Bigg Boss Kannada Ott ಸೀಸನ್ 1 ಆಗಸ್ಟ್ 6 ರಮದು ಗ್ರ್ಯಾಂಡ್ ಓಪನಿಂಗ್ ಮೂಲಕ ಆರಂಭವಾಗಿದ್ದು Voot ನಲ್ಲಿ ಪ್ರಸಾರವಾಗ್ತಿದೆ.. 24 / 7 ಒಟಿಟಿಯಲ್ಲಿ ಬಿಗ್ ಬಾಸ್ ನೋಡಬಹುದು.. ಈ ಬಾರಿ 16 ಕಂಟೆಸ್ಟೆಂಟ್ ಗಳು ಮನೆ ಪ್ರವೇಶ ಮಾಡಿದ್ದಾರೆ.. ಎಲ್ಲರದ್ದೂ ಭಿನ್ನ ಭಿನ್ನ ವ್ಯಕ್ತಿತ್ವ..
ಈ ಬಾರಿ ಸ್ಯಾಂಡಲ್ ವುಡ್ ನಟಿ ಮಾರಿಮುತ್ತು ಮೊಮ್ಮಗಳಾದ ನಟಿ , ಉದ್ಯಮಿ ಜಯಶ್ರೀ ಆರಾಧ್ಯ ಸಹ ಮನೆ ಪ್ರವೇಶ ಮಾಡಿದ್ದಾರೆ.. ಜಯಶ್ರೀ ದೊಡ್ಮನೆಯಲ್ಲಿ ತಮ್ಮ ಜೀವನದ ಕರಾಳ ಅನುಭವವನ್ನ ಬಿಚ್ಚಿಟ್ಟಿದ್ದಾರೆ.. ನಾನು ಯಾರು ಟಾಸ್ಕ್ ನಲ್ಲಿ ಸ್ಪರ್ಧಿಗಳು ತಮ್ಮ ಜೀವನದ ಕಥೆ ಬಗ್ಗೆ ಹೇಳಿದ ನಂತರ ಬಂದು ಲಿವಿಂಗ್ ಏರಿಯಾದಲ್ಲಿ ಕುಳಿತುಕೊಂಡಾಗ ಜಯಶ್ರೀ ತಮ್ಮ ಬಗ್ಗೆ ಮಾತನಾಡಿದ್ದಾರೆ. ಸೋಮಣ್ಣ ಮಾಚಿಮಾಡ
ರಾಕೇಶ್, ಸ್ಫೂರ್ತಿ ಗೌಡ, ಅರ್ಜುನ್ ಎಲ್ಲರೂ ಒಂದೆಡೆ ಕುಳಿತಿರುತ್ತಾರೆ.. ಅವರ ಜೊತೆಗೆ ಜಯಶ್ರೀ ಸಹ ರುತ್ತಾರೆ.. ಅರ್ಜುನ್ ಬಳಿ ಮಾತನಾಡುತ್ತಾ ನಿನ್ನ ಕಷ್ಟ ನನಗೂ ಅರ್ಥವಾಗುತ್ತದೆ. ನಾನು ಕೂಡ ಮದುವೆಯಾದ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದೆ ಎಂದಿದ್ದಾರೆ. ಮದುವೆಯಾಗಿ ಆತನಿಗೆ ಮಗು ಕೂಡ ಇತ್ತು ಆದರೂ ಅವರ ಜೊತೆ ಸಂಬಂಧದಲ್ಲಿ ಇದ್ದೆ. ಬಳಿಕ ಮನೆಯವರಿಗೆಲ್ಲ ಗೊತ್ತಾಯಿತು ದೊಡ್ಡ ಜಗಳ ಆಯಿತು. ತನ್ನ ಮತ್ತು ಸಂಬಂಧ ಹೊಂದಿದ ವ್ಯಕ್ತಿಯ ಮನೆಯವರಿಗೆ ವಿಷಯ ಗೊತ್ತಾದ ಬಳಿಕ ತುಂಬಾ ದೊಡ್ಡ ಸಮಸ್ಯೆ ಆಯಿತು. ಬಳಿಕ ನಾನು ಮನೆಬಿಟ್ಟು ಹೊರಬರಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.
ಮನೆಬಿಟ್ಟು ಬಂದ ನಂತರವೂ ಆತನ ಜೊತೆ ಇದ್ದೆ.. ಬಳಿಕ ಬ್ಯುಸಿನೆಸ್ ಮಾಡಲು ಪ್ರಾರಂಭಿಸಿದೆ ಎಂದಿದ್ದಾರೆ.. 50 ಲಕ್ಷ ಸಾಲ ಮಾಡಿ ಬ್ಯುಸಿನೆಸ್ ಶುರು ಮಾಡಿದ್ದು… ಸಾಲ ತೀರಿಸಲು ಪ್ರಾರಂಭದಲ್ಲಿ ತುಂಬಾ ಕಷ್ಟ ಪಟ್ಟಿದ್ದೆ ಬಳಿಕ ಯಶಸ್ಸು ಕಂಡಿದ್ದಾಗಿ ಹೇಳಿಕೊಂಡಿದ್ಧಾರೆ.. ಅಂದ್ಹಾಗೆ ಪುಟ್ಟರಾಜು ಲವರ್ ಆಫ್ ಶಶಿಕಲಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದ ಜಯಶ್ರಿಗೆ ನಟನೆಯಲ್ಲಿ ಯಶಸ್ಸು ಸಿಗಲಿಲ್ಲ..