BIGGBOSS OTT : ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಈ ಬಾರಿ ಸಾಕಷ್ಟು ವಿಶೇಷತೆಗಳ ಜೊತೆಗೆ ಪ್ರಸಾರವಾಗ್ತಿರುವ ವಿಚಾರ ಎಲ್ರಿಗೂ ಗೊತ್ತಿದೆ.. ಅಂದ್ಹಾಗೆ ಬಿಗ್ ಬಾಸ್ ಒಟಿಟಿ ಬಗ್ಗೆಯೂ ತಿಳಿದೇ ಇದೆ.. ಕನ್ನಡದಲ್ಲಿ ಮೊದಲ ಬಿಗ್ ಬಾಸ್ ಒಟಿಟಿ ಸೀಸನ್ ದಿನಿಂದ ಗ್ರಾಂಡ್ ಓಪನಿಂಗ್ ಪಡೆಯಲಿದ್ದು , ಸಾಕಷ್ಟು ಕ್ಯೂರಿಯಾಸಿಟಿಗಳಿವೆ.. ಯಾರೆಲ್ಲಾ ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸಬಹುದೆಂಬ ಚರ್ಚೆಗಳು , ಊಹಾಪೋಹಗಳು ಹಬ್ಬಿವೆ..
ಇದೆಲ್ಲದರ ನಡುವೆ 2019 ರಲ್ಲಿ ಬಿಗ್ ಬಾಸ್ ನ 2ನೇ ರನ್ನರ್ ಅಪ್ ಆಗಿದ್ದ ಗಾಯಕ ವಾಸುಕಿ ವೈಭವ್ ಅವರು ಇತ್ತೀಚೆಗೆ ಸುದೀಪ್ ಅವರ ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ..
ವಾಸುಕಿ ವೈಭವ್ , ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯಲ್ಲಿ ಓಡಾಡುತ್ತಾ ಮನೆ ತೋರಿಸಿರುವ ಪ್ರೋಮೋ ರಿಲೀಸ್ ಆಗಿದ್ದು , ಮತ್ತಷ್ಟು ಕುತೂಹಲ ಹೆಚ್ಚಿಸಿದೆ..
ಪ್ರಮೋದಲ್ಲಿ ತೋರಿಸಿರುವ ಹಾಗೆ , ಕಿಚ್ಚ ಸುದೀಪ್ ಹಾಗೂ ವಾಸುಕಿ ವೈಭವ್ ಅವರು ಮನೆ ಒಳಗೆ ಎಂಟ್ರಿ ಕೊಡುತ್ತಿದ್ದ ಹಾಗೆ ಇಡೀ ಮನೆಯ ಜಾಗ ಯಾವಾಗ ಯಾವ ರೀತಿಯಲ್ಲಿ ಬಳಕೆ ಆಗುತ್ತದೆ ಎಂಬುದನ್ನು ವಿವರಿಸಿದ್ದಾರೆ.
ಆಗಸ್ಟ್ 6ರಿಂದ ಸಂಜೆ 7 ಗಂಟೆಗೆ BIGG BOSS OTT ಆರಂಭ ಆಗುತ್ತಿದೆ.