ಈ ಬಾರಿ ಬಿಗ್ ಬಾಸ್ ಕನ್ನಡ ಒಟಿಟಿ ಸಾಕಷ್ಟು ಹೊಸತನ ಹಾಗೂ ವಿಶೇಷತೆಗಳಿಂದ ಆರಂಭವಾಗಿದೆ… ಒಟಿಟಿಯಲ್ಲಿ ಇದು ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ ಆಗಿದೆ.. ಸ್ಪರ್ಧಿಗಳು ಯಾರು ಎಂಬ ಸಾಕಷ್ಟು ಕುತೂಹಲಗಳು ಜನರನ್ನ ಕಾಡಿತ್ತು.. ಸೋಷಿಯಲ್ ಮೀಡಿಯಾದಲ್ಲೀ ಅನೇಕರ ಹೆಸರುಗಳ ಬಲವಾಗಿ ಕೇಳಿಬಂದಿತ್ತು ಕೂಡ.. ಈ ಪೈಕಿ ಒಬ್ರು ಸೋಷಿಯಲ್ ಮೀಡಿಯಾ ಸ್ಟಾರ್ , ಟ್ರೋಲಿಗರ ಫೇವರೇಟ್ ,,,, ಸೋನು ಶ್ರೀನಿವಾಸ್ ಗೌಡ.. ಇದೀಗ ಎರಡನೇ ಸ್ಪರ್ಧಿಯಾಗಿ ಮನೆಗೆ ಎಂಟ್ರಿಕೊಟ್ಟಿದ್ದಾರೆ..
ಮೊದಲನೇ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ ದೊಡ್ಮನೆ ಪ್ರವೇಶ ಮಾಡಿದ್ದಾರೆ.. ಇದೀಗ ಸೋನು ಇಂದಿನ ಗ್ರ್ಯಾಂಡ್ ಓಪನಿಂಗ್ ವೇಳೆ ಎರಡನೇ ಸ್ಪರ್ಧಿಯಾಗಿ ಸೋನು ಮನೆ ಪ್ರವೇಶ ಮಾಡಿದ್ದಾರೆ.. ಸಾಕಷ್ಟು ವಿವಾದಗಳನ್ನೂ ಮಾಡಿಕೊಂಡಿರುವ ಸೋನು ಟ್ರೋಲಿಗರಿಗೆ ಫಸ್ಟ್ ಚಾಯ್ಸ್ ಆಗಿರುತ್ತಾರೆ..
ಅತಿ ಹೆಚ್ಚು ಟ್ರೋಲ್ ಆಗುವ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡಗೆ ಲಕ್ಷಂತಾರ ಅಭಿಮಾನಿಗಳೂ ಇದ್ದಾರೆ.. ಜಾತಿ ವಿಚಾರವಾಗಿ ಸ್ನೇಹಿತೆಯ ವಿರುದ್ಧ ಮುಗಿಬಿದ್ದ ವಿಚಾರ , ಕನ್ನಡ ಸಿನಿಮಾರಂಗಕ್ಕಿಂತ ತೆಲುಗು ಸಿನಿಮಾಗಳು ಬೆಟರ್ ಅಂದಿದ್ದ ವಿಚಾರಗಳಿಂದ ಸಾಕಷ್ಟು ಸೋನು ವಿವಾದಕ್ಕೂ ಗುರಿಯಾಗಿದ್ದರು.. ಅಂದ್ಹಾಗೆ ಸೋನು ಗೌಡ ಕ್ಯಾಡ್ಬರಿ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ..
ಇನ್ ಸ್ಟಾಗ್ರಾಮ್ ನಲ್ಲಿ ಸೋನುಗೌಡಗೆ 7,76,000 ಫಾಲೋವರ್ಸ್ ಇದ್ದಾರೆ. ಇದೀಗ ಸೋನು ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ತಿದ್ದು , ಅವರು ಇಲ್ಲಿ ಹೇಗಿರುತ್ತಾರೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡ್ಬೇಕಿದೆ..