Samantha Nagachaitanya : ಮಾಜಿ ದಂಪತಿ ನಡುವೆ ನಡಿತಿದ್ಯಾ ಪೈಪೋಟಿ..??
10 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಟಾಲಿವುಡ್ ನ ಸ್ಟಾರ್ ಕಪಲ್ ಸಮಂತಾ ನಾಗಚೈತನ್ಯ ಡಿವೋರ್ಸ್ ಪಡೆದಿದ್ದು ತಮ್ಮ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಇತಿಶ್ರೀ ಹಾಡಿದ್ದಾರೆ..
ಇವರ ಡಿವೋರ್ಸ್ ಸುದ್ದಿಯಿಂದ ಅಭಿಮಾನಿಗಳು ಸಿಕ್ಕಾಪಟ್ಟೆ ಶಾಕ್ ಆಗಿದ್ದರು.. ಇವರಿಬ್ಬರೂ ಸಹ ಈ ವಿಚಾರವಾಗಿ ಮೌನವಾಗಿದ್ರೂ ನೆಟ್ಟಿಗರು ಸೈಲೆಂಟ್ ಇರಲ್ಲ.. ಈವರೆಗೂ ಇಬ್ಬರ ಅಭಿಮಾನಿಗಳೂ ಪರಸ್ಪರರನ್ನ ಟ್ರೋಲ್ ಮಾಡ್ತಾ ಬಂದಿದ್ದಾರೆ.. ಇಬ್ಬರೂ ಸದ್ಯ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ..
ಈ ಜೋಡಿ ಮತ್ತೆ ಒಂದಾಗಬೇಕೆಂಬ ಆಶಯ ಅಭಿಮಾನಿಗಳದ್ದು..
ಇದೀಗ ನಾಗ ಚೈತನ್ಯ ಹಾಗೂ ಸಮಂತಾ ಇಬ್ಬರೂ ಪೈಪೋಟಿಗೆ ಬಿದ್ರೆಂಬ ಸುದ್ದಿ ಟಾಲಿವುಡ್ ನಲ್ಲಿ ಸಂಚಲನ ಸೃಷ್ಟಿ ಮಾಡಿದೆ.. ಇದಕ್ಕೆ ಕಾರಣ ಇಬ್ಬರೂ ಮುಂಬೈಗೆ ಭೇಟಿ ನೀಡಿರೋದು,.. ಹೌದು ನಾಗಚೈತನ್ಯ ಮುಂಬೈಗೆ ತೆರಳಿದ ಬೆನ್ನಲ್ಲೇ ಸಮಂತಾ ಸಹ ಮುಂಬೈಗೆ ಪಯಣ ಬೆಳೆಸಿದ್ದಾರೆ.. ಹೀಗಾಗಿ ಇಬ್ಬರೂ ಪೈಪೋಟಿಗೆ ಇಳಿದಿದ್ದಾರಾ..?? ಎನ್ನಲಾಗ್ತಿದೆ..
ಒಂದೆಡೆ ಬಾಲಿವುಡ್ ನ ಬಹುನಿರೀಕ್ಷೆಯ ಲಾಲ್ ಸಿಂಗ್ ಚಡ್ಡಾ ಪ್ರಮೋಷನ್ ನಲ್ಲಿ ನಾಗಚೈತನ್ಯ ಬ್ಯುಸಿಯಿದ್ದರೆ , ಮತ್ತೊಂದೆಡೆ ಸಮಂತಾ ಬಾಲಿವುಡ್ ಸಿನಿಮಾಗೆ ತಯಾರಿ ನಡೆಸಿಕೊಳ್ತಿದ್ದಾರೆ.. ನಾಗಚೈತನ್ಯ ಅವರು ಮುಂಬೈಗೆ ಲ್ಯಾಂಡ್ ಆದ ಬೆನ್ನಲ್ಲೇ ಮಾಜಿ ಪತ್ನಿ ಸಮಂತಾ ಸಹ ಮುಂಬೈಗೆ ಎಂಟ್ರಾಗಿದ್ದು ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ಬಗ್ಗೆ ವದಂತಿಗಳು ಹರಿದಾಡಲಾರಂಭಿಸಿದೆ..