BIGGBOSS OTT : ದೊಡ್ಮನೆ ಪ್ರವೇಶ ಮಾಡ್ತಿರುವ ಸ್ಪರ್ಧಿಗಳು ಇವರೇ ನೋಡಿ..!!
BIGGBOSS OTT : ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಈ ಬಾರಿ ಸಾಕಷ್ಟು ವಿಶೇಷತೆಗಳ ಜೊತೆಗೆ ಪ್ರಸಾರವಾಗ್ತಿರುವ ವಿಚಾರ ಎಲ್ರಿಗೂ ಗೊತ್ತಿದೆ.. ಅಂದ್ಹಾಗೆ ಬಿಗ್ ಬಾಸ್ ಒಟಿಟಿ ಬಗ್ಗೆಯೂ ತಿಳಿದೇ ಇದೆ.. ಕನ್ನಡದಲ್ಲಿ ಮೊದಲ ಬಿಗ್ ಬಾಸ್ ಒಟಿಟಿ ಸೀಸನ್ ದಿನಿಂದ ಗ್ರಾಂಡ್ ಓಪನಿಂಗ್ ಪಡೆಯಲಿದ್ದು , ಸಾಕಷ್ಟು ಕ್ಯೂರಿಯಾಸಿಟಿಗಳಿವೆ.. ಯಾರೆಲ್ಲಾ ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸಬಹುದೆಂಬ ಚರ್ಚೆಗಳು , ಊಹಾಪೋಹಗಳು ಹಬ್ಬಿವೆ..
ಸೋಷಿಯಲ್ ಮೀಡಿಯಾದಲ್ಲಿ ಅನೇಕರ ಹೆಸರುಗಳು ಚರ್ಚೆಯಾಗುತ್ತಿವೆ… ಸಂಭಾವ್ಯ ಸ್ಪರ್ಧಿಗಳ ಹೆಸರುಗಳಲ್ಲಿ ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಬಾಲ್ಯದಲ್ಲಿ ಪುಟ್ಟ ಗೌರಿಯಾಗಿ ನಟಿಸಿದ್ದ ನಟಿ ಸಾನ್ಯ ಅಯ್ಯರ್ ಹೆಸರು ಜೋರಾಗಿ ಕೇಳಿ ಬರುತ್ತಿದೆ.. ಇವರು ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಡಬಹುದು ಎನ್ನಲಾಗ್ತಿದೆ..
ಇತ್ತ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಸಮಾಜಿಕ ಕಾರ್ಯಗಳ ಮೂಲಕವೇ ಕನ್ನಡತಿ ಅಕ್ಕ ಅನು ಎಂದು ಫೇಮಸ್ ಆಗಿರುವ ಯುವ ಸಮಾಜಮುಖಿ ಕಾರ್ಯಕರ್ತೆ ಅನು ಕೂಡ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎನ್ನಲಾಗ್ತಿದೆ..
ಒಂದು ಕಾಲದಲ್ಲಿ ಸ್ಟಾರ್ ಗಳ ಜೊತೆಗೆ ಬಣ್ಣ ಹಚ್ಚಿದ್ದ ಸುದೀಪ್ ಅವರ ಹುಚ್ಚ ಸಿನಿಮಾದ ಮೂಲಕ ಹೆಚ್ಚು ಫೇಮಸ್ ಆಗಿದ್ದ ನಟಿ ರೇಖಾ ವೇದವ್ಯಾಸ ಕೂಡ ದೊಡ್ಮನೆ ಪ್ರವೇಶ ಮಾಡಲಿದ್ದಾರಂತೆ.. ಅವರ ಜೊತೆಗೆ ನಟರಾದ ತರುಣ್ ಚಂದ್ರ, ನವೀನ್ ಕೃಷ್ಣ ಕೂಡ ಬಾರಿ ಬಿಗ್ ಬಾಸ್ ಮನೆ ಪ್ರವೇಶ ಮಾಡಬಹುದು ಎನ್ನಲಾಗ್ತಿದೆ..
