Bigg Boss Ott : ಸ್ಪೂರ್ತಿ ಡವ್ ರಾಣಿ ಎಂದ ಸೋನು : ಆರಂಭದಲ್ಲೇ ಗಲಾಟೆ..!!
ಮೊದಲಿಗೆ ಟಿಕ್ ಟಾಕ್ ಸ್ಟಾರ್ ಆ ನಂತರ ಇನ್ಸ್ಟಾಗ್ರಾಮ್ ನ ರೀಲ್ ಸ್ಟಾರ್ ಆಗಿ ಮಿಂಚಿ ಬಹುಬೇಗ ಫೇಮಸ್ ಆಗಿ ಅಷ್ಟೇ ಬೇಗ ವಿವಾದಗಳನ್ನ ಮಾಡಿಕೊಂಡು ವಿವಾದಗಳಿಂದಲೇ ಸುದ್ದಿಯಾಗುತ್ತಾ , ಟ್ರೋಲಿಗರಿಂದ ಸಖತ್ ಟ್ರೋಲ್ ಆಗಿ ಈಗ ಕನ್ನಡದ ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ಆರಂಭದಲ್ಲೇ ಜಗಳ ತೆಗೆದಿದ್ದಾರೆ..
ಸಹ ಸ್ಪರ್ಧಿ ಸ್ಪೂರ್ತಿ ಜೊತೆಗೆ ಕಿರಿಕ್ ಮಾಡಿಕೊಂಡಿದ್ದಾರೆ.. ಸ್ಪೂರ್ತಿಗೆ ಸೋನು ಡವ್ ರಾಣಿ ಎಂದಿದ್ದಾರೆ.. ಇದೇ ವಿಚಾರಕ್ಕೆ ಅವರ ನಡುವೆ ಅಸಮಾಧಾನ ಮೂಡಿದೆ..
ಹೌದು..! Voot ನಲ್ಲಿ ಪ್ರಸಾರವಾಗ್ತಿರುವ ಬಿಗ್ ಬಾಸ್ ಒಟಿಟಿಯಲ್ಲಿ ಏನೆಲ್ಲಾ ನಡೆಯಲಿದೆ.. ಜಗಳವಾಗಲಿದ್ಯಾ ಎಂಬೆಲ್ಲಾ ಕುತೂಹಲದಿಂದ ಪ್ರೇಕ್ಷಕರು ಕಾಯುತ್ತಿರುವ ಹೊತ್ತಲ್ಲೇ ಸೋನು – ಸ್ಪೂರ್ತಿ ನಡುವೆ ಮುಂದೆ ದೊಡ್ಡ ವಾರ್ ನಡೆಯೋ ಸೂಚನೆ ಸಿಕ್ಕಿದೆ..
ಸ್ಪೂರ್ತಿ ಗೌಡ ಮೇಕಪ್ ಮಾಡಿಕೊಳ್ಳುತ್ತಿರುವನ್ನು ಕಂಡ ಸೋನು ಗೌಡ, ಮೇಕಪ್ ಬಗ್ಗೆ ಕೆಲವು ಪ್ರಶ್ನೆಗಳನ್ನ ಮಾಡಿದ್ದಾರೆ.. ಮೇಕಪ್ ವಿಚಾರ ಮಾತನಾಡುತ್ತಾ , ಮೇಕಪ್ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ ಸ್ಪೂರ್ತಿ.. ಆಗ ಸೋನು ಡವ್ ರಾಣಿ ಎಲ್ಲಾ ಗೊತ್ತಿದ್ದು, ಏನು ಗೊತ್ತಿಲ್ಲದ ಹಾಗೆ ಡವ್ ಮಾಡ್ತಿಯ ಎಂದಿದ್ದಾರೆ. ಸೋನು ತಮಾಷೆಯಾಗಿಯೇ ಹೇಳಿರಬಹುದು.. ಆಧ್ರೆ ಇದು ಡವ್ ರಾಣಿ ಎನ್ನುವ ಪದ ಬಳಕೆ ಸ್ಪೂರ್ತಿ ಗೌಡಗೆ ಹಿಡಿಸಿಲ್ಲ.. ಸೋನು ಮಾತಿನಿಂದ ಸಿಟ್ಟಾಗಿದ್ದಾರೆ.
ಮೊದಲಿಗೆ ಸೋನು ಗೌಡಗೆ ನಗುತ್ತಲೇ ಪ್ರತಿಕ್ರಿಯೆ ನೀಡಿದ್ದ ಸ್ಪೂರ್ತಿ ಗೌಡ ನಂತರ ಸೋನು ಮೇಲೆ ಕಿಡಿ ಕಾರಿದ್ದಾರೆ. ಡವ್ ರಾಣಿ ಎನ್ನುವ ಪದ ಬಳಕೆ ಮಾಡಿರುವುದು ಇಷ್ಟ ಆಗಲಿಲ್ಲ. ಆ ರೀತಿ ಮಾತನಾಬೇಡ ಎನ್ನುತ್ತಾ ಜಗಳ ಶುರು ಮಾಡುತ್ತಾರೆ. ಹೀಗೆ ಕೆಲ ಸಮಯ ವಾಕ್ಸಮರ ನಡೆದಿದೆ. ಸದ್ಯಕ್ಕೆ ಇಬ್ಬರೂ ಪರಸ್ಪರ ಮುನಿಸಿಕೊಂಡಿದ್ದಾರೆ.
ಆಗಸ್ಟ್ 6ರಂದು ಬಿಗ್ ಬಾಸ್ ಕನ್ನಡ ಓಟಿಟಿ ಗ್ರ್ಯಾಂಡ್ ಓಪನಿಂಗ್ ಪಡೆದಿದೆ.. 16 ಕಂಟೆಸ್ಟ್ ಟೆಂಟ್ ಗಳು ಮನೆ ಪ್ರವೇಶ ಮಾಡಿದ್ದಾರೆ… ಎಲ್ಲರದ್ದೂ ಭಿನ್ನ ಭಿನ್ನ ವ್ಯಕ್ತಿವಿದ್ದು , ಕೆಲವರು ಕಾಂಟ್ರವರ್ಸಿಗಳ ಮೂಲಕವೇ ಸುದ್ದಿಯಾಗಿದ್ದಾರೆ… ಈ ಬಾರಿ ಅತಿ ಹೆಚ್ಚು ಶೋನ ಹೈಲೇಟ್ ಆಗ್ತಿರೋದು ಟ್ರೋಲಿಗರ ಫೇವರೇಟ್ ಸೋನು ಗೌಡ.. ಮೊದಲ ವಾರವೇ ಸೋನು ಗೌಡ ಲಿಮಿನೇಷನ್ ರೌಂಡ್ ಗೆ ನಾಮಿನೇಟ್ ಕೂಡ ಆಗಿದ್ದಾರೆ..
ಈ ಬಾರಿ ಒಟಿಟಿಯಲ್ಲಿ ವಿನ್ನಿಂಗ್ ಅನ್ನೋದು ಇರೋದಿಲ್ಲ.. ಕೊನೆಯವರೆಗೆ ಉಳಿಯುವವರು ಈ ಒಟಿಟಿ ಬಿಗ್ ಬಾಸ್ ನಿಂದ ನೇರವಾಗಿ ಟಿವಿ ಬಿಗ್ ಬಾಸ್ ಗೆ ಪ್ರವೇಶ ಪಡೆಯಲಿದ್ದಾರೆ..