ಮೊದಲಿಗೆ ಟಿಕ್ ಟಾಕ್ ಸ್ಟಾರ್ ಆ ನಂತರ ಇನ್ಸ್ಟಾಗ್ರಾಮ್ ನ ರೀಲ್ ಸ್ಟಾರ್ ಆಗಿ ಮಿಂಚಿ ಬಹುಬೇಗ ಫೇಮಸ್ ಆಗಿ ಅಷ್ಟೇ ಬೇಗ ವಿವಾದಗಳನ್ನ ಮಾಡಿಕೊಂಡು ವಿವಾದಗಳಿಂದಲೇ ಸುದ್ದಿಯಾಗುತ್ತಾ , ಟ್ರೋಲಿಗರಿಂದ ಸಖತ್ ಟ್ರೋಲ್ ಆಗಿ ಈಗ ಕನ್ನಡದ ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ತಮ್ಮ ವಿಡಿಯೋ ಪ್ರಕರಣ ನೆನೆದು ಕಣ್ಣೀರಿಟ್ಟಿದ್ಧಾರೆ..
ಹೌದು ಸೋನು ಗೌಡ ವೈರಲ್ ವಿಡಿಯೋ ಕಥೆಯ ಹಿಂದಿನ ಅಸಲಿಯತ್ತನ್ನ ಬಿಚ್ಚಿಟ್ಟಿದ್ದಾರೆ. ಸೋನು ಗೌಡ ಅವರ ಬಾಯ್ ಫ್ರೆಂಡ್ ಅವರ ವಿಡಿಯೋವನ್ನ ಲೀಕ್ ಮಾಡಿದ್ದಾಗಿ ಹೇಳುತ್ತಾ ಕಣ್ಣೀರಿಟ್ಟಿದ್ದಾರೆ.
ಅವರು ಹೇಳಿರುವುದು ಹೀಗೆ…
“ ನಮ್ಮ ಮನೆಯಲ್ಲಿ ನನಗೆ ಯಾರನ್ನ ಬೆಕಾದರೂ ಪ್ರೀತಿ ಮಾಡುವ ಸ್ವಾತಂತ್ರ್ಯ ನೀಡಿದ್ದರು.. ನಾನು ಒಬ್ಬನನ್ನ ಪ್ರೀತಿ ಮಾಡಿದ್ದೆ.,. ಆತ ನನಗೆ ಒಂದು ದಿನ ವಿಡಿಯೋ ಕಾಲ್ ಮಾಡಿದ್ದ.. ಮತ್ತೊಂದು ದಿನ ನಿನ್ನ ವಿಡಿಯೋ ನನ್ನ ಹತ್ತಿರವಿದೆ.. ನೀನು ಅದ್ಯಾರನ್ನ ಮದುವೆಯಾಗ್ತಿಯ ನೋಡ್ತೇನೆ ಎಂದು ಧಮ್ಕಿ ಹಾಕಿದ್ದ “ ಎಂದು ಗಳಗಳನೆ ಅತ್ತಿದ್ದಾರೆ.. ಸಹ ಸ್ಪರ್ಧಿಗಳು ಅವರಿಗೆ ಸಾಂತ್ವಾನ ಹೇಳಿದ್ದಾರೆ.