅರ್ಥ ಮಾಡಿಕೊಳ್ಳಬೇಕು.
ಅಮೀರ್ ಖಾನ್ ಹಿಂದೂ ಫೋಬಿಯಾದೊಂದಿಗೆ ಮಾಡಿದ ‘ಪಿಕೆ’ ಸಿನಿಮಾ ಕೆರಿಯರ್ ನಲ್ಲಿಯೇ ದೊಡ್ಡ ಹಿಟ್ ಹಿಟ್ ಆಯಿತು. ಅಷ್ಟಕ್ಕೆ ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಎನ್ನುವಂತ ಹೇಳಿಕೆ ನೀಡಿದರು. ಧರ್ಮ ಅಥವಾ ಸಿದ್ಧಾಂತಗಳ ಮೇಲೆ ಸಿನಿಮಾ ಮಾಡುವುದನ್ನು ನಿಲ್ಲಿಸಿ” ಎಂದು ಕಂಗನಾ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಿರುವ ‘ಬಾಯ್ ಕಟ್ ಲಾಲ್ ಸಿಂಗ್ ಚಡ್ಡಾ’ ಬಗ್ಗೆ ಅಮೀರ್ ಖಾನ್ ಕೂಡ ಈಗಾಗಲೇ ಪ್ರತಿಕ್ರಿಯೇ ನೀಡಿದ್ದಾರೆ. “ನಾನು ಭಾರತವನ್ನು ಇಷ್ಟಪಡುವುದಿಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ, ಅದು ಸುಳ್ಳು. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಸಿನಿಮಾವನ್ನು ಬಹಿಷ್ಕರಿಸುತ್ತಿರುವುದು ಬೇಸರ ತಂದಿದೆ ಎಂದು ಅಮೀರ್ ಹೇಳಿದ್ದಾರೆ.
ಇನ್ನೂ ಸಿನಿಮಾ ಬಗ್ಗೆ ಮಾತನಾಡುವುದಾದರೆ. ಲಾಲ್ ಸಿಂಗ್ ಚಡ್ಡಾ’ ಅಮೇರಿಕನ್ ಕ್ಲಾಸಿಕ್ ‘ಫಾರೆಸ್ಟ್ ಗಂಪ್’ ನ ರಿಮೇಕ್. ಚಿತ್ರದಲ್ಲಿ ಕರೀನಾ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಅಕ್ಕಿನೇನಿ ನಾಗಚೈತನ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅದ್ವೈತ್ ಚಂದನ್ ನಿರ್ದೇಶನ ಮಾಡಿದ್ದು ಆಗಸ್ಟ್ 11 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.