ಇತ್ತೀಚೆಗೆ ಬಾಲಿವುಡ್ ನ ಸ್ಟಾರ್ ನಟ ರಣವೀರ್ ಪೇಪರ್ ಮ್ಯಾಗಜೀನ್ ಗಾಗಿ ನಗ್ನವಾಗಿ ಫೋಟೋ ಶೂಟ್‌ಗಾಗಿ ಬೆತ್ತಲೆಯಾಗಿ ಪೋಸ್ ನೀಡಿದ್ದರು.. ಅವರ ಫೋಟೋ ಸೆನ್ಷೇಷನ್ ಸೃಷ್ಟಿಸಿತ್ತು.. ಅನೇಕರು ವಿರೋಧಿಸಿದ್ರೆ , ಅನೇಕರು ಬೆಂಬಲಿಸಿದ್ರು ಸಹ.. ಇದರ ಬೆನ್ನಲ್ಲೇ ರಣವೀರ್ ಗೆ ಆಫರ್ ಗಳ ಮೇಲೆ ಆಫರ್ ಗಳು ಬರುತ್ತಿವೆಯಂತೆ..
ಇದರ ನಡುವೆ ಪ್ರಾಣಿಗಳ ದಯಾ ಸಂಘ ಪೇಟಾ ರಣವೀರ್ ಸಿಂಗ್ ಅವರಿಗೆ ಮನವಿಯೊಂದನ್ನ ಮಾಡಿದೆ.. ಪ್ರಾಣಿಗಳ ರಕ್ಷಣೆಗಾಗಿ ನೀವು ಬೆತ್ತಲಾಗಬೇಕೆಂದು ಮನವಿ ಮಾಡಿದೆ ಎನ್ನಲಾಗ್ತಿದೆ… ಬೆತ್ತಲಾಗುವ ಮೂಲಕ ಸಲೀಸಾಗಿ ಜನರ ಗಮನ ಸೆಳೆದು ಪ್ರಾಣಿಗಳ ರಕ್ಷಣೆ ಕುರಿತು ರಣವೀರ್ ಮಾತನಾಡಬಹುದು ಎನ್ನುವ ಲೆಕ್ಕಾಚಾರವೇ ಈ ಮನವಿಯ ಹಿಂದಿದೆ..