ಖ್ಯಾತ ಉದ್ಯಮಿ ವಿಜಯ್ ಸಂಕೇಶ್ವರ್ ಅವರ ಬಯೋಪಿಕ್ ಸಿನಿಮಾದ ಸುದ್ದಿ ಸಾಕಷ್ಟು ಸೌಂಡ್ ಮಾಡ್ತಿದೆ… ‘ವಿಜಯಾನಂದ’ ಟೈಟಲ್ ನ ಈ ಸಿನಿಮಾ 4 ಭಾಷೆಯಲ್ಲಿ ಮೂಡಿಬರುತ್ತಿದೆ.. ಅಂದ್ಹಾಗೆ ಸಿನಿಮಾದ ಟೀಸರ್ ನಾಲ್ಕೂ ಭಾಷೆಗಳಲ್ಲೂ ರಿಲೀಸ್ ಆಗಿ ಉತ್ತಮ ಪ್ರದರ್ಶನವನ್ನ ಪಡೆದುಕೊಳ್ತಿದೆ.. ಲಕ್ಷಾಂತರ ವೀವ್ಸ್ ಪಡೆದುಕೊಂಡಿದೆ..
1976ರಲ್ಲಿ ಒಂದು ಟ್ರಕ್ ನಿಂದ ತಮ್ಮ ವೃತ್ತಿ ಜೀವನ ಆರಂಭಿಸಿದ ವಿಜಯ್ ಸಂಕೇಶ್ವರ್ ಅವರು ಇಂದು ಸಕ್ಸಸ್ ಫುಲ್ ಬ್ಯುಸಿನೆಸ್ ಮೆನ್ ಆಗಿದ್ದಾರೆ.. ಅವರು ನಡೆದುಬಂದ ಹಾದಿಯ ಬಗೆಗಿನ ಸಿನಿಮಾ ಇದಾಗಿದೆ. ಅಂದ್ಹಾಗೆ ಅವರದ್ದೇ VRL ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ವಿಜಯ ಸಂಕೇಶ್ವರ ಅವರ ಪುತ್ರ ಆನಂದ್ ಸಂಕೇಶ್ವರ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಅಂದ್ಹಾಗೆ ಜಿ. ವಿ ಅಯ್ಯರ್ ಮೊಮ್ಮಗಳು ರಿಷಿಕಾ ಶರ್ಮಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನಟ ನಿಹಾಲ್ ಈ ಸಿನಿಮಾದಲ್ಲಿ ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.