Bigg Boss Kannada : ಮದುವೆಯಾದ ಬಿಗ್ ಬಾಸ್ ಮಾಜಿ ವಿನ್ನರ್ ಶಶಿಕುಮಾರ್
ಆಧುನಿಕ ಕೃಷಿಕ , ಬಿಗ್ ಬಾಸ್ ಕನ್ನಡ ಸೀಸನ್ 6 ರ ವಿನ್ನರ್ , ನಟ ಶಶಿಕುಮಾರ್ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಗುರುಹಿರಿಯರ ಸಮ್ಮುಖದಲ್ಲಿ ನಟ ಶಶಿ ಹಸಮಣೆ ಏರಿದ್ದಾರೆ. ಸ್ವಾತಿ ಎಂಬುವರನ್ನ ಶಶಿ ಕುಮಾರ್ ವರಿಸಿದ್ದು , ಇವರ ಮದುವೆ ಅದ್ಧೂರಿಯಾಗಿ ನೆರವೇರಿದೆ..
ಶಶಿ ಕುಮಾರ್ ಹಾಗೂ ಸ್ವಾತಿ ಅವರ ವಿವಾಹ ಮಹೋತ್ಸವ ಆಗಸ್ಟ್ 6 ಮತ್ತು 7 ರಂದು ಅದ್ಧೂರಿಯಾಗಿ ನೆರವೇರಿದೆ. ಬೆಂಗಳೂರಿನ ಕನ್ವೆನ್ಷನ್ ಹಾಲ್ ನಲ್ಲಿ ಈ ಜೋಡಿ ಮದುವೆಯಾಗಿದೆ..
ಬಿಗ್ ಬಾಸ್ ಶಶಿ ಮತ್ತು ಸ್ವಾತಿ ಅವರ ಮದುವೆ, ಗುರು ಹಿರಿಯರು ನಿಶ್ಚಿಯಿಸಿದ ಮದುವೆಯಾಗಿದೆ.. ಈ ಜೋಡಿಗೆ , ಆಪ್ತರು , ಅಭಿಮಾನಿಗಳು , ಸಂಬಂಧಿಕರು ವಿಷ್ ಮಾಡಿದ್ದಾರೆ..