Shivarajkumar : ವೇದ ರೈಟ್ಸ್ ದುಬಾರಿ ಮೊತ್ತಕ್ಕೆ ಸೇಲ್ : ಪ್ರೀ ಬ್ಯುಸಿನೆಸ್ ಕಮಾಯಿ ಎಷ್ಟು ಕೋಟಿ..??
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ವೇದ ಸಿನಿಮಾ ಸ್ಯಾಂಡಲ್ ವುಡ್ ನ ನ್ ಆಫ್ ದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾ.. ಭಜರಂಗಿ ಜೋಡಿ ಈ ಸಿನಿಮಾದಲ್ಲಿ ಒಂದಾಗಿರೋದು ಸಿನಿಮಾ ಮೇಲಿನ ಕ್ರೇಜ್ ಹೆಚ್ಚಾಗಿಸಿದೆ.. ಎ. ಹರ್ಷ ನಿರ್ದೇಶನದ ಸಿನಿಮಾಗಾಗಿ ಶಿವಣ್ಣನ ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ.. ಅಂದ್ಹಾಗೆ ಶಿವಣ್ಣನ ಕೈನಲ್ಲಿ ಇನ್ನೂ ಸಾಕಷ್ಟು ಪ್ರಾಜೆಕ್ಟ್ ಗಳಿವೆ..
ಈ ನಡುವೆ ಸಿನಿಮಾ ರಿಲೀಸ್ ಗೂ ಮುನ್ನವೆ ಭರ್ಜರಿ ವಾಣಿಜ್ಯ ವಹಿವಾಟು ನಡೆಸುತ್ತಿದೆ ಎನ್ನಲಾಗ್ತಿದೆ.. ಅಲ್ದೇ ಈ ಸಿನಿಮಾದ ಹಕ್ಕು ದುಬಾರಿ ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗ್ತಿದೆ..
ವೇದ… ಶಿವರಾಜ್ ಕುಮಾರ್ ನಟನೆಯ 125ನೇ ಸಿನಿಮಾವಾಗಿದೆ… ಶೂಟಿಂಗ್ ಹಂತದಲ್ಲಿರುವಾಗಲೇ ಸಿನಿಮಾ ಭಾರೀ ಬ್ಯುಸಿನೆಸ್ ಮಾಡ್ತಿದೆ ಎನ್ನಲಾಗಿದೆ..
ವೇದ ಚಿತ್ರದ ಥಿಯೇಟರ್ ಹಾಗೂ ಥಿಯೇಟರ್ ರಹಿತ ಹಕ್ಕುಗಳ ದುಬಾರಿ ಮೊತ್ತಕ್ಕೆ ಮಾರಾಟ ಆಗಿದೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡ್ತಿದೆ..
ಅಂದ್ಹಾಗೆ ವೇದ ಸಿನಿಮಾ ಥಿಯೇಟರ್ ಹಕ್ಕು, ಸ್ಯಾಟಲೈಟ್, ಓಟಿಟಿ, ಆಡಿಯೋ, ಡಬ್ಬಿಂಗ್ ರೈಟ್ಸ್ ಸೇರಿ ಸುಮಾರು 21 ಕೋಟಿ ರೂ.ಗೆ ಮಾರಾಟ ಆಗಿದೆ ಎನ್ನಲಾಗುತ್ತಿದೆ. ಆದ್ರೆ ಎಲ್ಲಿಯೂ ಸಿನಿಮಾತಂಡ ಅಧಿಕೃತವಾಗಿ ಮಾಹಿತಿ ನೀಡಿಲ್ಲ.. ಅಂದ್ಹಾಗೆ ಈ ಸಿನಿಮಾ ಮೂರು ಭಾಷೆಗಳಲ್ಲಿ ರಿಲೀಸ್ ಆಗ್ತಿರುವುದು ವಿಶೇಷ..
ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ‘ವೇದ’ ಸಿನಿಮಾ ರಿಲೀಸ್ ಆಗುತ್ತಿದೆ.. ಈ ಸಿನಿಮಾದಲ್ಲಿ ಗಾನವಿ ಲಕ್ಷ್ಮಣ್ ಹಾಗೂ ಕಿರುತೆರೆ ನಟಿ ಹಾಗೂ ಖ್ಯಾತ ನಿರೂಪಕಿ ಶ್ವೇತಾ ಚಂಗಪ್ಪ ಬಣ್ಣ ಹಚ್ಚಿದ್ದಾರೆ..