Pushpa 2 : ಪುಷ್ಪ 2 ಒಟಿಟಿ ರೈಟ್ಸ್ ಗಾಗಿ ಭಾರೀ ಪೈಪೋಟಿ..!!
ಕಳೆದ ವರ್ಷ ಡಿಸೆಂಬರ್ 17 ರಂದು ಬಿಡುಗಡೆಯಾದ ಪುಷ್ಪ ( Pushpa ) ಸಿನಿಮಾಗೆ ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ದಿನ ಕಳೆದಂತೆ ಪುಷ್ಪ ಮೇನಿಯಾ ಜೋರಾಯ್ತು. ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿ 400 ಕೋಟಿ ಕಲೆಕ್ಷನ್ ಕ್ಲಬ್ ಗೆ ಸೇರಿತು.
ಮುಖ್ಯವಾಗಿ ಬಾಲಿವುಡ್ ನಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬಿ ಟೌನ್ ನಲ್ಲಿ ಭಾರಿ ಸದ್ದು ಮಾಡಿತ್ತು. ಇದೀಗ ಸಿನಿಮಾದ ಸೀಕ್ವೆಲ್ ಪುಷ್ಪ 2 ಶೂಟಿಂಗ್ ನಲ್ಲಿ ತಂಡ ಬ್ಯುಸಿಯಾಗಿದೆ.. ಸದ್ಯಕ್ಕೆ ಟಾಲಿವುಡ್ ಸಿನಿಮಾಗಳ ಶೂಟಿಂಗ್ ಅನ್ನ ಆಗಸ್ಟ್ 1 ರಿಂದ ಬಂದ್ ಮಾಡಲಾಗಿದೆ..
ಇದೀಗ ‘ಪುಷ್ಪ 2’ ಸಿನಿಮಾಗೆ ಬೇಡಿಕೆ ಹೆಚ್ಚಿದೆ. ಅಷ್ಟೇ ಅಲ್ಲ KGF 2 ಹವಾ…!!! ಎಲ್ರಿಗೂ ಗೊತ್ತಿದೆ..ಬಾಕ್ಸ್ ಆಫೀಸ್ ನಲ್ಲಿ ಯಾವ್ ರೇಂಜ್ ಗೆ ತೂಫಾನ್ ಎಬ್ಬಿಸಿದೆ ಅನ್ನೋದು ಎಲ್ರಿಗೂ ಗೊತ್ತೇ ಇದೆ..
ಇದೀಗ KGF 2 ರೇಂಜ್ ಗೆ ಸದ್ದು ಮಾಡಬೇಕು , ಅದರ ರೆಕಾರ್ಡ್ ಮುರಿಯಲು ಪುಷ್ಪ 2 ಅದ್ಧೂರಿಯಾಗಿ ತಯಾರಾಗಬೇಕಿದೆ..
ಪುಷ್ಪಾ 2 ಸಿನಿಮಾ ಬಗ್ಗೆ ಸಾಕಷ್ಟು ಕ್ರೇಜ್ ಇದೆ.
ಅದಕ್ಕಾಗಿಯೇ ಲೇಟ್ ಆಗಿ ಬಂದ್ರೂ ಲೆಟೆಸ್ಟ್ ಆಗಿ ಬರಬೇಕು ಅಂತಾ ಸಿನಿಮಾ ತಂಡ ಪ್ಲಾನ್ ಮಾಡಿಕೊಂಡಿದೆ.
ಇದೆಲ್ಲದರ ನಡುವೆ ಸಿನಿಮಾ ಶೂಟಿಂಗ್ ಆರಂಭದ ಹಂತದಲ್ಲೇ ಒಟಿಟಿ ರೈಟ್ಸ್ ಗಾಗಿ ಭಾರೀ ಡಿಮ್ಯಾಂಡ್ ಬಂದಿದೆ ಎನ್ನಲಾಗ್ತಿದೆ..
ಹೌದು..! ಒಟಿಟಿ ಸಂಸ್ಥೆಗಳು ಪುಷ್ಪ ದಿ ರೈಸಿಂಗ್ ಒಟಿಟಿ ರೈಟ್ಸ್ ಗಾಗಿ ಪೈಪೋಟಿಗೆ ಬಿದ್ದಿವೆ ಎನ್ನಲಾಗ್ತಿದೆ..
ಈ ಹಿಂದೆ ಬಾಹುಬಲಿ, ಕೆಜಿಎಫ್ 2 ಸಿನಿಮಾಗಳಲ್ಲಿ ಇರುವಂತೆ ಹೀರೋ ವರ್ಸಸ್ ವಿಲನ್ ವಾರ್ ಅನ್ನ ನೆಕ್ಸ್ಟ್ ಲೆವೆಲ್ ನಲ್ಲಿ ತೋರಿಸಲು ಸುಕುಮಾರ್ ಪ್ಲಾನ್ ಮಾಡಿಕೊಂಡಿದ್ದಾರೆ..
ಅಂದ್ಹಾಗೆ ಸಿನಿಮಾದಲ್ಲಿ ಸಾಕಷ್ಟು ಬದಲಾವಣೆಗಳಾಗ್ತಿವೆ.. ಬಜೆಟ್ ಕೂಡ ಡಬಲ್ ಆಗಿದೆ.. ಸಿನಿಮಾದಲ್ಲಿ ರಶ್ಮಿಕಾ ಸಾಯೋ ಕ್ಲೈಮಾಕ್ಸ್ ಇದೆ ಹೀಗೆಲ್ಲಾ ಸುದ್ದಿ ಹರಿದಾಡ್ತಿದೆ..
ಇದೆಲ್ಲದರ ನಡುವೆ ಸಿನಿಮಾದ ಹಕ್ಕು ಖರೀದಿಗೆ ಈಗಿನಿಂದಲೇ ಡಿಮ್ಯಾಂಡ್ ಹೆಚ್ಚಾಗಿದೆ.. ಬಾಲಿವುಡ್ ನಿಂದ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಸಿನಿಮಾದ ಹಕ್ಕು ಖರೀದಿಗೆ ಮುಗಿ ಬಿದ್ದಿವೆ.. ಆದ್ರೆ ಸಿನಿಮಾ ತಂಡ ಆಫರ್ ಗಳನ್ನ ರಿಜೆಕ್ಟ್ ಮಾಡ್ತಿದೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು..