ಸೋನು.. ಸೂನು… ಸೋನು ಗೌಡ… ಸದ್ಯಕ್ಕೆ ಟ್ರೆಂಡ್ ಆಗ್ತಿರುವ ಹೆಸರು ಇದೇ … ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ… ಟ್ರೋಲಿಗರ ಆಲ್ ಟೈಮ್ ಫೇವರೇಟ್.. ಸದ್ಯ ಈಗ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ ಸೋನು ಗೌಡ…
ಎಷ್ಟೇ ಟ್ರೋಲ್ ಆದ್ರೂ ಸೋನು ಗೆ ಫ್ಯಾನ್ ಫಾಲೋಯಿಂಗ್ ಏನ್ ಕಡಿಮೆಯಾಗಿಲ್ಲ.. ಸುಮಾರು 7 ರಿಂದ 8 ಲಕ್ಷ ಮಂದಿ ಅವರನ್ನ ಇನ್ಸ್ಟಾದಲ್ಲಿ ಫಾಲೋ ಮಾಡ್ತಿದ್ದಾರೆ.. ಆದ್ರೆ ಸೋನು.. ಸೋನು ಇದೇ ಅವರ ನಿಜವಾದ ಹೆಸರಾ..??? ಅಥವ ಅವರಿಗೆ ಬೇರೆ ಹೆಸರೇನಾದ್ರೂ ಇದ್ಯಾ..??? ಅನ್ನೋ ಪ್ರಶ್ನೆ ಕುತೂಹಲ ಅನೇಕರಿಗಿದೆ..
ಇದೀಗ ಕಿಚ್ಚ ಸುದೀಪ್ ಅವರ ಜೊತೆಗೆ ಗ್ರ್ಯಾಂಡ್ ಓಪನಿಂಗ್ ವೇಳೆ ವೇದಿಕೆ ಹಂಚಿಕೊಂಡಿದ್ದ ಸೋನು ತಮ್ಮ ನಿಜವಾದ ಹೆಸರನ್ನ ರಿವೀಲ್ ಮಾಡಿದ್ದಾರೆ.. ಸೋನು ಗೌಡ ನಿಜವಾದ ಹೆಸರು ಶಾಂಭವಿ ಗೌಡ..
ಸೋನು ಗೌಡ ಮಂಡ್ಯದವರು. ಸಿನಿಮಾ ಹೀರೋಯಿನ್ ಆಗಬೆಕೆಂಬ ಕನಸು ಕಂಡವರು.. ಬೆಂಗಳೂರಿನಲ್ಲಿ ಉಳಿದುಕೊಂಡಿದ್ದಾರೆ.. ಎಂದೋ ಒಂದಿನ ಶಾಂಭವಿಯನ್ನ ಯಾರೋ ಸೋನು ಕರೆದಿದ್ದಾರೆ.. ಅದೇ ಹೆಸರನ್ನೇ ಇಷ್ಟ ಪಟ್ಟು ಸೋಷಿಯಲ್ ಮೀಡಿಯಾದಲ್ಲಿ ಸೋನು ಗೌಡ ಹಾಕಿಕೊಂಡಿದ್ದರು.. ಅದೇ ಹೆಸರು ಫೇಮಸ್ ಕೂಡ ಯ್ತು.. ಹೀಗಾಗಿ ಎಷ್ಟೋ ಜನರಿಗೆ ಸೋನು ಅಸಲಿ ಹೆಸರು ಗೊತ್ತಿರಲಿಲ್ಲ..
ಆಗಸ್ಟ್ 6ರಂದು ಬಿಗ್ ಬಾಸ್ ಕನ್ನಡ ಓಟಿಟಿ ಗ್ರ್ಯಾಂಡ್ ಓಪನಿಂಗ್ ಪಡೆದಿದೆ.. 16 ಕಂಟೆಸ್ಟ್ ಟೆಂಟ್ ಗಳು ಮನೆ ಪ್ರವೇಶ ಮಾಡಿದ್ದಾರೆ… ಎಲ್ಲರದ್ದೂ ಭಿನ್ನ ಭಿನ್ನ ವ್ಯಕ್ತಿವಿದ್ದು , ಕೆಲವರು ಕಾಂಟ್ರವರ್ಸಿಗಳ ಮೂಲಕವೇ ಸುದ್ದಿಯಾಗಿದ್ದಾರೆ… ಈ ಬಾರಿ ಅತಿ ಹೆಚ್ಚು ಶೋನ ಹೈಲೇಟ್ ಆಗ್ತಿರೋದು ಟ್ರೋಲಿಗರ ಫೇವರೇಟ್ ಸೋನು ಗೌಡ.. ಮೊದಲ ವಾರವೇ ಸೋನು ಗೌಡ ಎಲಿಮಿನೇಷನ್ ರೌಂಡ್ ಗೆ ನಾಮಿನೇಟ್ ಕೂಡ ಆಗಿದ್ದಾರೆ..
ಈ ಬಾರಿ ಒಟಿಟಿಯಲ್ಲಿ ವಿನ್ನಿಂಗ್ ಅನ್ನೋದು ಇರೋದಿಲ್ಲ.. ಕೊನೆಯವರೆಗೆ ಉಳಿಯುವವರು ಈ ಒಟಿಟಿ ಬಿಗ್ ಬಾಸ್ ನಿಂದ ನೇರವಾಗಿ ಟಿವಿ ಬಿಗ್ ಬಾಸ್ ಗೆ ಪ್ರವೇಶ ಪಡೆಯಲಿದ್ದಾರೆ..