Rashmika Mandanna : ಲವ್ ಆಗಿದ್ದು ನಿಜವೇ, ಆದ್ರೆ 2 ವರ್ಷಗಳ ಹಿಂದೆಯೇ ಬ್ರೇಕಪ್..!!
ಸ್ಯಾಂಡಲ್ ವುಡ್ Sandalwood ಸಿನಿಮಾ ಮೂಲಕ ಹಿಟ್ ಆಗಿ ಟಾಲಿವುಡ್ ನಲ್ಲೇ ಬೇರು ಬಿಟ್ಟು , ಬಾಲಿವುಡ್ ನಲ್ಲಿ ಸ್ಟ್ರಗಲ್ ಮಾಡ್ತಿರೋ ರಶ್ಮಿಕಾ ಮಂದಣ್ಣ Rashmika Mandanna ಈಗಾಗಲೇ ಬಾಲಿವುಡ್ ನ 2 ಸಿನಿಮಾಗಳಲ್ಲಿ ನಟಿಸಿ ಆಗಿದೆ.. ಈಗ ರಣಬೀರ್ ಕಪೂರ್ ಜೊತೆಗೆ ಅನಿಮಲ್ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ.. ಜೊತೆಗೆ ಪುಷ್ಪ 2 , ತಮಿಳಿನಲ್ಲಿ ವಿಜಯ್ ಸಿನಿಮಾದಲ್ಲೂ ಬ್ಯುಸಿಯಿದ್ದಾರೆ..
ಸಿನಿಮಾಗಳಿಗಿಂತ ಟ್ರೋಲ್ ಗಳಿಂದಲೇ ಹೆಚ್ಚು ಸುದ್ದಿಯಲ್ಲಿರೋ ರಶ್ಮಿಕಾ ಲವ್ ಲೈಫ್ ವಿಚಾರವಾಗೂ ಗಾಸಿಪ್ ಆಗ್ತಲೇ ಇರುರತ್ತಾರೆ.. ಅದ್ರಲ್ಲೂ ಗೀತಾ ಗೋವಿಂದಂ ಕೋ ಸ್ಟಾರ್ ವಿಜಯ್ ದೇವರಕೊಂಡ ಅವರ ಜೊತೆಗೆ ಲವ್ವಲ್ಲಿದ್ದಾರೆ ಎಂಬ ಸುದ್ದಿ ಆಗಾಗ ಹರಿದಾಡ್ತಲೇ ಇರುತ್ತೆ.. ಗಾಸಿಪ್ ಗೆ ಪುಷ್ಠಿ ಎಂಬಂತೆ ಇಬ್ಬರೂ ಒಟ್ಟಾಗಿ ಹೋಟೆಲ್ , ಜಿಮ್ ಹೊರಗೆ ಹೀಗೆ ಅಲ್ಲಲ್ಲಿ ಒಟ್ಟಿಗೆ ಕಾಣಿಸಿಕೊಳ್ತಾ ಇರುತ್ತಾರೆ..
ಅಂದ್ಹಾಗೆ ಈ ಬಗ್ಗೆ ಯಾವಾಗಲೇ ಪ್ರಶ್ನೆ ಬಂದರೂ ನಾವಿಬ್ರೂ ಉತ್ತಮ ಸ್ನೇಹಿತರಷ್ಟೇ ಎಂದು ಹೇಳುತ್ತಿದ್ದ ಜೋಡಿ ಎರೆಡು ವರ್ಷಗಳ ಹಿಂದೆ ಡೇಟಿಂಗ್ ಮಾಡ್ತಿದ್ದದ್ದು ನಿಜವಂತೆ.. ಆದ್ರೆ 2 ವರ್ಷಗಳ ಹಿಂದೆಯೇ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ..
ಸದ್ಯ ರಶ್ಮಿಕಾ ಸಿಂಗಲ್ ಆಗಿದ್ದಾರೆ ಎಂಬ ಸುದ್ದಿ ಬಟೌನ್ ನಲ್ಲಿ ಹರಿದಾಡ್ತಿದೆ.. ಬ್ರೇಕಪ್ ಆದ ನಂತರವೂ ಇಬ್ಬರೂ ತಮ್ಮ ಸ್ನೇಹವನ್ನ ಮುಂದುವರೆಸಿದ್ದಾರೆ. ಎರೆಡು ವರ್ಷಗಳಿಂದ ಆಗಾಗ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ..