Puneeth Rajkumar : ನವೆಂಬರ್ 1 ರಂದು ಅಪ್ಪುಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ
ಕೋಟ್ಯಾಂತರ ಅಭಿಮಾನಿಗಳನ್ನ ಅಗಲಿರುವ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯ ನೋವಿನಿಂದ ಇನ್ನೂವರೆಗೂ ಅವರ ಅಭಿಮಾನಿಗಳು ಹೊರಬಂದಿಲ್ಲ… ಅಪ್ಪು ಅವರ ನೆನಪಲ್ಲಿ ಅಭಿಮಾನಿಗಳು ಆಗಾಗ ಸಮಾಜಮುಖಿ ಕಾರ್ಯಗಳನ್ನ ಮಾಡುತ್ತಿರುತ್ತಾರೆ.. ವಿಭಿನ್ನವಾಗಿ ಅಪ್ಪುವಿನ ಮೇಲಿನ ಅಭಿಮಾನವನ್ನ ತೋರಿಸಿಕೊಳ್ಳುತ್ತಾರೆ..
ನಟ ಪುನೀತ್ ರಾಜ್ ಕುಮಾರ್ ಅವರ ನಿಧನದ ನಂತರ ಕರ್ನಾಟಕ ಸರಕಾರವು ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ ಮಾಡಿತ್ತು. ಈ ಪ್ರಶಸ್ತಿಯನ್ನ ಇದೀಗ ನವೆಂಬರ್ 1 ಕನ್ನಡ ರಾಜ್ಯೋತ್ಸವದಂದು ಪ್ರದಾನ ಮಾಡಲಾಗುತ್ತದೆ..
ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನಡೆದ ಫಲ ಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಪ್ಪುಗೆ ಘೋಷಣೆ ಮಾಡಿರುವ ಕರ್ನಾಟಕ ರತ್ನ ಪ್ರಶಸ್ತಿಯನ್ನು ನವೆಂಬರ್ 1 ರಂದು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. ಅಂದ್ಹಾಗೆ ಪುನೀತ್ ಮತ್ತು ಡಾ ರಾಜ್ ಕುಮಾರ್ ಅವರ ಪುತ್ಥಳಿಗಳನ್ನು ಲಾಲ್ ಭಾಗ್ ನಲ್ಲಿ ಪ್ರತಿಷ್ಠಾಪಿಸಲಾಗಿದೆ.