Biggboss Ott : ಮೊದಲ ವಾರವೇ 8 ಮಂದಿ ನಾಮಿನೇಟ್ : ಎಲಿಮಿನೇಟ್ ಆಗೋದ್ಯಾರು..??
ಬಿಗ್ ಬಾಸ್ ಒಟಿಟಿ ಆಗಸ್ಟ್ 6 ರಂದು ಗ್ರ್ಯಾಂಡ್ ಆಗಿ ಓಪನಿಂಗ್ ಕಂಡಿದೆ.. Voot ನಲ್ಲಿ ಬಿಗ್ ಬಾಸ್ ಪ್ರಸಾರವಾಗ್ತಿದೆ… ಈ ಬಾರಿ 16 ಕಂಟೆಸ್ಟೆಂಟ್ ಗಳು ಮನೆ ಪ್ರವೇಶ ಮಾಡಿದ್ದಾರೆ… ಎಲ್ಲರದ್ದೂ ಭಿನ್ನ ವ್ಯಕ್ತಿತ್ವ.. ಕಾಂಟ್ರವರ್ಸಿ ಮೂಲಕ ಅತಿ ಹೆಚ್ಚು ಫೇಮಸ್ ಆಗಿದ್ದ ಸೋನು ಗೌಡ ಈ ಬಾರಿ ಬಿಗ್ ಬಾಸ್ ನ ಹೈಲೇಟ್.. ಅಂತೆಯೇ ಸಂಖ್ಯಾಶಾಸ್ತ್ರಜ್ಞ ಆರ್ಯ ವರ್ಧನ್ ಸಹ ಸ್ಪರ್ಧಿಗಳು ಒಬ್ಬರು…
ಅಂದ್ಹಾಗೆ ಇನ್ನೂ ಮೂರೇ ದಿನ ಕಳೆದಿರೋದು ಶೋ ಆರಂಭವಾಗಿ ಅಷ್ಟ್ರಲ್ಲೇ ಮೊದಲನೇ ವಾರದ ಎಲಿಮಿನೇಷನ್ ಗೆ ನಾಮಿನೇಷನ್ ಪ್ರಕ್ರಿಯೆ ನಡೆದಿದೆ.. ಹೌದು..! ಮೊದಲನೇ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು , ಯಾರು ಮೊದಲನೇ ವಾರವೇ ಮನೆಯಿಂದ ಹೊರ ಹೋಗಲಿದ್ದಾರೆ ಎಂಬ ಕ್ಯೂರಿಯಾಸಿಟಿಯಿದೆ..
ಅಂದ್ಹಾಗೆ ಎಮಿಲಿಮಿನೇಷನ್ ಗೆ 8 ಮಂದಿ ನಾಮಿನೇಟ್ ಆಗಿದ್ದು , ಈ 8 ಕಂಟೆಸ್ಟೆಂಟ್ ಗಳ ಪೈಕಿ ಸೋನು ಗೌಡ ಸಹ ಒಬ್ಬರಾಗಿದ್ದಾರೆ. ಆಟಗಾರರು ಪರಸ್ಪರರನ್ನು ನಾಮಿನೇಟ್ ಮಾಡಿದ್ದು ತಮ್ಮದೇ ಕಾರಣಗಳನ್ನ ನೀಡಿದ್ದಾರೆ.. ಸೋನು ಗೌಡ , ಆರ್ಯವರ್ಧನ್ , ಸ್ಪೂರ್ತಿ ಗೌಡ , ಜಯಶ್ರೀ ಆರಾಧ್ಯ, ನಂದಿನಿ, ಜಸ್ವಂತ್, ಕಿರಣ್ ಯೋಗೇಶ್ವರ್, ಅಕ್ಷತಾ ಕುಕ್ಕಿ ನಾಮಿನೇಟ್ ಆಗಿದ್ದಾರೆ.
ಇವರೆಲ್ಲಾ ಸದ್ಯ ಡೇಂಜರ್ ಝೋನ್ ನಲ್ಲಿದ್ದು ಇವರ ಪೈಕಿ ಮೊದಲನೇ ವಾರವೇ ಮನೆಯಿಂದ ಹೊರ ನಡೆಯುವ ಸ್ಪರ್ಧಿ ಯಾರೆಂಬುದನ್ನ ವೀಕೆಂಡ್ ನಲ್ಲಿ ತಿಳಿದುಕೊಳ್ಳಬೇಕಿದೆ..
ಸದ್ಯ ಸಾನಿಯಾ ಐಯ್ಯರ್, ಚೈತ್ರಾ ಹಳ್ಳಿಕೆರೆ, ರಾಕೇಶ್ ಅಡಿಗ, ಲೋಕೇಶ್, ಸೋಮಣ್ಣ ಮಾಚಿಮಾಡ, ಉದಯ್ ಸೂರ್ಯ, ರೂಪೇಶ್ ಶೆಟ್ಟಿ, ಅರ್ಜುನ್ ಸೇಫ್ ಆಗಿದ್ದಾರೆ..