ಇದೆಲ್ಲದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಬರ್ತ್ ಡೇ ಗೆ ವಿಭಿನ್ನವಾಗಿ ವಿಷ್ ಮಾಡ್ತಾ ಫೇಮಸ್ ಆಗಿರುವ ಕಾಫಿ ನಾಡು ಚಂದು ಕೂಡ ಶೋನಲ್ಲಿ ಕಾಣಿಸಿಕೊಳ್ಬಹುದು ಎನ್ನಲಾಗ್ತಿದೆ..
ಇತ್ತ ರೀಲ್ಸ್ ಮೂಲಕ ಸಂಚಲನವನ್ನೇ ಸೃಷ್ಟಿ ಮಾಡ್ತಾ ಟ್ರೋಲಿಗರ ಫೇವರೇಟ್ ಆಗಿರುವ ಸೋಷಿಯಲ್ ಮೀಡಿಯಾವ ಸ್ಟಾರ್ ಸೋನು ಶ್ರೀನಿವಾಸ್ ಗೌಡ , ಜೊತೆಗೆ ಭೂಮಿಕಾ ಬಸವರಾಜ್ ಕೂಡ ಬಿಗ್ ಬಾಸ್ ಒಟಿಟಿಯಲ್ಲಿ ಕಾಣಿಸಿಕೊಳ್ತಿದ್ದಾರೆ ಎಂಬ ಚರ್ಚೆ ಜೋರಾಗಿದೆ.
ಅಂದ್ಹಾಗೆ ಬಿಗ್ ಬಾಸ್ ಒಟಿಟಿ ಮುಗಿದ ನಂತರವೇ ಬಿಗ್ ಬಾಸ್ ಸೀಸನ್ 9 ಸಹ ರಂಭವಾಗಲಿದ್ದು , ಈ ಒಟಿಟಿ ನಂತರ ಇಲ್ಲಿನ ಕೆಲ ಸ್ಪರ್ಧಿಗಳು ಅಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.. ಮೂಲಗಳ ಪ್ರಕಾರ ಬಿಗ್ ಬಾಸ್ ಸೀಸನ್ 9 ಅಕ್ಟೋಬರ್ ನಿಂದ ಪ್ರಸಾರವಾಗಬಹುದು ಎನ್ನಲಾಗ್ತಾಯಿದೆ..
ಇದೆಲ್ಲದರ ನಡುವೆ 2019 ರಲ್ಲಿ ಬಿಗ್ ಬಾಸ್ ನ 2ನೇ ರನ್ನರ್ ಅಪ್ ಆಗಿದ್ದ ಗಾಯಕ ವಾಸುಕಿ ವೈಭವ್ ಅವರು ಇತ್ತೀಚೆಗೆ ಸುದೀಪ್ ಅವರ ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ..
ಪ್ರಮೋದಲ್ಲಿ ತೋರಿಸಿರುವ ಹಾಗೆ , ಕಿಚ್ಚ ಸುದೀಪ್ ಹಾಗೂ ವಾಸುಕಿ ವೈಭವ್ ಅವರು ಮನೆ ಒಳಗೆ ಎಂಟ್ರಿ ಕೊಡುತ್ತಿದ್ದ ಹಾಗೆ ಇಡೀ ಮನೆಯ ಜಾಗ ಯಾವಾಗ ಯಾವ ರೀತಿಯಲ್ಲಿ ಬಳಕೆ ಆಗುತ್ತದೆ ಎಂಬುದನ್ನು ವಿವರಿಸಿದ್ದಾರೆ. ಆಗಸ್ಟ್ 6ರಿಂದ ಸಂಜೆ 7 ಗಂಟೆಗೆ BIGG BOSS OTT ಆರಂಭ ಆಗುತ್ತಿದೆ.